ನಾಂದೇಡ್.ಫೆ.8- ಫೈಜರ್ ಕೋವಿಡ್ ಲಸಿಕೆ ಅಮದು ತಡೆಯಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿತ್ತು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕಾದ ದೈತ್ಯ ಕಂಪನಿಯಾದ ಫೈಜರ್ ಲಸಿಕೆಗಳನ್ನು ತರಿಸಿಕೊಳ್ಳಲು ನಾನು ಮತ್ತು ಇತರ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದೇವು ಆದರೆ, ಮೋದಿ ಸರ್ಕಾರ ಅದಕ್ಕೆ ಆಸ್ಪದ ನೀಡಲಿಲ್ಲ ಎಂದು ಕೆಸಿಆರ್ ದೂರಿದ್ದಾರೆ.
ಫೈಜರ್ ಸಂಸ್ಥೆ ವಿರುದ್ಧ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದ ಬೆನ್ನಲ್ಲೇ ಕೆಸಿಆರ್ ಅವರ ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.
ಹಾಸನದಲ್ಲಿ ಸೈಲೆಂಟಾದ ಭವಾನಿ ರೇವಣ್ಣ..!
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಫೈಜರ್ ಸಂಸ್ಥೆ ಸಿಇಒ ಆಲ್ಬರ್ಟ್ ಬೌರ್ಲಾ ಅವರ ಟ್ವೀಟ್ ಅನ್ನು ಚಂದ್ರಶೇಖರ್ ಹಂಚಿಕೊಂಡಿರುವ ಕೆಸಿಆರ್ ಅವರು ಭಾರತದ ಮೇಕ್ ಇನ್ ಇಂಡಿಯಾ ಎಂಬುದು ಜೋಕ್ ಆಗಿ ಪರಿವರ್ತನೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾವನ್ನು ತೊರೆಯುತ್ತಿವೆ, ಆದರೆ ನಾವು ಅವರನ್ನು ಏಕೆ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ? ಆ ಕಂಪನಿಗಳು ನಮ್ಮ ಕಡೆಗೆ ಏಕೆ ತಿರುಗುತ್ತಿಲ್ಲ? ಮೇಕ್ ಇನ್ ಇಂಡಿಯಾ ಸರಿಯಾಗಿರುತ್ತಿದ್ದರೆ, ಇದು ಸಾಧ್ಯವಾಗುತ್ತಿತ್ತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಫೈಜರ್ ಸಂಸ್ಥೆ ಕೊರೊನಾ ಸಮಯದಲ್ಲಿ ಭಾರತಕ್ಕೆ ಪ್ರವೇಶಿಸುವುದನ್ನು ನಿಲ್ಲಿಸಲಾಯಿತು. ಕಂಪನಿಯು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.
ಕೆಸಿಆರ್ ಪುತ್ರಿ ಕವಿತಾ ಪರಿಚಯಸ್ಥನ ಬಂಧನ
ಸಾರ್ವಜನಿಕರು ಅತ್ಯುತ್ತಮ ಲಸಿಕೆಯನ್ನು ಪಡೆಯಲು ಬಯಸಿದಾಗ, ಜನರು ಸಹ ಅದನ್ನು ಖರೀದಿಸಲು ಬಯಸಿದ್ದರು, ಆದರೂ ಕಂಪನಿಯನ್ನು ಬಲವಂತವಾಗಿ ನಿಲ್ಲಿಸಲಾಯಿತು. ನಾವು ಸಹ ಪ್ರಯತ್ನಿಸಿದ್ದೇವೆ, ಅನೇಕ ಮುಖ್ಯಮಂತ್ರಿಗಳು ಪಿಎಂಒ ಮತ್ತು ನೀತಿ ಆಯೋಗದೊಂದಿಗೆ ಮಾತುಕತೆ ನಡೆಸಿದ್ದರು ಆದರೆ ಅವರು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
Government, Blocked, Pfizer, Covid, Vaccine, KCR,