ಬರ್ಲಿನ್, ಸೆ 16- ಮುಂದಿನ ವರ್ಷ ರಷ್ಯಾದಿಂದ ತೈಲದ ಮೇಲಿನ ನಿರ್ಬಂಧ ಜಾರಿಗೆ ಬರುವ ಮೊದಲೇ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜರ್ಮನಿ ತನ್ನ ದೇಶದಲ್ಲಿನ ಮೂರು ರಷ್ಯಾದ ಒಡೆತನದ ಸಂಸ್ಕರಣಾಗಾರವನ್ನು ನಿಯಂತ್ರಣಕ್ಕೆ ಪಡೆಯುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರೋಸ್ನೆಫ್ ಡಿಚ್‍ಲ್ಯಂಡ್ ಜಿಎಂಬಿಹೆಚ್ ಮತ್ತು ಆರ್‍ಎನ್ ರಿಫೈನಿಂಗ್ ಮತ್ತು ಮಾರ್ಕೆಟಿಂಗ್ ಜಿಎಂಬಿಹೆಚ್ ನನ್ನು ಜರ್ಮನಿಯ ಫೆಡರಲ್ ನೆಟ್ವರ್ಕ್ ಏಜೆನ್ಸಿಯ ಆಡಳಿತದ ಅಡಿಯಲ್ಲಿ ತನ್ನ ನಿಯಂತ್ರಣಕ್ಕೆ ತಗೆದುಕೊಲ್ಲಲಾಗುವುದು ಎಂದು ಆರ್ಥಿಕ ಸಚಿವಾಲಯ ತಿಳಿಸಿದ್ದಾರೆ.
ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ದೇಶದ ಪೂರ್ವ ಮತ್ತು ದಕ್ಷಿಣದಲ್ಲಿ ನೆಲೆಗೊಂಡಿರುವ ಈ ಕಂಪನಿಯ ಶೇರು ಹೆಚ್ಚಿಸಿಕೊಳಲು ಮುಂದಾಗಿದೆ ಪ್ರತಿ ತಿಂಗಳು ರಷ್ಯಾದಿಂದ 100 ಮಿಲಿಯನ್ ಯುರೋ (ಡಾಲರ್) ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಜನವರಿ 1, 2023 ರಂದು ಜಾರಿಯಾಗುತ್ತಿರುವ ನಿರ್ಬಂಧದ ಹೊರತಾಗಿಯೂ ರಷ್ಯಾದ ತೈಲದ ಆಮದನ್ನು ಕೊನೆಗೊಳಿಸುವ ಉದ್ದೇಶವಿಲ್ಲ ಎಂದು ರೋಸ್ನೆಫ್ಟ ಈ ಹಿಂದೆ ಸ್ಪಷ್ಟಪಡಿಸಿತ್ತು.
ಸುಮಾರು 12,000 ಜನರಿಗೆ ಉದ್ಯೋಗ ನೀಡುವ ಮತ್ತು ಬರ್ಲಿನ್ ಸೇರಿದಂತೆ ಈಶಾನ್ಯ ಜರ್ಮನಿಯ ಹೆಚ್ಚಿನ ಭಾಗಗಳಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸುವ ಪಿಸಿಕೆ ಸಂಸ್ಕರಣಾಗಾರದ ಭವಿಷ್ಯಕ್ಕಾಗಿ ದೀರ್ಘಾವಯ ಯೋಜನೆಯನ್ನು ಘೋಷಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ