ನವದೆಹಲಿ, ಸೆ. 26- ಕಾಂಗ್ರೆಸ್ ತೊರೆದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಅಂತಿಮವಾಗಿ ತಮ್ಮ ನೂತನ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದು, ಇಂದು ಶ್ರೀನಗರದಲ್ಲಿ ಪಕ್ಷದ ಬಾವುಟವನ್ನು ಅನಾವರಣ ಮಾಡಿದ್ದಾರೆ.
ನೂತನ ಪಕ್ಷಕ್ಕೆ ಡೆಮಾಕ್ರೆಟಿಕ್ ಅಜಾದ್ ಪಕ್ಷ ಎಂದು ನಾಮಕರಣ ಮಾಡಲಾಗಿದೆ. ನೀಲಿ, ಬಿಳಿ ಮತ್ತು ಹಳದಿ ಬಣ್ಣಗಳ ಬಾವುಟವನ್ನು ಅನಾವರಣ ಮಾಡಲಾಗಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಅಜಾದ್ ಕಾಂಗ್ರೆಸ್ನಿಂದ ಹೊರ ಬಂದ ನಂತರ ತಮ್ಮದೇ ನೂತನ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರು.
ಅದರಂತೆ ಇಂದು ಸುದ್ದಿಗೋಷ್ಠಿಯಲ್ಲಿ ಪಕ್ಷದ ಹೆಸರನ್ನು ಪ್ರಕಟಿಸಿದ್ದಾರೆ. ನಮ್ಮದು ಪ್ರಜಾಸತ್ತಾತ್ಮಕವಾದ ಪಕ್ಷವಾಗಿದ್ದು ಸ್ವತಂತ್ರ ಚಿಂತನೆ ಹಾಗೂ ಸಿದ್ಧಾಂತಗಳನ್ನು ಹೊಂದಿದೆ. ನಮ್ಮ ಪಕ್ಷಕ್ಕೆ ಹೆಸರು ಸೂಚಿಸುವ ಹಕ್ಕನ್ನು ಪ್ರಜೆಗಳಿಗೆ ಬಿಡಲಾಗಿತ್ತು.
ಸಾರ್ವಜನಿಕರು ಉರ್ದು, ಸಂಸ್ಕøತ, ಹಿಂದಿ ಭಾಷೆಗಳಲ್ಲಿ ಸುಮಾರು 1500 ಹೆಸರುಗಳನ್ನು ಕಳುಹಿಸಿದ್ದರು. ಹಿಂದಿ ಹಾಗೂ ಉರ್ದುವಿನ ಮಿಶ್ರಣವಾಗಿರುವ ಹಿಂದೂಸ್ತಾನಿ ಎಂಬ ಹೆಸರುಗಳು ಬಂದಿದ್ದವು. ನಾವು ಶಾಂತಿ ಹಾಗೂ ಸ್ವತಂತ್ರವಾಗಿರಬೇಕೆಂದು ಬಯಸುವುದರಿಂದ ನಮ್ಮ ಪಕ್ಷಕ್ಕೆ ಪ್ರಜಾಸತ್ತಾತ್ಮಕತೆಯನ್ನು ಬಿಂಬಿಸುವ ಹೆಸರನ್ನು ಇಡಲಾಗಿದೆ.
ನಮ್ಮ ಪಕ್ಷವು ಯಾವುದೇ ಪ್ರಾಂತ್ಯ ಅಥವಾ ಜಾತಿಗೆ ಸೀಮಿತವಾಗಿಲ್ಲ. ಹೊಸ ರಾಜಕೀಯ ಆಲೋಚನೆಯೊಂದಿಗೆ ಪಕ್ಷ ಪಕ್ಷ ಕಟ್ಟುತ್ತೇವೆ ಎಂದಿದ್ದಾರೆ.ಮಹಾತ್ಮ ಗಾಂಧಿಜಿಯ ಆಲೋಚನೆಯನ್ನು ನಮ್ಮ ಪಕ್ಷ ಬಿಂಬಿಸಲಿದೆ. ಯಾವುದೇ ರಾಷ್ಟ್ರೀಯ ಅಥವಾ ಸ್ಥಳೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಳೆದ 9 ವರ್ಷಗಳಿಂದ ರಾಹುಲ್ಗಾಂ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ವನಾಶವಾಗುವ ಹಾದಿ ಹಿಡಿದಿದೆ. ಹಾಗಾಗಿ ನಾನು ಕಾಂಗ್ರೆಸ್ ತೊರೆಯಬೇಕಾಯಿತು. ಆಗಸ್ಟ್ 26ರಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಹೊರ ಬಂದಿದ್ದ ಗುಲಾಂ ನಬಿ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಗಳಲ್ಲಿ ಸ್ರ್ಪಸಲು ಅಜಾದ್ ಚಿಂತನೆ ನಡೆಸಿದ್ದಾರೆ.