ಸರ್ಕಾರದ ನಿಯಂತ್ರಣದಿಂದ ಮುಕ್ತಿ, ದೇವಾಲಯಗಳಿಗೆ ಸ್ವಾಯತ್ತತೆ

Social Share

ಬೆಂಗಳೂರು,ಮಾ.4- ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ ಅಭಿವೃದ್ಧಿ ಕಾಮಗಾರಿಗಳ ವಿವೇಚನೆಯನ್ನ ದೇವಾಲಯಗಳಿಗೆ ಪ್ರತ್ಯಾ ಯೋಜಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
( ಇಲ್ಲಿದೆ ಕಂಪ್ಲೀಟ್ ಬಜೆಟ್ ಹೈಲೈಟ್ಸ್ )
ಇಂದು ತಾವು ಮಂಡಿಸಿದ 2022-23ನೇ ಸಾಲಿನ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದೆ.
ಭಕ್ತಾಗಳ ಬೇಡಿಯನ್ನು ಪರಿಗಣಿಸಿ ಧಾರ್ಮಿಕ ಲಾಖೆ ದತ್ತಿ ವ್ಯಾಪ್ತಿಯ ಸ್ವಾಯತ್ತತೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. ಈ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳ ಅರ್ಚಕರ ಆಗಮಿಕರ ನೌಕರರಿಗೆ ನೆರವಾಗಲು ತಸ್ತಿಕ್ ಮೊತ್ತವನ್ನು 48 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು.
ದೇವಾಲಯಗಳ ಸೇವೆಗಳನ್ನು ಭಕ್ತಾಗಳಿಗೆ ಆನ್ಲೈನ್ ಮುಖಾಂತರ ಲಭ್ಯ ಪಡಿಸಲು ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.

Articles You Might Like

Share This Article