ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಸೂರ್ಯಕಿರಣಗಳ ಚಮತ್ಕಾರ

Social Share

ಬೆಂಗಳೂರು,ಜ.15- ನಗರದ ಐತಿಹಾಸಿಕ ಗುಹಾಂತರ ದೇವಾಲಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕಾಂತಿ ಸಂಭಮಇಮ್ಮಡಿಗೊಂಡಿದೆ.ಸೂರ್ಯದೇವ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಲಿರುವ ಅದ್ಬುತ ಚಮತ್ಕಾರವನ್ನ ನೋಡಲು ಜನರು ಕಾದಿದ್ದಾರೆ.


ಪಥ ಬದಲಾವಣೆಗೂ ಮುನ್ನ ಸೂರ್ಯ ರಶ್ಮಿಯು ಶಿವಲಿಂಗವನ್ನ ಸ್ಪರ್ಶಿಸುವ ರೊಮಾಂಚಕಾರಿ ಕ್ಷಣವನ್ನು ನೋಡಲು ಜನರ ದಂಡೆ ಸೇರಿದೆ.ಈ ಬಾರಿ ಸಂಜೆ 5.20 ರಿಂದ 5.28ರ ಸಮಯದೊಳಗೆ ಶಿವನನ್ನ ಸೂರ್ಯ ರಶ್ಮಿ ಸ್ಪರ್ಶಿಸುವ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯಲಿದೆ.

ಪ್ರತಿವರ್ಷ ಸಂಕ್ರಾಂತಿಯಂದು ವಿಶೇಷ ನಡೆಯಲಿದೆ ಇದರಿಮದ ಈ ಸಾಲಿನಲ್ಲಿ ಮಳೆ ಬಳೆ ಸುಖ ಶಾಮತಿ ತಿಳಿಯುತ್ತದೆ ಎಂಬ ಪ್ರತೀತಿ ಇದೆ.ಈ ಭಾರಿ ದೇವಸ್ಥಾನದ ಒಳಗೆ ಯಾರಿಗೂ ಪ್ರವೇಶವಿರುವುದಿಲ್ಲ. ಹಾಗಾಗಿ ದೇಗುಲದ ಆಡಳಿತ ಮಂಡಳಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಎಲïಇಡಿ ಸ್ಕ್ರೀನ್ ಅಳವಡಿಕೆ ಮಾಡುವ ಮುಖಾಂತರ ಭಕ್ತಾಗಳು ಹೊರಭಾಗದಲ್ಲಿಯೇ ನಿಂತು ಸೂರ್ಯ ಶಿವನನ್ನ ನಮಿಸುವ ದೃಶ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ.

ದೇವರಿಗೆ ವಿಶೇಷವಾಗಿ ಬೆಳಿಗ್ಗೆಯಿಂದ ಕ್ಷೀರಾಭಿಷೇಕ ನಡೆಯುತ್ತಿದ್ದು ಸೂರ್ಯ ಶಿವನನ್ನ ಸ್ಪರ್ಶಿಸಿದ ನಂತರ ಶಿವನಿಗೆ ಮತ್ತೆ ಅಭಿಷೇಕ ಮಾಡಿ ಅಲಂಕಾರ ಮಾಡಿ ಸಂಜೆ 6 ಗಂಟೆಯ ನಂತರ ಭಕ್ತರಿಗೆ À ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.

#GavigangadharaTemple,

Articles You Might Like

Share This Article