Saturday, September 23, 2023
Homeಇದೀಗ ಬಂದ ಸುದ್ದಿ'ನೀವೇನು ಆಯ್ಕೆ ಮಂಡಳಿ ಸದಸ್ಯರೇ..?' : ಹರ್ಭಜನ್, ಗವಾಸ್ಕರ್ ಕಿಡಿ

‘ನೀವೇನು ಆಯ್ಕೆ ಮಂಡಳಿ ಸದಸ್ಯರೇ..?’ : ಹರ್ಭಜನ್, ಗವಾಸ್ಕರ್ ಕಿಡಿ

- Advertisement -

ನವದೆಹಲಿ, ಸೆ. 11- ಭಾರತದ ಆತಿಥ್ಯದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಬೆನ್ನಲ್ಲೇ ವಿದೇಶಿ ಮೂಲದ ಮಾಜಿ ಕ್ರಿಕೆಟಿಗರು ತಂಡದ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಸುನೀಲ್ಗವಾಸ್ಕಾರ್ ಹಾಗೂ ಹರ್ಭಜನ್ ಸಿಂಗ್ ಅವರು ನೀವೇನು ಆಯ್ಕೆದಾರರೇ ಎಂದು ಕಿಡಿಕಾರಿದ್ದಾರೆ.

ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲೇ ಏಕದಿನ ವಿಶ್ವಕಪ್ ಟೂರ್ನಿಯು ನಡೆಯುತ್ತಿದ್ದು ಸೆಪ್ಟೆಂಬರ್ 5 ರಂದು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಸೆಲೆಕ್ಟರ್ಸ್ಗಳು ರೋಹಿತ್ ಶರ್ಮಾ ಸಾರಥ್ಯದಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸಿತ್ತು.

- Advertisement -

ತಂಡ ಪ್ರಕಟಿಸಿದ ನಂತರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ಹಲವು ತಂಡಗಳ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಬಗ್ಗೆ ತಮ್ಮದೇ ಆದ ಹೇಳಿಕೆಗಳನ್ನು ನೀಡಿದ್ದಾರೆ, ಈ ಹೇಳಿಕೆಗಳ ವಿರುದ್ಧ ಭಜ್ಜಿ ಹಾಗೂ ಲಿಟ್ಲ್ಮಾಸ್ಟರ್ ಕಿಡಿಕಾರಿದ್ದಾರೆ.

ಬಿಜೆಪಿ ವಿಷಕಾರಿ ಹಾವಿದ್ದಂತೆ : ಉದಯನಿಧಿ ಸ್ಟಾಲಿನ್ ಮತ್ತೊಂದು ವಿವಾದ

ಕಿಡಿಕಾರಿದ ಲಿಟ್ಲ್ಮಾಸ್ಟರ್:
`ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜರು ಹೇಳುತ್ತಾರೆ ಈ ಆಟಗಾರನಿಗಿಂತ ಆತ ನಿಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತೆಂದು, ಅದೇ ರೀತಿ ಆಸ್ಟ್ರೇಲಿಯಾದ ಕ್ರಿಕೆಟ್ ವಿಶ್ಲೇಷಕರು ಈ ಆಟಗಾರನಿಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕಾಗಿತ್ತು, ಆತನನ್ನು ಆಯ್ಕೆ ಮಾಡದೆ ಇರುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಸಲಹೆ ನೀಡುತ್ತಾರೆ, ಈ ರೀತಿ ಹೇಳಿಕೆ ನೀಡುವವರ್ಯಾರೂ ನಮ್ಮ ತಂಡದ ಆಯ್ಕೆಗಾರರಲ್ಲ, ಈ ರೀತಿ ಹಲವು ಬಾರಿ ಹೇಳಿಕೆಯನ್ನು ನೀಡುತ್ತಾರೆ, ಅಲ್ಲದೆ ತಂಡದಲ್ಲಿ 3 ಹಾಗೂ 4ನೇ ಕ್ರಮಾಂಕದಲ್ಲಿ ಈ ಆಟಗಾರನೇ ಆಡಬೇಕೆಂಬುದನ್ನು ಕೂಡ ಅವರೇ ನಿರ್ಧರಿಸುತ್ತಾರೆ, ಆದರೆ ನಮಗೆ ಅವರ್ಯಾರ ಸಲಹೆಗಳು ಬೇಕಿಲ್ಲ’ ಎಂದು ಲಿಟ್ಲ್ಮಾಸ್ಟರ್ ಸುನೀಲ್ ಗವಾಸ್ಕಾರ್ ಅವರು ಕಾರ್ಯಕ್ರಮ ಒಂದರಲ್ಲಿ ಕಿಡಿಕಾರಿದ್ದಾರೆ.

ಮ್ಯಾಟ್ರಿಮೊನಿ ಗೆಳತಿ ನಂಬಿ 1ಕೋಟಿ ಹೂಡಿ ಕೈ ಸುಟ್ಟುಕೊಂಡ ಸಾಫ್ಟ್‌ವೇರ್ ಇಂಜಿನಿಯರ್

ಟರ್ಬನೇಟರ್ ಗರಂ:
ಅದೇ ಕಾರ್ಯಕ್ರಮದಲ್ಲಿದ್ದ ಹರ್ಭಜನ್ ಸಿಂಗ್, `ವಿದೇಶಿ ತಂಡಗಳಲ್ಲಿ ಸುದೀರ್ಘ ಕಾಲದ ನಂತರ ಆಡಿ ನಿವೃತ್ತಿ ಹೊಂದಿದ ಹಲವಾರು ಕ್ರಿಕೆಟ್ ದಿಗ್ಗಜರು ನಮ್ಮ ಟೀಮ್ ಇಂಡಿಯಾ ತಂಡದ ಆಟಗಾರರನ್ನು ಆಯ್ಕೆ ಮಾಡುತ್ತಾರೆ? ಇದು ನಿಜಕ್ಕೂ ಪವಾಡವೇ ಸರಿ. ಆದರೆ ನಮ್ಮ ಭಾರತದ ದಿಗ್ಗಜರನ್ನು ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡುವುದಕ್ಕೆ ಬಿಡುವುದೇ ಇಲ್ಲ, ಅಲ್ಲದೆ 3 ಮತ್ತು 4ನೇ ಕ್ರಮಾಂಕದಲ್ಲಿ ಇದೇ ಆಟಗಾರ ಆಡಬೇಕು, ಮೊದಲ ಓವರ್ ಅಥವಾ ಕೊನೆಯ ಓವರ್ನಲ್ಲೇ ಇದೇ ಬೌಲರ್ ಬೌಲ್ ಮಾಡಬೇಕೆಂದು ನಿರ್ಧರಿ ಸುತ್ತಾರೆ, ಇದು ಕೂಡ ಆಶ್ಚರ್ಯಕರ ಸಂಗತಿಯಾಗಿದೆ’ ಎಂದು ಭಜ್ಜಿ ಹೇಳಿದ್ದಾರೆ. ಅಕ್ಟೋಬರ್ 8ರಂದು ಆಸ್ಟ್ರೇಲಿಯಾದ ಪೈಪೊೀಟಿ ಎದುರಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಪಯಣ ಆರಂಭಿಸಲಿದೆ.

#Gavaskar, #Harbhajan, #question, #Iyer, #freshinjury, #WorldCup,

- Advertisement -
RELATED ARTICLES
- Advertisment -

Most Popular