ಬಿಗ್ ಬ್ರೇಕಿಂಗ್ : ಘಾನಾದಲ್ಲಿ ಮತ್ತೊಂದು ಮಾರಣಾಂತಿಕ ಸೋಂಕು ಪತ್ತೆ..!

Social Share

ದಾಕರ್, ಜು.18- ಈಗಾಗಲೇ ಕೊರೊನಾದಿಂದ ಜಗತ್ತು ತತ್ತರಿಸಿದ್ದುಘಿ, ಮಾರಣಾಂತಿಕ ಎಬೋಲಾ ರೋಗ ಲಕ್ಷಣಗಳನ್ನು ಹೊಂದಿರುವ ಮಾರ್‍ಬುರ್ಗ್ ಸೋಂಕು ಪತ್ತೆಯಾಗಿದ್ದು, ಘಾನದಲ್ಲಿ ಇಬ್ಬರನ್ನು ಬಲಿ ಪಡೆದಿದೆ.

ವೇಗವಾಗಿ ಹರಡುವ ಈ ಸೋಂಕು ತಗುಲಿ ಈ ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದುಘಿ, ಅವರ ಮಾದರಿಗಳ ಪರೀಕ್ಷೆಯಲ್ಲಿ ಮಾರ್‍ಬುರ್ಗ್ ಸೋಂಕಿರುವುದು ಸ್ಪಷ್ಟವಾಗಿದೆ. ಜುಲೈ 10ರಂದೆ ಸೋಂಕು ಪತ್ತೆಯಾಗಿತ್ತುಘಿ. ಆದರೆ ಪರೀಕ್ಷಾ ಫಲಿತಾಂಶವನ್ನು ಸೆಹಗಲ್‍ನ ಪ್ರಯೋಗಾಲಯದಲ್ಲಿ ಮರು ದೃಢಿಕರಣ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಖಚಿತ ಪಡಿಸಿದೆ.

ದಕ್ಷಿಣ ಘಾನಾ ಭಾಗದ ಅಶಾಂತಿ ವಲಯದಲ್ಲಿ ದಾಕರ್‍ನ ಪಾಸ್ಟ್ಯೊರ್ ಸಂಸ್ಥೆಯಲ್ಲಿ ಸೋಂಕು ಪತ್ತೆಯಾದ ಇಬ್ಬರು ಸಾವಿಗೆ ಮುನ್ನಾ ಡೈರೆರಿಯಾ, ಜ್ವರ, ವಾಂತಿ, ವಾಕರಿಕೆ ರೋಗ ಲಕ್ಷಣಗಳನ್ನು ಅನುಭವಿಸಿದ್ದರು ಎಂದು ಹೇಳಲಾಗಿದೆ.

ಘಾನಾ ಆರೋಗ್ಯ ಸೇವೆಯ ಹೇಳಿಕೆ ಪ್ರಕಾರ, ಸೋಂಕು ಪತ್ತೆಯಾದ ಕ್ಷಣದಿಂದ ಅದರ ಹರಡುವಿಕೆಯನ್ನು ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತ್ಯೇಕ ವಾಸ (ಐಸೋಲೆಷನ್) ವ್ಯವಸ್ಥೆಗೊಳಿಸಲಾಗಿದೆ. ಇಬ್ಬರನ್ನು ಹೊರತು ಪಡಿಸಿ ಉಳಿದವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ವರದಿಯಾಗಿದೆ.

ಪಶ್ಚಿಮ ಆಫ್ರಿಕಾದಲ್ಲಿ ಇದು ಎರಡನೇ ಸೋಂಕು ಹರಡುವಿಕೆಯಾಗಿದೆ. ಇದಕ್ಕೂ ಮೊದಲು ಕಳೆದ ವರ್ಷ ಗುನೇರಿಯಾ ಭಾಗದಲ್ಲಿ ಸೋಂಕು ಪತ್ತೆಯಾಗಿತ್ತುಘಿ. ಅನಂತರ ಯಾವುದೇ ಪ್ರಕರಣಗಳು ಕಂಡು ಬಂದಿರಲಿಲ್ಲಘಿ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಮಶ್ಟಿದಿಸೋ ಮೊಯಿಟಿ ಅವರ ಪ್ರಕಾರ ಸೋಂಕಿನ ಸಂಭವನೀಯ ಹರಡುವಿಕೆಯನ್ನು ತಡೆಯಲು ಘಾನ ಆಡಳಿತ ತೆಗೆದುಕೊಂಡ ಕ್ರಮಗಳ ಸಾಕಾಗಲಿದೆ. ಸೋಂಕನ್ನು ಸುಲಭವಾಗಿ ತೊಡೆದು ಹಾಕಬಹುದು ಎಂದಿದ್ದಾರೆ.

Articles You Might Like

Share This Article