ಮನುಷ್ಯ ಸತ್ತ ನಂತರ ಆತ್ಮ ಏನಾಗುತ್ತಾನೆ..!? ಬೆಚ್ಚಿಬೀಳಿಸುವ ಕಥೆ ಹೇಳಿದ ಘೋಸ್ಟ್ ಹಂಟರ್ಸ್

ಮನುಷ್ಯ ಸತ್ತ ನಂತರ ಏನಾಗುತ್ತಾನೆ..? ಮರಣದ ನಂತರ ದೇಹಕ್ಕಷ್ಟೇ ಅಂತ್ಯ ಆದರೇ ಆತ್ಮಕ್ಕೆ ಸಾವಿಲ್ಲ ಎಂಬ ಉಲ್ಲೇಖವಿದೆಯಲ್ಲ..? ಇಂತಹ ಪ್ರಶ್ನೇಗಳು ತಲೆಮಾರುಗಳಿಂದ ಎಲ್ಲರನ್ನೂ ಕಾಡುತ್ತಲೇ ಬಂದಿದೆ. ಇದಕ್ಕೆ ಉತ್ತರ ಅಸ್ಪಷ್ಟ, ಎಲ್ಲವೂ ನಿಗೂಢ.ಕೆಲವು ಪಂಡಿತರ ಪ್ರಕಾರ ಸತ್ತ ನಂತರ ಆತ್ಮ ‘ಮೋಕ್ಷ’ ಹೊಂದುತ್ತದೆ ಎಂದು ಹೇಳಿದರೆ ಇನ್ನು ಕೆಲವರು ಆತ್ಮ ‘ಸ್ಮರ್ಗಕ್ಕೆ’ ಇಲ್ಲವೇ ‘ನರಕಕ್ಕೆ’ ಹೋಗುತ್ತದೆ ಎನ್ನುತ್ತಾರೆ.

ಅಷ್ಟೇ ಅಲ್ಲ ಸತ್ತಮೇಲೆ ನಮ್ಮ ಆತ್ಮವನ್ನು ಕರೆದೊಯ್ಯಲು ಯಮ ಕಿಂಕರರು ಬರುತ್ತಾರೆ ಎನ್ನುವುದು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದನ್ನು ನಾವು ಓದಿರುತ್ತೇವೆ, ಕೇಳಿರುತ್ತೇವೆ.ಆಸ್ತಿಕರಿಗೆ ಅವೆಲ್ಲಾ ನಿಜ ಅನಿಸಿದರೆ, ನಾಸ್ತಿಕರಿಗೆ ಅದು ಇರಬಹುದೇನೋ ಎನ್ನುವ ಗೊಂದಲ ಮನಸ್ಥಿತಿ. ಇನ್ನೂ ಕೆಲವು ಸುತಾರಾಂ ನಂಬುವುದೇ ಇಲ್ಲಾ ಬಿಡಿ. ಇದೆಲ್ಲದರ ನಡುವೆ ನಿಜವಾಗಿಯು ದೆವ್ವ, ಪೀಡಿ, ಪಿಶಾಚಿ ಎಂಬ ನೆಗೆಟೀವ್ ಅಂಶಗಳು ಇದೆಯಾ…!!? ಎಂಬ ಪ್ರಶ್ನೆ ನಮ್ಮನ್ನೂ ಕಾಡುತ್ತದೆ.

ಇದರ ಜೊತೆಗೆ ಮಾಟ-ಮಂತ್ರದಂತಹ ಪ್ರಯೋಗಗಳು ಇಂದಿಗೂ ಇದೆಯೇ ಎಂಬ ನಮ್ಮ ನಿಮ್ಮೆಲ್ಲರ ಪ್ರಶ್ನೆಗೆ ಕೆಲವು ಸಂಗತಿಗಳು ನಿಮ್ಮನ್ನು ನಂಬುವ ಹಾಗೇ ಮಾಡುತ್ತವೆ. ಅದಕ್ಕೆ ಪೂರಕವಾಗಿ ಕೆಲವು ಪ್ರದೇಶದಲ್ಲಿರುವ ದೇವಸ್ಥಾನಗಳಾಗಿರಬಹುದು, ಇಲ್ಲವೇ ಹಳೆಯ ಕಾಲದಲ್ಲಿ ಬರೆದಿರುವ ತಾಳೆ ಗ್ರಂಥಗಳು ಇಲ್ಲವೇ ಅಲ್ಲಿನ ಆಚಾರ ವಿಚಾರ ನಂಬಿಕೆಗಳು, ಪಾಳು ಬಿದ್ದ ಮನೆಯಲ್ಲಿ ಪ್ರೇತಾತ್ಮ ಒಂದು ಸೇರಿಕೊಂಡಿದೆ ಎನ್ನುವ ಮಾತುಗಳು ಇಂತಹ ಹತ್ತು ಹಲವು ಸಂಗತಿಗಳು ಅಘೋಚರ ಶಕ್ತಿಯ ಇರುವಿಕೆಯ ಬಗ್ಗೆ ಪುಷ್ಟಿ ನೀಡುತ್ತವೆ.

ಹಾಗಾದ್ರೆ ನಿಜವಾಗಿಯೂ ಸ್ವರ್ಗ ನರಕ, ಯಮ, ಚಿತ್ರಗುಪ್ತ ಮೋಕ್ಷ, ಆತ್ಮ, ಪ್ರೇತಾತ್ಮ ಇವೆಲ್ಲ ಇದೆಯೇ ಎಂದು ಪ್ರಶ್ನೇ ಮಾಡುವವರಿಗೆ ಇದೆ ಎನ್ನುತ್ತಾರೆ Traps Ghost Hunters ತಂಡದ ಮುಖ್ಯಸ್ಥ ಇಮ್ರಾನ್ ಹಾಗೂ ಅದೇ ತಂಡದ ಮತ್ತೊಬ್ಬ ಸದಸ್ಯ ಗಣೇಶ್..!? ಆ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ವಿಡಿಯೋವನ್ನು ಮಿಸ್ ಮಾಡದೇ ನೋಡಿ.
-ಭಾಸ್ಕರ್ ತೋಟಗರೆ

Sri Raghav

Admin