ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ

Social Share

ನವದೆಹಲಿ,ಜ.12- ಜಗತ್ತು ಬಿಕ್ಕಟ್ಟನ್ನು ಹೆದರಿಸುತ್ತಿದೆ. ಈ ಹಂತದಲ್ಲಿ ದಕ್ಷಿಣ ಭಾಗದ ದೇಶಗಳು ಒಟ್ಟಾದರೆ 21ನೇ ಶತಮಾನದಲ್ಲಿ ಜಾಗತಿಕವಾಗಿ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತ ಆತಿಥ್ಯವಹಿಸಿರುವ ಎರಡು ದಿನಗಳ ವಾಯ್ಸ್ ಆಫ್ ಗ್ಲೋಬಲ್ ಸೌತ್ ವರ್ಚುವಲ್ ಶೃಂಗಸಭೆಯಲ್ಲಿ ಆರಂಭಿಕ ಭಾಷಣ ಮಾಡಿದ ಅವರು, 20 ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ಆರ್ಥಿಕತೆಯನ್ನು ಮುನ್ನೆಡೆಸಿದ್ದವು. ಇಂದು ಆರ್ಥಿಕತೆ ನಿಧಾನಗತಿಯಲ್ಲಿದೆ. 21 ನೇ ಶತಮಾನದ ಜಾಗತಿಕ ಬೆಳವಣಿಗೆಗೆ ದಕ್ಷಿಣದ ದೇಶ ಕೊಡುಗೆಗಳು ಮಹತ್ವದ್ದಾಗಿವೆ.

ನಾವು ಒಟ್ಟಾಗಿ ಕೆಲಸ ಮಾಡಿದರೆ, ಜಾಗತಿಕ ಕಾರ್ಯಸೂಚಿಯನ್ನು ನಿಗದಿ ಪಡಿಸಬಹುದು ಮತ್ತು ತನ್ನದೇ ಆದ ಧ್ವನಿಯನ್ನು ಹೊಂದಬಹುದಾಗಿದೆ ಎಂದರು.

ಇದಕ್ಕೂ ಮೊದಲು ದಕ್ಷಿಣದ ರಾಷ್ಟ್ರಗಳು ಅವಲಂಬನೆಯ ಚಕ್ರದಿಂದ ಹೊರಬರಬೇಕಿದೆ. ಪ್ರಸ್ತುತ ಸಂದರ್ಭವನ್ನು ಗಮನಿಸಿದರೆ ಅಸ್ಥಿರತೆ ಕೊನೆಯಾಗುವುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಯುದ್ಧ, ಭಯೋತ್ಪಾದನೆ ಮತ್ತು ಸಂಘರ್ಷದಿಂದ ಜಾಗತಿಕ ಸಮಸ್ಯೆಗಳು ಹೆಚ್ಚಾಗಿವೆ.

ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೋವಿಡ್‍ನಿಂದಾಗಿ ಆಹಾರ, ತೈಲ ಮತ್ತು ರಸಗೊಬ್ಬರ ಬೆಲೆ ಹೆಚ್ಚಳದಿಂದ ಆರ್ಥಿಕ ಪರಿಣಾಮ ಉಂಟಾಗಿದೆ. ಜೊತೆಗೆ ಪ್ರಕೃತಿ ವಿಕೋಪಗಳು ಹಾಗೂ ಹವಾಮಾನ ಬದಲಾವಣೆ ಸಮಸ್ಯೆಗಳು ನಮ್ಮೆದುರಿವೆ. ಅದರ ನಡುವೆ ಹೊಸ ವರ್ಷದಲ್ಲಿ ನಾವು ಹೊಸ ಭರವಸೆಗಳ ಮತ್ತು ಸಾಮಥ್ರ್ಯದೊಂದಿಗೆ ಸಂಧಿಸುತ್ತಿದ್ದೇವೆ ಎಂದಿದ್ದಾರೆ.

ಯುದ್ಧ, ಘರ್ಷಣೆ, ಭಯೋತ್ಪಾದನೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಕಂಡ ಮತ್ತೊಂದು ಕಷ್ಟಕರವಾದ ವರ್ಷದಲ್ಲಿ ನಾವು ಪುಟವನ್ನು ತಿರುಗಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ಶಾಶ್ವತ ಆರ್ಥಿಕ ಪರಿಣಾಮಗಳನ್ನು ಸೃಷ್ಟಿಸಿದೆ. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟ. ಈ ಅಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ ಎಂದು ಊಹಿಸಲು ಕಷ್ಟ ಎಂದು ಮೋದಿ ಹೇಳಿದರು.

ಅಭಿವೃದ್ಧಿಶೀಲ ಜಗತ್ತು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ನಮಗೆ ಉತ್ತಮ ಸಮಯ ಬರುತ್ತಿದೆ ಎಂಬ ಆಶಾವಾದ ಅಗತ್ಯ. ಆರ್ಥಿಕತೆಯನ್ನು ಸುಧಾರಿಸುವ ಸರಳ, ಸಾಧುವಾದ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಈ ಮಾರ್ಗದ ಮೂಲಕ ಕಠಿಣ ಸವಾಲುಗಳು ಹೆದರಿಸಬಹುದಾಗಿದೆ ಎಂದು ಹೇಳಿದ್ದಾರೆ.

ಗ್ಲೋಬಲ್ ಸೌತ್ ಒಟ್ಟಾಗಿ ಹೊಸ ಮತ್ತು ಸೃಜನಾತ್ಮಕ ಆಲೋಚನೆಗಳನ್ನು ಮಾಡಬೇಕು. ಇವು ಜಿ-20 ಶೃಂಗ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಧ್ವನಿಯನ್ನು ಏರಿಸಲು ಸಾಧ್ಯವಾಗಲಿದೆ. ಜಾಗತಿಕ ದಕ್ಷಿಣ ಭಾಗ ವಿಶ್ವದಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ. ಜಗತ್ತಿನ ಜನಸಂಖ್ಯೆಯಲ್ಲಿ ದಕ್ಷಿಣ ದೇಶಗಳು ನಾಲ್ಕನೆ ಮೂರಷ್ಟು ಜನಸಂಖ್ಯೆಯನ್ನು ಹೊಂದಿವೆ. ಸಹಜವಾಗಿ ನಮಗೆ ಆದ್ಯತೆ ಇದೆ. ಜಾಗತಿಕವಾಗಿ ಎಂಟು ದಶಕಗಳ ಹಳೆಯ ಮಾದರಿಯನ್ನು ಬದಲಾವಣೆ ಮಾಡಿಕೊಂಡು ಉದಯೋನ್ಮುಕ ರೂಢಿಗಳನ್ನು ಪಾಲಿಸಲು ಮುಂದಾಗಬೇಕು ಎಂದು ಹೇಳಿದರು.

ದಕ್ಷಿಣ ದೇಶಗಳಲ್ಲಿ ಹೆಚ್ಚಾಗಿ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ರಾಷ್ಟ್ರಗಳು ಒಳಗೊಂಡಿವೆ. ಈ ವರ್ಷ ಭಾರತ ಜಿ-20 ಶೃಂಗದ ಅಧ್ಯಕ್ಷತೆಯನ್ನು ಪ್ರಾರಂಭಿಸಿದೆ. ದಕ್ಷಿಣದ ಧ್ವನಿಯನ್ನು ಜಾಗತಿಕವಾಗಿ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು.

ಜಾಗತಿಕ ದಕ್ಷಿಣದ ದೇಶಗಳನ್ನು ಒಟ್ಟುಗೂಡಿಸಲು ಮತ್ತು ಉಕ್ರೇನ್ ಸಂಘರ್ಷದಿಂದ ಹೆಚ್ಚಾಗಿರುವ ಆಹಾರ, ಇಂಧನ ಭದ್ರತೆ ಸೇರಿದಂತೆ ವಿವಿಧ ಜಾಗತಿಕ ಸವಾಲುಗಳನ್ನು ನಿಭಾಯಿಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದು ಹೇಳಿದರು.

ಉದ್ಘಾಟನಾ ಅಧಿವೇಶನದ 10 ವಿಚಾರ ಸಂಕಿರಣಗಳನ್ನು ಹೊಂದಿದೆ. ಇಂದು ನಾಲ್ಕು ಅಧಿವೇಶನಗಳು ನಡೆಯಲಿದ್ದು, ನಾಳೆ ಆರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಪ್ರತಿ ಅಧಿವೇಶನದಲ್ಲೂ 10 ರಿಂದ 20 ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಸುಮಾರು 120 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿವೆ.

Global South, redesign, governance, PM Modi

Articles You Might Like

Share This Article