ವಾಷಿಂಗ್ಟನ್, ಸೆ .20-ಮೊದಲ ಬಾರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಇಲ್ಲಿನ ಭಾರತದ ರಾಯಭಾರ ಕಚೇರಿಗೆ ಭೇಟಿ ನೀಡಿ ಮತ್ತು ಅಮೆರಿಕದಲ್ಲಿ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರೊಂದಿಗೆ ಐಟಿ ಕಂಪನಿಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ನಮ್ಮ ಬೆಂಬಲವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ ಮತ್ತು ಮುಂದಿನ ವರ್ಷದ ಜನವರಿಯಲ್ಲಿ ಪದ್ಮಭೂಷಣ ಸ್ವೀಕರಿಸಲು ಖುಷಿಯಿಂದ ತೆರಳುವುದಾಗಿ ಪಿಚೈ ಟ್ಟೀಟ್ ನಲ್ಲಿ ಹೇಳಿದ್ದಾರೆ.
ಭಾರತ-ಯುಎಸ್ ವಾಣಿಜ್ಯ, ಜ್ಞಾನ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ವಿಸ್ತರಿಸುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ರಾಯಭಾರಿ ಹೇಳಿದರು.
ಪಿಚೈ ನೇತೃತ್ವದ ಗೂಗಲ್ ಭಾರತದಲ್ಲಿ ಭಾರಿ ಹೂಡಿಕೆ ಮಾಡಿದೆ ಮತ್ತು ಯುವ ಪೀಳಿಗೆಗೆ ತನ್ನ ತರಬೇತಿ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತನ್ನು ಅಸಾಧಾರಣವಾಗಿ ವಿಸ್ತರಿಸಿದೆ ಎಂದು ತರಂಜಿತ್ ಸಿಂಗ್ ಸಂಧು ತಿಳಿಸಿದ್ದಾರೆ.
ಭಾರತದ ಡಿಜಿಟಲೀಕರಣಕ್ಕಾಗಿ ಗೂಗಲ್ ಅಡಿಯಲ್ಲಿ ಸುಮಾರು 10 ಬಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ. ಇದು ರಿಲಯನ್ಸ್ ಜಿಯೋ ಜೊತೆಗೆ ಭಾರ್ತಿ ಏರ್‍ಟೆಲ್‍ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.
ಚರ್ಚೆ ವೇಳೆ ಪಿಚೈ ಅವರು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಅದರ ಪಾಲುದಾರಿಕೆಯನ್ನು ಮುಂದುವರಿಸುವ ವಿವಿಧ ವಿಧಾನಗಳ ಹಾಗು ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯ ಡಿಜಿಟಲೈಸೇಶನ್ ಸೇರಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.