ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ

Social Share

ವಾಷಿಂಗಟನ್,ಡಿ.3- ಜಾಗತಿಕ ಪ್ರತಿಷ್ಠೆಯ ಗೂಗಲ್ ಮತ್ತು ಆಲಾಬೆಟ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚಯ್ ಅವರಿಗೆ ಭಾರತದ ಉನ್ನತಗೌರವಗಳಲ್ಲಿ ಒಂದಾಗ ಪದ್ಮಭೂಷಣವನ್ನು ಭಾರತೀಯ ದೂತವಾಸದ ಅಧಿಕಾರಿಗಳು ಪ್ರದಾನ ಮಾಡಿದ್ದಾರೆ.

ಭಾರತದ ತಮಿಳುನಾಡಿನ ಮದುರೈ ಮೂಲದವರಾದ ಸುಂದರ್ ಪಿಚೈ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2022ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಪಿಚೈರನ್ನು ಆಯ್ಕೆ ಮಾಡಿತ್ತು. ವ್ಯಾಪಾರ ಮತ್ತು ಕೈಗಾರಿಕೆ ವಲಯದಲ್ಲಿ ಪ್ರಶಸ್ತಿಗೆ ಭಾಜನರಾದ 17 ಮಂದಿಯಲ್ಲಿ ಪಿಚೈ ಕೂಡ ಒಬ್ಬರು. ಕುಟುಂಬದ ಆಪ್ತ ಬಳಗದ ಉಪಸ್ಥಿತಿಯಲ್ಲಿ ಸ್ಯಾನ್‍ಪ್ರಾನಿಸ್ಕೋದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಿಚೈ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಭಾರತ ನನ್ನ ಭಾಗವಾಗಿದೆ, ನಾನು ಎಲ್ಲಿಗೆ ಹೋದರು ಇದನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಪ್ರಶಸ್ತಿ ಸ್ವೀಕಾರದ ಬಳಿಕ ಪಿಚೈ ಹೇಳಿದ್ದಾರೆ. ಅಗಾಧವಾದ ಈ ಗೌರವಕ್ಕಾಗಿ ಭಾರತ ಸರ್ಕಾರ ಮತ್ತು ಜನರಿಗೆ ನಾನು ಋಣಿಯಾಗಿದ್ದೇನೆ. ಈ ಪ್ರಶಸ್ತಿ ಮೂಲಕ ನಂಬಲಾರದಷ್ಟು ಅರ್ಥಪೂರ್ಣ ಎತ್ತರಕ್ಕೆ ನನ್ನನ್ನು ರೂಪಿಗೊಳಿಸಲಾಗಿದೆ. ಈ ಸುಂದರ ಪ್ರಶಸ್ತಿಯನ್ನು ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ

ಕಲಿಕಾಜ್ಞಾನ ಬಯಸುವ ಕುಟುಂಬದಲ್ಲಿ ಜನಿಸಿದ್ದು ನನ್ನ ಅದೃಷ್ಟ. ನಾನು ಈ ಎತ್ತರಕ್ಕೆ ಬೆಳೆಯಲು ಮತ್ತು ನನ್ನ ಹಿತಾಸಕ್ತಿಗಳನ್ನು ಗಿಟ್ಟಿಸಿಕೊಳ್ಳಲು ನನ್ನ ಪೋಷಕರ ತ್ಯಾಗ ತುಂಬಾ ಇದೆ ಎಂದು ಹೇಳಿದ್ದಾರೆ.

ಅಮೆರಿಕಾದ ರಾಯಭಾರ ಕಚೇರಿಯ ರಾಯಭಾರಿ ತರಣ್‍ಜಿತ್ ಸಿಂಗ್ ಸಂಧು ಕೇಂದ್ರ ಸರ್ಕಾರದ ಪರವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪಿಚೈ ಅಳತೆಮೀರಿದ ತಂತ್ರಜ್ಞಾನ ಪರಿವರ್ತನೆಯ ಪ್ರತಿನಿಧಿಯಾಗಿದ್ದಾರೆ.

ಚಿರತೆ ಸೆರೆಗೆ ವಿಶೇಷ ತಂಡ ರಚನೆ : ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

ಜಾಗತಿಕವಾಗಿ ವಿವಿಧ ಭಾಗದಲ್ಲಿನ ಸಮಾಜದ ಹಲವು ಕ್ಷೇತ್ರಗಳ ಕೌಶಲ್ಯ ಸಾಕಾರಕ್ಕೆ ಮತ್ತು ಡಿಜಿಟಲ್ ಸಲಕರಣೆಗೆ ಪ್ರಶಂಸನೀಯ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ ಎಂದು ಸಂಧು ಹೇಳಿದ್ದಾರೆ.

#Google, #CEO, #SundarPichai, #Receives, PadmaBhushan, #Award,

Articles You Might Like

Share This Article