ಗಾಯಕ್‍ವಾಡ್ ಅರ್ಧಶತಕ, `ಮಹಾ’ ಹೋರಾಟ

m v k ccಮೈಸೂರು, ನ.30- ದಿಢೀರ ಕುಸಿತ ಕಂಡ ಮಹಾರಾಷ್ಟ್ರ ತಂಡಕ್ಕೆ ಆರ್.ಡಿ.ಗಾಯಕ್‍ವಾಡ್‍ರ ಅರ್ಧಶತಕ ಚೇತರಿಕೆ ನೀಡಿದ್ದೆ ಅಲ್ಲದೆ ಕರ್ನಾಟಕ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 2ನೆ ದಿನದಾಟಕ್ಕೆ 48 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮಹಾರಾಷ್ಟ್ರ ತಂಡವು ಇಂದು ಆರಂಭದಿಂದಲೂ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ವಿನಯ್‍ಕುಮಾರ್ ಸಾರಥ್ಯದ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಎಸ್.ಎಸ್.ಬಚ್ಚಾವ್ ಹಾಗೂ ಗಾಯಕ್‍ವಾಡ್ ಅವರು ನರಸಿಂಹ ರಾಜ ಒಡೆಯರ್ ಮೈದಾನದ ಸುತ್ತಲೂ ಬೌಂಡರಿಗಳ ಸುರಿಮಳೆಗೈಯ್ಯುವ ಮೂಲಕ ಮಹಾರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು.

ಈ ಜೋಡಿಯು 4ನೆ ವಿಕೆಟ್‍ಗೆ 60 ರನ್‍ಗಳ ಜೊತೆಯಾಟವನ್ನು ನೀಡಿದ್ದಾಗ ರಾಜ್ಯದ ಸ್ಪಿನ್ನರ್ ಶ್ರೇಯಾಸ್ ಗೋಪಾಲ್ ಅವರು ಎಸೆದ ಚೆಂಡಿನ ಗತಿಯನ್ನು ಅರಿಯದ ಬಚ್ಚಾವ್À (28 ರನ್, 5 ಬೌಂಡರಿ) ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಬಚ್ಚಾವ್ ಬೇಸರದಿಂದಲೇ ಡಗ್‍ಔಟ್‍ನತ್ತ ಹೆಜ್ಜೆ ಹಾಕಿದ ನಂತರ ಕ್ರೀಸ್‍ಗೆ ಇಳಿದ ವಿಕೆಟ್ ಕೀಪರ್ ಮೋಟ್ವಾನಿ (2 ರನ್), ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯದೆ ಪವನ್ ದೇಶಪಾಂಡೆಯ ಎಸೆತದಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಮಹಾರಾಷ್ಟ್ರ 98 ರನ್‍ಗಳಿಗೆ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟಿಂಗ್ ಮಾಡಲು ಬಂದ ನಾಯಕ ರಾಹುಲ್ ತ್ರಿಪಾಠಿ (8 ರನ್, 1 ಬೌಂಡರಿ) ಆರಂಭದಲ್ಲೇ 1 ಬೌಂಡರಿ ಬಾರಿಸುವ ಮೂಲಕ ಆಕ್ರಮಣಕಾರಿ ಆಟಕ್ಕೆ ಮುಂದಾದರಾದರೂ ಶ್ರೇಯಾಸ್‍ಗೋಪಾಲ್‍ರ ಬೌಲಿಂಗ್‍ನಲ್ಲಿ ಕುನ್ನಿನ್ ಅಬ್ಬಾಸ್ ಹಿಡಿದ ಕ್ಯಾಚ್‍ಗೆ ಬಲಿಯಾದರು.

ಗಾಯಕ್‍ವಾಡ್- ಸಾಹಿಕ್ ಭರ್ಜರಿ ಬ್ಯಾಟಿಂಗ್:
ನಾಯಕ ರಾಹುಲ್ ತ್ರಿಪಾಠಿ ಔಟಾಗುತ್ತಿದ್ದಂತೆ ಆರ್ಧಶತಕ ಬಾರಿಸಿದ್ದ ಗಾಯಕ್‍ವಾಡ್‍ರನ್ನು ಕೂಡಿಕೊಂಡ ಸಾಹಿಕ್ 7 ವಿಕೆಟ್‍ಗೆ ಉತ್ತಮ ಜೊತೆಯಾಟವನ್ನು ನೀಡುವ ಮೂಲಕ ಮುಳುಗುತ್ತಿದ್ದ ತಂಡಕ್ಕೆ ತುಸು ಚೇತರಿಕೆ ನೀಡಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಮಹಾರಾಷ್ಟ್ರ 6 ವಿಕೆಟ್‍ಗಳನ್ನು ಕಳೆದುಕೊಂಡು 204 ರನ್‍ಗಳನ್ನು ಗಳಿಸಿದ್ದು 7 ಬೌಂಡರಿ ಹಾಗೂ 2 ಸಿಕ್ಸರ್‍ಗಳೊಂದಿಗೆ 86 ರನ್‍ಗಳನ್ನು ಗಳಿಸಿದ್ದ ಗಾಯಕ್‍ವಾಡ್ ಹಾಗೂ 2 ಬೌಂಡರಿ ಗಳಿಸಿದ್ದ ಸಾಹಿಕ್ 43 ರನ್‍ಗಳನ್ನು ಗಳಿಸಿ ಕ್ರೀಸ್‍ನಲ್ಲಿದ್ದರು. ಈ ಋತುವಿನಲ್ಲಿ ಕರ್ನಾಟಕ ಆಡಿರುವ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು ಮಹಾರಾಷ್ಟ್ರ ವಿರುದ್ಧದ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ.