ಖೈದಿಗಳಿಗೂ ಬಜೆಟ್‍ನಲ್ಲಿ ಗುಡ್ ನ್ಯೂಸ್

Social Share

ಬೆಂಗಳೂರು, ಫೆ.17- ಕಾರಾಗೃಹದಲ್ಲಿನ ಬಂಧಿಗಳ ಅಭ್ಯುದಯಕ್ಕಾಗಿ ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

2023-24ನೇ ಸಾಲಿನ ತಮ್ಮ ಬಜೆಟ್ ಮಂಡನೆಯಲ್ಲಿ ಈ ವಿಷಯ ತಿಳಿಸಿದ ಅವರು ಬಂದಿಗಳ ಜೀವನ ಸುಧಾರಣೆಗೆ ಮತ್ತು ಶಿಕ್ಷೆಯ ಅವಯ ನಂತರ ಪುನರ್ವಸತಿಗೆ ಸಶಕ್ತೀಕರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ.

ಬಂದಿಗಳಿಗೆ ನೀಡುವ ಕೂಲಿ ದರಗಳನ್ನು ಕನಿಷ್ಠ ವೇತನ ಕಾಯಿದೆ ಅನ್ವಯ ಹೆಚ್ಚಿಸಲು ಕ್ರಮ ವಹಿಸಲಾಗಿರುತ್ತದೆ. ಕಾರಾಗೃಹಗಳಲ್ಲಿನ ಆಸ್ಪತ್ರೆಗಳ ನಿರ್ವಹಣೆಯನ್ನು ಸುಧಾರಿಸಲು ಈ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ.

ವಿಜಯಪುರ, ಬೀದರ, ಮಂಗಳೂರು ಮತ್ತು ಬೆಂಗಳೂರು ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಗರಿಷ್ಠ ಭದ್ರತಾ ಕಾರಾಗೃಹ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇದರಿಂದ ಕಾರಾಗೃಹ ಸಾಮಥ್ರ್ಯ 4000 ರಷ್ಟು ಹೆಚ್ಚಾಗಿರುತ್ತದೆ. ಅಲ್ಲದೇ, ರಾಜ್ಯದ ಉಳಿದ ಕಾರಾಗೃಹಗಳಲ್ಲಿಯೂ ಸಹ 1,465 ಬಂದಿಗಳ ಸಾಮಥ್ರ್ಯವನ್ನು ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

#GoodNews #prisoners #JailDevelopmentBoard, #BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,

Articles You Might Like

Share This Article