ಗೊರಗುಂಟೆಪಾಳ್ಯ ಎಲಿವೆಟೆಡ್ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ

Social Share

ಬೆಂಗಳೂರು,ಜ.6- ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬರುವ ಗೊರಗುಂಟೆಪಾಳ್ಯದ ಎಲಿವೇಟೆಡ್ ಮೇಲ್ಸೇತುವೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಮುನ್ಸೂಚನೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಫ್ಲೈಓವರ್ ಮೇಲೆ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ. ಇದರ ಜತೆಗೆ ನೈಟ್ ಪ್ರಯಾಣಕ್ಕೂ ಬ್ರೇಕ್ ಹಾಕಲಾಗಿದ್ದು, ಸೇತುವೆ ದುರಸ್ಥಿಗೆ 30 ಕೋಟಿ ರೂ.ಗಳ ಖರ್ಚು ಮಾಡಲಾಗುತ್ತಿದೆ.

ಬೆಂಗಳೂರು-ಪೂನಾ ಸಂಚಾರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆದ್ದಾರಿಯ ಗೊರಗುಂಟೆ
ಪಾಳ್ಯದ ಸಮೀಪದ ಮೇಲ್ಸೇತುವೆ ಎರಡು ಪಿಲ್ಲರ್‍ಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ ಈ ಮಾರ್ಗದ ಸಂಚಾರದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು.

ಬಿರುಕು ಕಾಣಿಸಿಕೊಂಡ ನಂತರ ಮೇಲ್ಸೆತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಅಂದಿನಿಂದ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಡಿಸಂಬರ್ ವೇಳೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಸದನದಲ್ಲಿ ಭರವಸೆ ನೀಡಿದ್ದರು.

ಗುಜರಿ ಸೇರಲಿವೆ 990 ಬಿಎಂಟಿಸಿ ಬಸ್‍ಗಳು..!

ಇದೀಗ ಡಿಸಂಬರ್ ಮುಗಿದು ಜನವರಿ ಆರಂಭವಾಗಿದ್ದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ತಜ್ಞರು ಹಾಗೂ ಟೆಕ್ನಿಕಲ್ ಸಮಿತಿ ಸದಸ್ಯರು ಸದ್ಯಕ್ಕಂತೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಲ್ಸೇತುವೆ ಕೇಬಲ್ ಅಳವಡಿಸುವ ಕಾರ್ಯಕ್ಕೆ ಈಗ ಟೆಂಡರ್ ಕರೆದಿದ್ದು, 4 ಕಿ.ಮೀ ಉದ್ದದ ರಸ್ತೆಗೆ 30 ಕೋಟಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ಮೂರು ತಿಂಗಳು ಗೊರಗುಂಟೆಪಾಳ್ಯ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ಸಾಧ್ಯವಿಲ್ಲ ಎನ್ನುತ್ತಾರೆ.

ಒಟ್ಟು 120 ಪಿಲ್ಲರ್ ಗಳಲ್ಲಿ ಆರು ಕೇಬಲ್ ಅಳವಡಿಸಲು 30 ಕೋಟಿಯ ಟೆಂಡರ್ ಕರೆಯಲಾಗ್ತಿದೆ. ಮುಂದಿನ ಮೂರು ತಿಂಗಳಲ್ಲಿ 120 ಪಿಲ್ಲರ್ ಗಳಲ್ಲಿ 3 ಕೇಬಲ್ ಹಾಕುವ ಕಾರ್ಯ ಮುಗಿಯಲಿದ್ದು ನಂತರ ಭಾರೀ ವಾಹನಗಳ ಸಂಚಾರ ಅವಕಾಶ ದೊರಕುವ ಸಾಧ್ಯತೆಯಿದೆ.

ನಂತರ ಉಳಿದ ಮೂರು ಕೇಬಲ್ ಅಳವಡಿಕೆಗೆ ಒಂದು ವರ್ಷ ತಗಲುವ ಸಾಧ್ಯತೆಯಿದೆ. ಒಂದೊಮ್ಮೆ ಮೂರು ಕೇಬಲ್ ಹಾಕಿದ ನಂತರ ಭಾರೀ ವಾಹನಗಳ ಓಡಾಟದ ನಂತರ ಸಮಸ್ಯೆ ಕಂಡು ಬಂದ್ರೆ ಮುಂದಿನ ಒಂದುವರ್ಷಗಳ ಕಾಲ ಭಾರೀ ವಾಹನಗಳ ಓಡಾಟ ಮತ್ತೆ ಸ್ಥಗಿತವಾಗಿರಲಿದೆಯಂತೆ.

4 ಕಿ.ಮೀ ಉದ್ದದ ಈ ಫ್ಲೈಓವರ್ ಮೇಲೆ ನಿತ್ಯ 50-60 ಸಾವಿರ ವಾಹನಗಳು ಸಂಚಾರ ಮಾಡ್ತಿವೆ. ಹೀಗಿರುವ ಫ್ಲೈಓವರ್ 2010 ರಲ್ಲಿ ನಿರ್ಮಾಣ ಆಗಿದ್ದು ನವಯುಗ ಕಂಪನಿ ನಿರ್ಮಾಣ ಮಾಡಿದೆ. ಈಗ ದುರಸ್ತಿಗೆ 30 ಕೋಟಿ ಅಂದಾಜು ಮಾಡಲಾಗಿದೆಯಂತೆ.

ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಮೇಲ್ಸೇತುವೆ ಮೇಲೆ ಇನ್ನು ಕೆಲ ತಿಂಗಳ ಕಾಲ ಭಾರಿ ವಾಹನಗಳ ಸಂಚಾರ ಸಾಧ್ಯವಿಲ್ಲ. ಇದರ ಜೊತೆಗೆ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋಫೆಸರ್ ಹಾಗೂ ಟೆಕ್ನಿಕಲ್ ಸಮಿತಿ ಸದಸ್ಯ ಚಂದ್ರಾ ಕಿಶನ್ ತಿಳಿಸಿದ್ದಾರೆ.

ಕಳೆದ ವರ್ಷದ 2021 ಡಿಸೆಂಬರ್ 25ರಿಂದ ಈ ಮೇಲ್ಸೆ ತುವೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ದಾಸರಹಳ್ಳಿ ಭಾಗದಲ್ಲಿ ಕಳೆದ 12 ತಿಂಗಳಿಂದ ವಾಹನ ಸಂಚಾರ ದಟ್ಟಣೆ ಸಮಸ್ಯೆ ಸೃಷ್ಟಿಯಾಗಿದೆ. ರಾಜಧಾನಿಗೆ ರಾಜ್ಯದ ಮುಕ್ಕಾಲು ಭಾಗವನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ವಾರಾಂತ್ಯದ ಪ್ರಯಾಣವಂತೂ ಪ್ರಯಾಸಕರವಾಗಿದೆ.

ಸರ್ಕಾರ ನೀಡಿದ ಗಡುವು ಮುಕ್ತಾಯ ಆಗಿದ್ದು ಕಾಮಗಾರಿ ಮುಗಿದಿಲ್ಲ. ಈಗ ತಜ್ಞರು ಕೇಬಲ್ ಅಳವಡಿಕೆಗೆ ಟೆಂಡರ್ ಕರೆಯುತ್ತಿದ್ದಾರೆ. ಮುಂದಿನ ಮೂರು ತಿಂಗಳು ಸಮಯ ಬೇಕಿದೆ.

ಬಿಬಿಎಂಪಿಯ ಹೊಸ ಐಡಿಯಾ, ಸಸಿಗಳ ಸಂರಕ್ಷಣೆಗೂ ಜಿಪಿಎಸ್ ವ್ಯವಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆಗೆ ಮೇಲ್ಸೇತುವೆಯ ಸುರಕ್ಷತಾ ಲೆಕ್ಕಪರಿಶೋಧನೆಯ ಕಾರ್ಯವನ್ನು ವಹಿಸಿಕೊಟ್ಟಿದ್ದು ಮತ್ತು ತಜ್ಞರ ತಾಂತ್ರಿಕ ಸಮಿತಿಯು ಅದರ ರಚನಾತ್ಮಕ ಸಮಗ್ರತೆಯನ್ನು ಸುಧಾರಿಸಲು ಸಲಹೆಗಳನ್ನು ನೀಡಿದೆ.

ಸಮಿತಿಯು ಎಲ್ಲಾ ಕೇಬಲ್‍ಗಳನ್ನು ಆಂಟಿ-ಕಾರೋಸಿವ್ ಕೇಬಲ್‍ಗಳೊಂದಿಗೆ ಬದಲಾಯಿಸಲು ಸಲಹೆ ನೀಡಿದೆ. ಫ್ಲೈಓವರ್‍ನ ಎಲ್ಲ 120 ಪಿಲ್ಲರ್‍ಗಳು ಸುಮಾರು 8 ಪ್ರಿ-ಕಾಸ್ಟ್ ಕೇಬಲ್‍ಗಳನ್ನು ಹೊಂದಿದ್ದು, ಈಗ ಒಟ್ಟು 960 ಹೊಸ ಕೇಬಲ್‍ಗಳನ್ನು ಹಾಕಬೇಕಾಗಬಹುದು. ಆ ನಂತರವಷ್ಟೇ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಬಹುದು.

Goraguntepalya, flyover, Tumakuru Road, traffic,

Articles You Might Like

Share This Article