ವಿಮಾನದ ಶೌಚಾಲಯದಲ್ಲಿ 2 ಕೋಟಿ ಮೌಲ್ಯದ ಚಿನ್ನ ಪತ್ತೆ

Social Share

ನವದೆಹಲಿ,ಮಾ.5- ವಿಮಾನದ ಶೌಚಾಲಯಲ್ಲಿ ಅಡಗಿಸಿಟ್ಟಿದ್ದ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಗಟ್ಟಿಗಳನ್ನು ದೆಹಲಿಯಲ್ಲಿ ವಶ ಪಡಿಸಿಕೊಳ್ಳಲಾಗಿದೆ.

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ನಿಯಮಿತವಾಗಿ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಸಂಚರಿಸುತ್ತಿದ್ದ ವಿಮಾನದಲ್ಲಿ ಚಿನ್ನ ಅಡಗಿಸಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.

“ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು CRPF ಸಂಪೂರ್ಣ ಸಿದ್ಧ”

ಈ ಮೊದಲು ಪ್ರಯಾಣಿಕರು ಘನಿಕೃತರೂಪದ ಚಿನ್ನವನ್ನು ಒಳ ಉಡುಪು, ಸೂಟ್‍ಕೇಸ್, ಶೂ, ಬೆಲ್ಟ್ ಹಾಗೂ ಇತರ ರೂಪದಲ್ಲಿ ಅಡಗಿಸಿಟ್ಟು ಕಳ್ಳಸಾಗಾಣಿಕೆ ಮಾಡುತ್ತಿದ್ದದ್ದು ಕಂಡು ಬರುತ್ತಿತ್ತು. ಐನಾತಿ ಉಪಾಯ ಮಾಡಿರುವ ಕಳ್ಳಸಾಗಾಣಿಕೆದಾರರು ವಿಮಾನದ ಶೌಚಾಲಯದಲ್ಲೇ ಚಿನ್ನವನ್ನು ಅಡಗಿಸಿಟ್ಟು ತಂದಿದ್ದಾರೆ.

ಯುದ್ಧಕ್ಕೆ ಹೊರಟ ಸಾಮಂತರಿಗೆ ದಂಡನಾಯಕನ ಕೊರತೆ

ಶೌಚಾಲಯದ ಸಿಂಕ್‍ಕೆಳಗೆ ತಾಜ್ಯಸ್ವರೂಪದಲ್ಲಿ ಅಂಡಿಸಲಾಗಿದ್ದ ನಾಲ್ಕು ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ ಪ್ರಾಥಮಿಕ ಅಂದಾಜಿನ ಪ್ರಕಾರ 1.95 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ತನಿಖೆ ಮುಂದುವರೆದಿದ್ದು ಅಬಕಾರಿ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Gold bars, Rs 2 Crore, recovered, aircraft, toilet, Delhi airport,

Articles You Might Like

Share This Article