ಫ್ಲಾಯ್ಡ್ ಹತ್ಯೆ ಪ್ರಕರಣದ ವಿಚಾರಣೆಗೆ ನೇಮಕಾವಾದ ಬಹುತೇಕ ಜ್ಯೂರಿಗಳು ಶ್ವೇತವರ್ಣೀಯರು

Social Share

ಸೇಂಟ್‍ಪಾಲ್(ಅಮೆರಿಕ),ಜ.21-ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಫೆಡರಲ್ ವಿಚಾರಣೆಗೆಂದು ನೇಮಿಸಲಾದ 18 ಮಂದಿ ಜ್ಯೂರಿಗಳ ತಂಡದಲ್ಲಿ ಹೆಚ್ಚಿನ ಶ್ವೇತ ವರ್ಣೀಯರನ್ನು ಆಯ್ಕೆ ಮಾಡಲಾಗಿದೆ. ಈ ಜ್ಯೂರಿಗಳನ್ನು ಟೌ ತಾವೋ, ಥಾಮಸ್ ಲೇನ್ ಮತ್ತು ಜೆ.ಕುಯೆಂಗ್ ಈ ಅಕಾರಿಗಳ ವಿರುದ್ಧದ ತನಿಖೆಗಾಗಿ ನೇಮಿಸಲಾಗಿದೆ. 12 ಜ್ಯೂರರ್‍ಗಳ ಪೈಕಿ ಓರ್ವ ಏಷ್ಯನ್ ಮೂಲದವರೂ ಸೇರಿದ್ದಾರೆ.
ಯಾವುದೇ ಪರ್ಯಾಯ ವ್ಯಕ್ತಿಗಳ ಅಗತ್ಯವಿಲ್ಲದಿದ್ದರೆ ಏಷ್ಯನ್ ಮೂಲದ ಎರಡನೇ ವ್ಯಕ್ತಿಯು ಆರು ಬದಲಿ ಜ್ಯೂರಿಗಳಲ್ಲಿರಲಿದ್ದಾರೆ. ಉಳಿದೆಲ್ಲರೂ ಶ್ವೇತ ವರ್ಣೀಯರಾಗಿದ್ದಾರೆ. ನ್ಯಾಯಾಲಯವು ಜನಾಂಗೀಯ ಮಾಹಿತಿ ನೀಡಲು ನಿರಾಕರಿಸಿದೆ.

Articles You Might Like

Share This Article