ಗೂಗಲ್ ಡೂಡಲ್‍ನಲ್ಲಿ ಫಿಫಾ ಮೆರಗು

Social Share

ಕತಾರ್, ನ. 20- ವಿಶ್ವದ ಅತ್ಯಂತ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಫಿಫಾ ಫುಟ್ಬಾಲ್ ಮಹಾ ಸಂಗ್ರಾಮವು ಇಂದಿನಿಂದ ಕಾತರ್‍ನಲ್ಲಿ ಆರಂಭಗೊಳ್ಳಲಿದ್ದು ಅದರ ಸಲುವಾಗಿಯೇ ಗೂಗಲ್ ವಿಶೇಷ ಅನಿಮೇಷನ್ ಡೂಡಲ್ ಮೂಡಿಸಿದೆ.

ಫುಟ್ಬಾಲ್ ಆಟವನ್ನು ಬಿಂಬಿಸುವ ಚೆಂಡು ಹಾಗೂ ಬೂಟುಗಳನ್ನು ಪರದೆ ಮೇಲೆ ಮೂಡಿಸುವ ಮೂಲಕ ಆಸಕ್ತಿ ಮೂಡಿಸಿದ್ದು, ಈ ಚಿತ್ರದ ಮೇಲೆ ಕ್ಲಿಕ್ ಮಾಡಿದ ತಕ್ಷಣ ಫಿಫಾ ಫುಟ್ಬಾಲ್‍ನ ಸಂಪೂರ್ಣ ವಿವರವುಳ್ಳ ಪುಟ ತೆರೆದುಕೊಳ್ಳುವ ಮೂಲಕ ಫುಟ್ಬಾಲ್ ಪ್ರೇಮಿಗಳ ಆಸಕ್ತಿ ಹೆಚ್ಚಿಸುತ್ತದೆ.

ಗೂಗಲ್ ಡೂಡಲ್ ಈ ಬಾರಿ ಫುಟ್ಬಾಲ್ ಪ್ರೇಮಿಗಳಿಗೆ ಮತ್ತೊಂದು ಸುವರ್ಣಾವಕಾಶ ನೀಡಿದ್ದು, ಫುಟ್ಬಾಲ್‍ನ ಸಂಪೂರ್ಣ ವಿವರ ಪಡೆಯುವುದರ ಜೊತೆಗೆ ಮೊಬೈಲ್ ಆ್ಯಪ್ ಮೂಲಕ ತಾವು ಕೂಡ ಇತರ ಚಂದಾರರೊಂದಿಗೆ ಫುಟ್ಬಾಲ್ ಆಡಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ.

ಡ್ರೀಮ್ ಇಲೆವೆನ್ ರೀತಿಯೇ ಚಂದಾದಾರರು ತಮ್ಮ ನೆಚ್ಚಿನ ತಂಡ, ಆಟಗಾರರು, ಯಾರು ಎಷ್ಟು ಗೋಲುಗಳು ಗಳಿಸುತ್ತಾರೆ ಎಂಬುದರ ಬಗ್ಗೆ ಸೂಚಿಸಬಹುದು, ಪಂದ್ಯ ಮುಗಿದ ನಂತರ ಅಂತಿಮ ಬಜರ್ ಮೂಡಿಬರಲಿದ್ದು , ವಿಜೇತರರಾದವರ ಹೆಸರನ್ನು ಪ್ರಕಟಿಸಿ ಅವರಿಗೆ ಬಹುಮಾನ ವಿತರಿಸಲಿದೆ.

ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲಿ 32 ತಂಡಗಳು ಪಾಲ್ಗೊಳ್ಳಲಿದ್ದು ಆರಂಭಿಕ ಪಂದ್ಯದಲ್ಲಿ ಅತಿಥೇಯ ಕಾತರ್ ಹಾಗೂ ಇಕ್ವೇಡರ್ ನಡುವೆ ಪಂದ್ಯ ನಡೆಯಲಿದ್ದು ಡಿಸೆಂಬರ್ 18 ರಂದು ಅಂತಿಮ ಪಂದ್ಯ ನಡೆಯಲಿದೆ.

Google, Doodle, FIFA, World Cup, Qatar 2022,

Articles You Might Like

Share This Article