ಆಘಾತಕಾರಿ ಸಂಗತಿ, ವಿಶ್ವಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ 69% ಕುಸಿತ..!

Social Share

ನವದೆಹಲಿ.ಅ.13-ಕಳೆದ 1970 ಮತ್ತು 2018 ರ ನಡುವೆ ಜಗತ್ತಿನಾದ್ಯಂತ ವನ್ಯಜೀವಿಗಳ ಸಂಖ್ಯೆಯು ಶೇಕಡಾ 69 ರಷ್ಟು ಕುಸಿದಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ತಿಳಿಸಿದೆ. ಲಿವಿಂಗ್ ಪ್ಲಾನೆಟ್ ವರದಿ 2022 ರ ಪ್ರಕಾರ ಉಷ್ಣವಲಯದ ಪ್ರದೇಶಗಳಲ್ಲಿ ವನ್ಯಜೀವಿಗಳ ಜನಸಂಖ್ಯೆಯು ದಿಗ್ಭ್ರಮೆಗೊಳಿಸುವ ದರದಲ್ಲಿ ಕುಸಿಯುತ್ತಿದೆ ಎಂದು ಎಚ್ಚರಿಸಲಾಗಿದೆ.

ಅಮೇರಿಕಾ ಮತ್ತು ಕೆರಿಬಿಯನ್ ಪ್ರದೇಶಗಳು ಜಾಗತಿಕವಾಗಿ ಮೇಲ್ವಿಚಾರಣೆ ಮಾಡಿದ ವನ್ಯಜೀವಿ ಜನಸಂಖ್ಯೆಯ ಅತಿದೊಡ್ಡ ನಷ್ಟ ಉಂಟಾಗಿದೆ ಈ ಅವಧಿಯಲ್ಲಿ ಸರಾಸರಿ ಶೇಕಡಾ 94 ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ. ಲ್ಯಾಟಿನ್ ವನ್ಯಜೀವಿಗಳ ಜನಸಂಖ್ಯೆಯು ಆಫ್ರಿಕಾದಲ್ಲಿ 66 ಪ್ರತಿಶತ ಮತ್ತು ಏಷ್ಯಾ ಪೆಸಿಫಿಕ್‍ನಲ್ಲಿ 55 ಪ್ರತಿಶತದಷ್ಟು ಕಡಿಮೆಯಾಗಿದೆ.

ವನ್ಯಜೀವಿಗಳ ಜನಸಂಖ್ಯೆಯ ಕುಸಿತಕ್ಕೆ ಪ್ರಮುಖವಾಗಿ ಆವಾಸಸ್ಥಾನದ ಅವನತಿ, ಶೋಷಣೆ, ಆಕ್ರಮಣಕಾರಿ ಪ್ರಭೇದಗಳ ಪರಿಚಯ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ರೋಗಗಳು ಎಂದು ವರದಿ ಹೇಳಿದೆ.

ಮಾನವ ಪ್ರೇರಿತ ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ನಷ್ಟದ ಎರಡು ತುರ್ತು ಪರಿಸ್ಥಿತಿಗಳನ್ನು ನಾವು ಎದುರಿಸುತ್ತೇವೆ,ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಬೆದರಿಕೆ ಹಾಕುತ್ತಿದ್ದೇವೆ ಎಂದು ಇಂಟರ್‍ನ್ಯಾಶನಲ್‍ನ ಡೈರೆಕ್ಟರ್ ಜನರಲ್ ಮಾರ್ಕೊ ಲ್ಯಾಂಬರ್ಟಿನಿ ಹೇಳಿದರು

Articles You Might Like

Share This Article