ಬೆಂಗಳೂರು, ಫೆ.24- ನೋವು ನಿವಾರಕ ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ದುಬೈನಿಂದ ತಂದಿದ್ದ 75 ಲಕ್ಷ ರೂ. ಮೌಲ್ಯದ 1.4 ಕೆಜಿ ಚಿನ್ನದ ಪೇಸ್ಟ್ ನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯೊಬ್ಬ ಕಾಲು ನೋವು ನಿವಾರಣೆಗೆ ಬಳಸುವ ಬೆಲ್ಟ್‍ನಲ್ಲಿ ಚಿನ್ನದ ಪೇಸ್ಟ್‍ನ್ನು ಅಡಗಿಸಿಟ್ಟುಕೊಂಡು ದುಬೈನಿಂದ ಕಳ್ಳ ಸಾಗಾಣೆ ಮಾಡಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾನೆ.
ಈತನ ಚಲನ-ವಲನದ ಬಗ್ಗೆ ಅನುಮಾನಗೊಂಡ ಕಸ್ಟಮ್ಸ್ ಅಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ನೋವು ನಿವಾರಕ ಬೆಲ್ಟ್‍ನಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ಕಳ್ಳ ಸಾಗಾಣೆ ಮಾಡಿರುವುದು ಕಂಡುಬಂದಿದೆ. ಇದೀಗ ಆ ವ್ಯಕ್ತಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
