ಆಡಳಿತದ ಪಕ್ಷಿನೋಟ ಪುಸ್ತಕ ಬಿಡುಗಡೆ

Social Share

ಬೆಂಗಳೂರು, ಜ.27- ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ನಾನು ಅಧಿಕಾರ ವಹಿಸಿಕೊಂಡು ನಾಳೆಗೆ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಆಡಳಿತದ ಪಕ್ಷಿನೋಟದ ಪುಸ್ತಕ ಬಿಡುಗಡೆ ಮಾಡುತ್ತೇವೆ. ಯಾವುದೇ ಹೊಸ ಘೋಷಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಹೇಳಿದರು.
ನಾಳೆ ಸಿಎಂ ಆಗಿ ಆರು ತಿಂಗಳು ಪೂರೈಕೆಯಾಗುತ್ತಿ ರುವುದಕ್ಕೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗಿಫ್ಟ್ ನೀಡುತ್ತೀರಾ ಎಂಬ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಚ್ಚರಿಯ ಘೋಷಣೆ ಇಲ್ಲ. ನಮ್ಮದು ಸ್ಪಂದನಾಶೀಲ ಸರ್ಕಾರ ಯಾವಾಗ ಸಮಸ್ಯೆ ಬಂದಿದ್ದವೋ ಅದಕ್ಕೆಲ್ಲ ನಾವು ಸ್ಪಂದನೆ ಮಾಡಿಕೊಂಡು ಬಂದಿದ್ದೇವೆ.
ಜೋಳ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಈಗ ರಾಗಿ ಖರೀದಿಸುವ ಬಗ್ಗೆ ನಿರ್ಧಾರ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಹೀಗೆ ನಿರಂತರವಾಗಿ ಜನರಿಗೆ ಸ್ಪಂದಿಸುತ್ತೇವೆ ಎಂದು ತಿಳಿಸಿದರು.

Articles You Might Like

Share This Article