ಏಕದಿನ ಸರಣಿಯಲ್ಲಿ ಮ್ಯಾಕ್ಸ್ ವೆಲ್ ಆಡ್ತಾರೆ

Social Share

ನವದೆಹಲಿ, ಫೆ. 21- ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ಸ್ಟಾರ್ ಅಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‍ವೆಲ್ ಅವರು ಫಿಟ್‍ಆಗಿದ್ದರೆ ಭಾರತ ವಿರುದ್ಧದ ಏಕದಿನ ಸರಣಿಯಿಂದಲೇ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳುತ್ತಾರೆ ಎಂದು ಮಾಜಿ ಆಟಗಾರ, ಆಸೀಸ್ ತಂಡದ ಮುಖ್ಯ ತರಬೇತುದಾರ ಆ್ಯಂಡ್ರೂ ಮೆಕ್‍ಡೊನಾಲ್ಡ್ ತಿಳಿಸಿದ್ದಾರೆ.

ಟಿ 20 ವಿಶ್ವಕಪ್ ಟೂರ್ನಿಯ ನಂತರ ನಡೆದ ಸ್ನೇಹಿತನ ಹುಟ್ಟುಹಬ್ಬದ ವೇಳೆ ಟೆನ್ನಿಸ್ ಮೈದಾನದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದ ಮ್ಯಾಕ್ಸ್‍ವೆಲ್, ಸುದೀರ್ಘ ಕಾಲದವರೆಗೆ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು. ಈ ಕಾರಣದಿಂದಲೇ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಿಂದಲೂ ಮ್ಯಾಕ್ಸಿ ದೂರ ಉಳಿದಿದ್ದರು.

BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ

ಮ್ಯಾಕ್ಸ್‍ವೆಲ್ ಈಗ ಪ್ರೀಮಿಯರ್ ಕ್ರಿಕೆಟ್ ಲೀಗ್‍ನಲ್ಲಿ ಶೆಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಲು ಬೇಕಾದ ಎಲ್ಲ ಫಿಟ್ನೆಸ್ ಅನ್ನು ಪಡೆದಿದ್ದಾರೆ ಎಂದು ಮೆಕ್‍ಡೊನಾಲ್ಡ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಮ್ಯಾಕ್ಸ್‍ವೆಲ್‍ಗೆ ಹೆಚ್ಚಿನ ಹೊರೆ ಬೀಳಬಾರದು ಎಂಬ ದೃಷ್ಟಿಯಿಂದ ಬೌಲಿಂಗ್ ಮಾಡುವುದನ್ನು ನಿಲ್ಲಿಸಿದ್ದು, ಬ್ಯಾಟಿಂಗ್ ಹಾಗೂ ಕ್ಷೇತ್ರ ರಕ್ಷಣೆಯತ್ತ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.

ಮ್ಯಾಕ್ಸ್‍ವೆಲ್ ಅವರು ಚೇತರಿಸಿಕೊಂಡು ಭಾರತ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಆಡಲು ಫಿಟ್ನೆಸ್ ಹೊಂದಿದರೆ ಉಳಿದ ಸಂಗತಿಗಳ ಕುರಿತು ನಂತರ ಚಿಂತಿಸುತ್ತೇವೆ ಎಂದು ಅವರು ತಿಳಿಸಿದರು.

ನಿನ್ನೆಯಷ್ಟೇ ಫಾಕ್ಸ್ ಸ್ಪೋಟ್ರ್ಸ್‍ನೊಂದಿಗೆ ಮಾತನಾಡಿದ ಮ್ಯಾಕ್ಸ್‍ವೆಲ್, ಕಳೆದ 3 ತಿಂಗಳಿಂದ ಫಿಟ್ನೆಸ್ ಹೊಂದಲು ಜಿಮ್, ಪುನಶ್ಚೇತನ ಕೇಂದ್ರಗಳಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಈಗ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಆಡಲು ಶಕ್ತವಾಗಿರುವುದರಿಂದ ಫಿಟ್ನೆಸ್ ಪಡೆಯಲು ಹೆಚ್ಚಿನ ಶ್ರಮ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಏ.1ರಿಂದಲೇ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

ಆರ್‍ಸಿಬಿಗೆ ಗುಡ್‍ನ್ಯೂಸ್:
ಗಾಯದ ಸಮಸ್ಯೆಗೆ ಒಳಗಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಅಲ್ ರೌಂಡರ್ ಗ್ಲೆನ್ ಮ್ಯಾಕ್ಸ್‍ವೆಲ್ ಫಿಟ್ನೆಸ್ ಹೊಂದಿ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ.

Glenn Maxwell, injured, comeback, game, ahead, ODI series, India,

Articles You Might Like

Share This Article