ನರಭಕ್ಷಕ ಚಿರತೆಗೆ ಮೇಕೆ, ಹಸುಗಳು ಬಲಿ

Social Share

ಹನೂರು, ಅ.21- ನರ ಭಕ್ಷಕ ಚಿರತೆ ಬಾಯಿಗೆ 5 ಮೇಕೆಗಳು ಮತ್ತು ಒಂದು ಹಸು ಬಲಿ ಆಗಿರುವ ಘಟನೆ ಮಹದೇಶ್ವರಬೆಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಮಲ್ಲಯ್ಯಪುರ ಗ್ರಾಮದ ಅರಣ್ಯದಲ್ಲಿ ಜರುಗಿದೆ.

ತಾಲೂಕಿನ ಕೌದಳ್ಳಿ ಗ್ರಾ. ಪಂ.ವ್ಯಾಪ್ತಿಗೆ ಸೇರಿದ ಮಲ್ಲಯ್ಯ ಪುರ ಗ್ರಾಮದ ಕುಮಾರ್ ಎಂಬುವವರಿಗೆ ಸೇರಿದ ಐದು ಮೇಕೆಗಳು ಮತ್ತು ಪುದು ನಗರ ಗ್ರಾಮದ ರಾಮಚಂದ್ರನಾಯ್ಕ ಎಂಬುವವರ ಸುಮಾರು 25 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹಸು(ಕಡಸು)ನ್ನು ಕೊಂದು ಅವುಗಳ ರಕ್ತ ಕುಡಿದು ಮಾಂಸ ತಿಂದು ಹೋಗಿರುತ್ತದೆ.

ಕಳೆದ ಹದಿನೈದು ದಿನದ ಹಿಂದೆ ಎಲ್ಲೇಮಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕೆವಿಎನ್ ದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರನ್ನು ಕೊಂದು ತಿಂದಿದ್ದ ಇದೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟು ಅದರ ಚಲನ ವಲನ ಬಗ್ಗೆ ಸಿಸಿ ಕ್ಯಾಮರ ಇಟ್ಟಿದ್ದರು. ಏನು ಪ್ರಯೋಜನೆ ಆಗಲಿಲ್ಲ. ಅಲ್ಲೂ ಸಹ ಅರಣ್ಯ ಸಿಬ್ಬಂಕಣ್ಣಿಗೆ ಬೀಳದ ಚಿರತೆ ಜನರ ಕಣ್ಣಿಗೆ ಬಿದ್ದು ಭಯದ ವಾತಾವರಣ ಸೃಷ್ಠಿ ಯಾಗಿದ್ದು , ಅಧಿಕಾರಿಗಳು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಘಟನೆ ವಿವರ: ಮಲ್ಲಯ್ಯನ ಪುರ ಗ್ರಾಮದ ಕುಮಾರ್‍ಎಂಬುವವರು ಸುಮಾರು 80 ಮೇಕೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದಾಗ ಏಕ ಏಕಿ ಚಿರತೆ ಏರು ಧ್ವನಿ ಘರ್ಜನೆಯ ಶಬ್ದದೊಂದಿಗೆ ಮೇಕೆಗಳ ಮೇಲೆ ದಾಳಿ ನಡೆಸಿದೆ.
ಇದನ್ನು ಕಂಡ ಪ್ರತ್ಯೇಕ ದರ್ಶಿ ಮೇಕೆ ಮಾಲೀಕ ಕುಮಾರ್ ಭಯ ಭೀತಿಗೊಂಡು ಕಿರುಚಾಡಿದ ಹಿನ್ನೆಲೆ ಸಿಕ್ಕ ಸಿಕ್ಕ ಮೇಕೆಗಳ ಮೇಲೆರಗಿದ ಚಿರತೆ ಒಂದೆರಡು ಮೇಕೆಗಳ ಕತ್ತು ಹಿಡಿದು ರಕ್ತ ಹೀರಿರುತ್ತದೆ.

ಮೇಕೆಗಳ ಮೇಲೆರಗಿದ ಚಿರತೆಯ ಭಯಂಕರ ಘರ್ಜನೆ ಮತ್ತು ಅಬ್ಬರಿಸಿದ ಅರ್ಭಟಕ್ಕೆ ಇನ್ನೂಳಿದ ಮೇಕೆಗಳು ಒಂದಷ್ಟು ಮನೆಗೆ ಬಂದಿದೆ ಒಂದಷ್ಟು ಕಾಡಿನೊಳಗೆ ದಿಕ್ಕ ಪಾಲಾಗಿ ಹೋಗಿದೆ. ರಾತ್ರಿಯಿಡಿ ಕಾಡಿನಲ್ಲೇ ಇದ್ದ ಮೇಕೆಗಳನ್ನು ಚಿರತೆ ಕೊಂದು ಅದರ ರಕ್ತ ಕುಡಿದಿರುತ್ತದೆ ಮತ್ತು ಕಾಡಿನಲ್ಲೇ ಬಿಸಾಡಿ ಹೋಗಿದೆ.

ಇತ್ತ ಗ್ರಾಮಕ್ಕೆ ಬಂದು ನಡೆದ ಘಟನೆ ಬಗ್ಗೆ ಗ್ರಾಮಸ್ಥರಿಗೆ ಕುಮಾರ್ ಸುದ್ದಿ ಮುಟ್ಟಿಸಿ ಅರಣ್ಯ ಇಲಾಖೆ ಅಕಾರಿಗೂ ಮಾಹಿತಿ ನೀಡಿದ್ದಾರೆ. ಬೆಳಗಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ತಪ್ಪಿಸಿಕೊಂಡಿದ್ದ ಮೇಕೆಗಳನ್ನು ಹುಡುಕಲು ಹತ್ತಾರು ಮಂದಿ ಗ್ರಾಮಸ್ಥರು ಕಾಡಿಗೆ ತೆರಳಿದಾಗ ಇನ್ನಷ್ಟು ಮೇಕೆಗಳು ಸತ್ತು ಬಿದ್ದಿರುವ ಧೃಶ್ಯ ತಿಳಿದಿರುತ್ತದೆ.

ಅಲ್ಲದೆ ಪುದು ನಗರ ಗ್ರಾಮದ ರಾಮಚಂದ್ರನಾಯ್ಕï ಎಂಬಾತನ ಹಸುವನ್ನು ಬಲಿ ಪಡೆದು ತೊಡೆ ಮಾಂಸ ತಿಂದು ಬಿದ್ದಿರುವ ಹಸುವಿನ ಕಳೆ ಬರಹ ಸಿಕ್ಕಿದೆ. ಅಲ್ಲದೆ ಚಿರತೆ ಪ್ಯತ್ಯೇಕ್ಷವಾಗಿ ದರ್ಶನ ನೀಡಿದ್ದಲ್ಲ ವಿರಕ್ತವಾಗಿ ಘರ್ಜಿಸಿ ಮನುಷ್ಯರ ಮೇಲೆರಗಲು ಬಂದಿದ್ದು ಭಯ ಬೀತಾರಾಗಿ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದಿದ್ದು ಇನ್ನೂ ಹತ್ತಾರು ಮೇಕೆಗಳ ಸುಳಿವು ಸಿಕ್ಕಿಲ್ಲ.

ಜಾಗ್ವಾರ್ ಚಿರತೆ : ಗ್ರಾಮದ ಪ್ರತ್ಯೇಕ್ಷ ದರ್ಶಿಗಳಾದ ಮುಕುಂದ ಮತ್ತು ಕೃಷ್ಣಪ್ಪ ಹೇಳುವ ಪ್ರಕಾರ ಇದು ಮಾಮೂಲಿ ಚಿರತೆಯಲ್ಲ. ಇದರ ದೇಹದ ವಿಕಾಸ ಮತ್ತು ಕರ್ಕಕಶ ಧ್ವನಿ ನೋಡಿದರೆ ಜಾಗ್ವರ್ ಚಿರತೆಯಾಗಿದೆ. ನಾವು ಮೊದಲೆಲ್ಲ ಕಾಡಿನಲ್ಲಿ ಚಿರತೆ ನೋಡಿದ್ದೇವೆ. ಅದು ಮನುಷ್ಯರನ್ನು ಕಂಡರೆ ನಾವು ಬೆದರಿಸಿದರೆ ಓಡುತ್ತಿತ್ತು. ಆದರೆ ಇದು ಮನುಷ್ಯರ ಸದ್ದು ಕೇಳಿದರೆ ಸಾಕು ವಿರಕ್ತವಾಗಿ ಘರ್ಜಿಸುತ್ತಾ ನಮ್ಮ ಮೇಲೆರಗಲು ಬರುತ್ತದೆ.

Articles You Might Like

Share This Article