ದಿ.ಉಮೇಶ್ ಕತ್ತಿ ಕುಟುಂಬದವನ್ನು ಭೇಟಿಮಾಡಿ ಸಾಂತ್ವನ ಹೇಳಿದ ರಾಜ್ಯಪಾಲ ಗೆಹ್ಲೋಟ್

Social Share

ಬೆಳಗಾವಿ, ಸೆ. 14 : ಇತ್ತೀಚೆಗೆ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ಉಮೇಶ್ ಕತ್ತಿ ಅವರ ನಿವಾಸಕ್ಕೆ ಬುಧವಾರ(ಸೆ.14) ರಾಜ್ಯಪಾಲರು ಭೇಟಿ ನೀಡಿದರು.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ

ಈ ಸಂದರ್ಭದಲ್ಲಿ ದಿ.ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಇದಾದ ಬಳಿಕ ದಿ.ಉಮೇಶ್ ಕತ್ತಿ ಅವರ ಪತ್ನಿ ಶೀಲಾ ಕತ್ತಿ ಅವರಿಗೆ ಸಾಂತ್ವನ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಮಾಜಿ ಸಂಸದ ಹಾಗೂ ಉಮೇಶ್ ಕತ್ತಿಯವರ ಸಹೋದ ರಮೇಶ್ ಕತ್ತಿ, ಪುತ್ರ ನಿಖಿಲ್ ಕತ್ತಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Articles You Might Like

Share This Article