Saturday, September 23, 2023
Homeಇದೀಗ ಬಂದ ಸುದ್ದಿಗೌರಿ-ಗಣೇಶ ಹಬ್ಬಕ್ಕೆ ಊರಿನತ್ತ ಹೋರಟ ಜನ, ಬೆಂಗಳೂರಲ್ಲಿ ಬಸ್‌ಗಳಿಗಾಗಿ ನೂಕುನುಗ್ಗಲು

ಗೌರಿ-ಗಣೇಶ ಹಬ್ಬಕ್ಕೆ ಊರಿನತ್ತ ಹೋರಟ ಜನ, ಬೆಂಗಳೂರಲ್ಲಿ ಬಸ್‌ಗಳಿಗಾಗಿ ನೂಕುನುಗ್ಗಲು

- Advertisement -

ಬೆಂಗಳೂರು, ಸೆ.16- ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜನರು ರಾತ್ರಿಯೇ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದು, ಕೆಎಸ್ಆರ್ಟಿಸಿ ಬಸ್ಗಳು ಫುಲ್ ರಶ್ ಆಗಿವೆ.ವಾರಾಂತ್ಯದ ರಜೆ ಜತೆಗೆ ಹಬ್ಬದ ರಜೆಯೂ ಸೇರಿ ಮೂರು ದಿನ ಸರಣಿ ರಜೆ ಬಂದಿದ್ದು, ಬಹುತೇಕ ಮಂದಿ ಸಂಜೆ ಕೆಲಸ ಮುಗಿಸಿಕೊಂಡು ಊರುಗಳತ್ತ ತೆರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿಯಿಂದಲೇ ಪ್ರಯಾಣಿಕರ ಜನ ಜಾತ್ರೆ ಕಂಡು ಬಂತು. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದ್ದರಿಂದ ಜನರು ಪರದಾಡುವಂತಾಗಿತ್ತು.

- Advertisement -

ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚುವರಿಯಾಗಿ 1200 ಬಸ್ಗಳು ರಾಜ್ಯದ ವಿವಿಧ ಪ್ರಮುಖ ಜಿಲ್ಲೆ, ತಾಲೂಕುಗಳಿಗೆ ಸಂಚಾರ ನಡೆಸುತ್ತಿವೆ. ಬಹುತೇಕ ಬಸ್ಗಳು ರಶ್ ಆಗಿವೆ. ಕೆಲವರಿಗೆ ಇಂದು ಕೆಲಸವಿದ್ದು, ಇಂದು ಸಂಜೆ ಕೆಲಸ ಮುಗಿಸಿಕೊಂಡು ಊರುಗಳಿಗೆ ತೆರಳಲಿದ್ದಾರೆ. ಇಂದು ಸಂಜೆ ಮತ್ತಷ್ಟು ದಟ್ಟಣೆ ಹೆಚ್ಚಾಗಲಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣವಿದ್ದು, ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.ಹಬ್ಬಕ್ಕೆ ಬಸ್ಗಳು ರಷ್ ಆಗುತ್ತವೆ ಎಂದು ಮುಂದಾ ಲೋಚನೆಯಿಂದ ಶಕ್ತಿ ಯೋಜನೆ ಇದ್ದರೂ ಸಹ ಮುಂಗಡ ಟಿಕೆಟ್ ಕಾಯ್ದಿರಿಸಿಕೊಂಡು ಪ್ರಯಾಣ ನಡೆಸಿದ್ದಾರೆ.

ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಮತ್ತು ನಿಯಮ ಪಾಲನೆ ಕಡ್ಡಾಯ

ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಖಾಸಗಿ ಬಸ್ಗಳು ಹಬ್ಬದ ರಜೆಯನ್ನು ಬಂಡವಾಳ ಮಾಡಿಕೊಂಡು ಹೆಚ್ಚಿನ ಪ್ರಯಾಣದರ ನಿಗದಿ ಮಾಡಿದ್ದಾರೆ. ದೂರದ ಜಿಲ್ಲೆಗಳಿಗೆ ಖಾಸಗಿ ಸ್ಲೀಪರ್ ಕೋಚ್ಗಳು ರಾತ್ರಿವೇಳೆ ಸಂಚರಿಸುತ್ತವೆ. ಆರಾಮಾಗಿ ಹೋಗಬಹುದೆಂದು ಹಲವರು ಖಾಸಗಿ ಬಸ್ಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ 700 ರಿಂದ 800ರೂ. ಇದ್ದ ಪ್ರಯಾಣ ದರ ಈಗ 1500ರೂ.ಗೆ ಏರಿಕೆಯಾಗಿದೆ. ಮಂಗಳೂರಿಗೆ 800 ರಿಂದ 1200ರೂ. ನಿಗದಿ ಮಾಡಿ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಸಂಚಾರ ದಟ್ಟಣೆ: ಊರುಗಳಿಗೆ ತೆರಳಲು ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಜಯನಗರ, ಶಾಂತಿನಗರ ಸೇರಿದಂತೆ ಬಹುತೇಕ ನಿಲ್ದಾಣಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ಗಾಗಿ ಬಂದಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಇನ್ನು ಟೋಲ್ಗಳಲ್ಲೂ ಸಹ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೈಸ್ ರಸ್ತೆ, ತುಮಕೂರು ರಸ್ತೆ, ಹಾಸನ ರಸ್ತೆಯ ಟೋಲ್ಗಳಲ್ಲೂ ಸಹ ರಾತ್ರಿಯಿಂದಲೇ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.ಕೆಲವರು ಕಾರು, ಬೈಕ್ ಸೇರಿದಂತೆ ಸ್ವಂತ ವಾಹನಗಳಲ್ಲಿ ಊರುಗಳಿಗೆ ತೆರಳಿದರೆ ಇನ್ನೂ ಕೆಲವರು ರೈಲುಗಳ ಮುಖಾಂತರ ಪ್ರಯಾಣ ಬೆಳೆಸಿದ್ದಾರೆ. ಮೂರು ದಿನ ಸರಣಿ ರಜೆ ಹಿನ್ನೆಲೆಯಲ್ಲಿ ಬಹುತೇಕ ಬೆಂಗಳೂರು ಖಾಲಿಯಾಗಲಿದೆ.

#GouriGaneshaFestival, #PeopleRush, #hometown,

- Advertisement -
RELATED ARTICLES
- Advertisment -

Most Popular