ಮಂಗಳೂರು : ಯುವತಿ ಮೇಲೆ 6 ಮಂದಿ ಮೀನುಗಾರರಿಂದ ಗ್ಯಾಂಗ್‌ರೇಪ್‌ ..!

Spread the love

Rape-Gang-Rape

ಮಂಗಳೂರು,ನ.27-ಯುವತಿ ಮೇಲೆ ಮೀನುಗಾರರ ಗುಂಪೊಂದು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾರದ ಹಿಂದೆಯೇ ಘಟನೆ ನಡೆದಿದ್ದರೂ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಯುವತಿ ಮೇಲೆ ಆರು ಮಂದಿ ಮೀನುಗಾರರು ತೋಟ ಬೆಂಗ್ರೆ ಎಂಬಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಖಚಿತಪಡಿಸಿದ್ದಾರೆ.

ವಾರದ ಹಿಂದೆ ಈ ಘಟನೆ ನಡೆದಿದ್ದರೂ ಕೂಡ ಮಾಹಿತಿ ಪಡೆಯುವಾಗ ವಿಳಂಬವಾಯಿತು. ಯುವತಿಯ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಆರು ಮಂದಿ ಶಂಕಿತ ಆರೋಪಿಗಳನ್ನು ವಶಪಡಿಸಲಾಗಿದ್ದು, ಶೀಘ್ರವೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಶಂಕಿತರಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರು ಕೂಡ ಇದ್ದಾರೆ. ಎಲ್ಲರೂ ತೋಟ ಬೆಂಗ್ರೆಯ ಮೀನುಗಾರರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಯುವತಿ ತನ್ನ ಮತ್ತೊಬ್ಬ ಸ್ನೇಹಿತೆ ಜೊತೆ ಇದ್ದಳು. ಈ ಸಂದರ್ಭದಲ್ಲಿ ಆರು ಮಂದಿ ದುಷ್ಕರ್ಮಿಗಳ ಗುಂಪು ನಗರದ ಸೂಕ್ಷ್ಮ ಪ್ರದೇಶದಲ್ಲಿ ಆಕೆಯನ್ನು ಕರೆದೊಯ್ದು ಅತ್ಯಾಚಾರಸಗಿದ್ದಾರೆ.  ಘಟನೆಗೆ ಯಾವುದೇ ಅಂತರ ಧರ್ಮೀಯ ಕಲಹ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದು, ಯುವತಿ ಮತ್ತು ಶಂಕಿತರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Sri Raghav

Admin