ನವದೆಹಲಿ,ಫೆ.25-ಕಳಪೆ ಫಾರ್ಮ್‍ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿರುವ ಖ್ಯಾತ ಕ್ರಿಕೆಟ್ ಪಟು ಅಪ್ಪಟ ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಗೌತಮ್ ಗಂಭೀರ್ ಬಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ರಾಹುಲ್ ವಿರುದ್ಧ ಕನ್ನಡಿಗರೆ ಆಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಲವರು ಭಾರಿ ಟೀಕೆ ಮಾಡುತ್ತಿದ್ದಾರೆ.
ರಾಹುಲ್ ಬದಲಿಗೆ ಇತ್ತಿಚೆಗೆ ಉತ್ತಮ ಆಟ ಪ್ರದರ್ಶಿಸುತ್ತಿರುವ ಶುಭಮನ್ ಗಿಲ್‍ಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮಾಜಿ ಕ್ರಿಕೆಟಿಗರಾಗಿ ಇದೀಗ ಸಂಸದರಾಗಿರುವ ಖ್ಯಾತ ಕ್ರಿಕೆಟ್ ಪಟು ಗೌತಮ್ ಗಂಭೀರ್ ಅವರು ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಅಮೆರಿಕದ ಕೋಟ್ಯಪತಿ
ಒಬ್ಬ ಆಟಗಾರನ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡುವುದಿದ್ದರೆ ಅದನ್ನು ನೀವು ಮುಚ್ಚಿದ ಬಾಗಿಲುಗಳ ಹಿಂದೆ ಟೀಕಿಸಿ ಅದರ ಬದಲು ಕೇವಲ ಪ್ರಚಾರ ಪಡೆಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದು ಬೇಡ ಎಂದು ರಾಹುಲ್ ನಿಂದಕರನ್ನು ಗಂಭೀರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದ ಮೇಲೂ ಹಾರಾಟ ನಡೆಸಿದ್ದ ಚೀನಾ ಬೇಹುಗಾರಿಕೆ ಬಲೂನ್‍ಗಳು..!
ಕ್ರಿಕೆಟ್ ಸರಣಿ ನಡೆಯುತ್ತಿರುವಾಗ ಆಟಗಾರನ ಆಯ್ಕೆ ಮಾಡುವುದು ಬಿಡುವುದು ಆಯ್ಕೆಗಾರರ ಕೆಲಸ ಇಂತಹ ಕಾರ್ಯವನ್ನು ಕ್ರಿಕೆಟ್ ಪಂಡಿತರು ಮಾಡುವುದು ಬೇಡ ಎಂದು ಅವರು ಕಿವಿ ಹಿಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಭಾಗವಾಗಿ ಗಂಭೀರ್ ರಾಹುಲ್ ಜೊತೆ ಕೆಲಸ ಮಾಡಿದ್ದಾರೆ.
Gautam Gambhir, backs, KL Rahul, amid, poor, run, form,