ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ RRR ಸಿನಿಮಾದ ನಾಟು ನಾಟು ಹಾಡು

Social Share

ನವದೆಹಲಿ,ಜ.11- ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಅಮೆರಿಕದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದ ಆರ್‌ಆರ್‌ಆರ್‌ ಚಿತ್ರ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ, ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಪ್ರಶಸ್ತಿಯಲ್ಲಿ ಎಡವಿದೆ. ಈ ವಿಭಾಗದಲ್ಲಿ ಅರ್ಜೆಂಟೈನಾ ಸಿನಿಮಾ ಪ್ರಶಸ್ತಿ ಗೆದ್ದಿದೆ.

ಸಮಾರಂಭದಲ್ಲಿ ಹಾಜರಿದ್ದ ರಾಜಮೌಳಿ, ಜೂ.ಎನ್‍ಟಿಆರ್, ರಾಮಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.

1920 ರ ಬ್ರಿಟೀಷ್ ಆಕ್ರಮಿತ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರು ಆಂಗ್ಲರ ವಿರುದ್ಧ ಸಿಡಿದೆದ್ದ ಕಥೆಯನ್ನಾಧರಿಸಿ ಆರ್‌ಆರ್‌ಆರ್‌ ಸಿನಿಮಾ ಮಾಡಲಾಗಿದೆ.

ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು

ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಜಾಗತಿಕವಾಗಿ 1200 ಕೋಟಿ ರೂ.ಗಳ ಆದಾಯ ಗಳಿಸಿತ್ತು. ಮಾತ್ರವಲ್ಲ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ರಾಜಮೌಳಿ ಅವರಿಗೆ ಒಲಿದು ಬಂದಿತ್ತು.

ಇದೀಗ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್‌ ಮೂವಿ ಆಸ್ಕರ್ ಪ್ರಶಸ್ತಿ ಗೆಲ್ಲುವುದೇ ಎಂದು ಸಿನಿ ರಸಿಕರ ಅಂಬೋಣವಾಗಿದೆ.

Golden Globe, Awards, RRR, Wins, Best, Original Song,

Articles You Might Like

Share This Article