ಜಾತಿ ರಾಜಕಾರಣ ಮಾಡುತ್ತಿಲ್ಲ : ಕೇಜ್ರಿವಾಲ್

Social Share

ನವದೆಹಲಿ, ಜ. 19- ನಿನ್ನೆ ಯಷ್ಟೇ ಪಂಜಾಬ್‍ನ ಎಎಪಿ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನೆ ಅವರ ಹೆಸರನ್ನು ಘೋಷಿಸಿದ್ದ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಇಂದು ಗೋವಾದ ಸಿಎಂ ಅಭ್ಯರ್ಥಿಯಾಗಿ ವಕೀಲ ಅಮಿತ್ ಪಾಲೇಕರ್ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಅಮಿತ್ ಪಾಲೇಕರ್ ಅವರು ಕಳೆದ ಅಕ್ಟೋಬರ್‍ನಷ್ಟೇ ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೆಂಟ್ ಕ್ರೂಜ್ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ.
# ಜಾತಿ ಕಾರಣ ಮಾಡುತ್ತಿಲ್ಲ:
ಚುನಾವಣೆಯ ವೇಳೆ ರಾಜಕಾರಣಿಗಳು ಜಾತಿ ರಾಜಕೀಯ ಮಾಡುವುದು ಸಾಮಾನ್ಯ, ಈಗ ಗೋವಾದ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿರುವ ವಕೀಲ ಅಮಿತ್ ಪಾಲೇಕರ್ ಅವರು ಭಂಡಾರಿ (ಓಬಿಸಿ ಜನಾಂಗ)ಕ್ಕೆ ಸೇರಿದ್ದು ಗೋವಾದ ಶೇ. 35ರಷ್ಟು ಮತದಾರರು ಈ ಜನಾಂಗಕ್ಕೆ ಸೇರಿದವರಾಗಿದ್ದರೂ ಕೂಡ ಅಮಿತ್ ಅವರನ್ನು ನಂಬಿಕೆಯ ಮನುಷ್ಯ ಎಂಬ ಆಧಾರದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೆನೆಯೇ ಹೊರತು ಭಂಡಾರಿ ಜನಾಂಗದ ಮತದಾರರ ಮನ ಸೆಳೆಯಲು ಅವರನ್ನು ಆಯ್ಕೆ ಮಾಡಿಲ್ಲ ಎಂದು ಕೇಜ್ರಿವಾಲ್ ಅವರು ಹೇಳಿದರು.
ಗೋವಾದಲ್ಲಿ ಓಬಿಸಿ ಜನಾಂಗದ ಮತದಾರರೇ ಹೆಚ್ಚಾಗಿ ಇದ್ದರೂ ಕೂಡ ಇದುವರೆಗೂ ರವಿ ನಾಯಕ್ ಅವರು ಮಾತ್ರ ಎರಡೂವರೆ ವರ್ಷ ಕಾಲ ಸಿಎಂ ಆಗಿ ಅಕಾರ ಮಾಡಿದ್ದು, ಈಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಕಾರಕ್ಕೆ ಬಂದರೆ ಅಮಿತ್ ಅವರು ಆ ಜನಾಂಗದ 2ನೆ ಸಿಎಂ ಆಗಲಿದ್ದಾರೆ ಎಂದು ಅವರು ಹೇಳಿದರು.
ಅಮಿತ್ ಅವರು ವಿದ್ಯಾವಂತರಾಗಿದ್ದು, ಯಾವುದೇ ಭ್ರಷ್ಟಾಚಾರದ ಪ್ರಕರಣವೂ ಅವರ ಹೆಸರಿನಲ್ಲಿ ಇಲ್ಲ, ಅವರು ಒಂದು ವೇಳೆ ಸಿಎಂ ಆಗಿ ಅಕಾರಕ್ಕೆ ಬಂದರೆ ನವದೆಹಲಿಯಲ್ಲಿ ಎಎಪಿ ಪಕ್ಷವು ಬಲಿಷ್ಠಗೊಂಡಂತೆ ಗೋವಾದಲ್ಲೂ ಪಕ್ಷವು ವರ್ಚಸ್ಸು ಪಡೆದುಕೊಳ್ಳಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.
ಗೋವಾದಲ್ಲಿ ಹಿಂದಿನ ಸರ್ಕಾರದ ವೈಫಲ್ಯದಿಂದ ಗೂಂಡಾಗಳ ಹಾವಳಿ ಹೆಚ್ಚಾಗಿದ್ದು ಒಂದು ವೇಳೆ ಎಎಪಿ ಅಕಾರಕ್ಕೆ ಬಂದರೆ ಗೂಂಡಾ ಸಂಸ್ಕøತಿಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಾಗಿ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Articles You Might Like

Share This Article