ಬೆಂಗಳೂರು,ಫೆ.28- ಏಳನೇ ವೇತನ ಆಯೋಗ ರಚನೆ ಹಾಗೂ ಎನ್‍ಪಿಎಸ್ ರದ್ದುಪಡಿಸಿ ಓಪಿಎಸ್ ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಕರೆ ನೀಡಿರುವ ಬಂದ್‍ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಾವು ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ನೀಡುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷ ಅಮೃತ್‍ರಾಜ್ ತಿಳಿಸಿದ್ದಾರೆ.
ನೌಕರರ ಬೇಡಿಕೆ ಈಡೇರುವವರಗೆ ಹೋರಾಟ ನಿಲ್ಲಿಸುವುದಿಲ್ಲ ಎಂಬ ಷಡಕ್ಷರಿ ಅವರ ನಿಲುವಿಗೆ ನಮ್ಮ ಸಂಘದ ಬೆಂಬಲವಿದೆ. ಹೀಗಾಗಿ ನಾಳೆಯಿಂದ ತುರ್ತು ಸೇವೆ ಹೊರತುಪಡಿಸಿ ಎಲ್ಲ ಬಿಬಿಎಂಪಿ ಕಚೇರಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಧುಮುಕುತ್ತಿದ್ದೇವೆ ನಾಳೆ ನಗರದಲ್ಲಿ ಕಸ ಎತ್ತುವ ಕಾರ್ಯಕ್ಕೆ ಪೌರ ಕಾರ್ಮಿಕರು ಗೈರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ
ಬಿಬಿಎಂಪಿ ಎಂಟು ವಲಯಗಳಲ್ಲಿರುವ ಆರೋಗ್ಯ, ಕಂದಾಯ ಸೇರಿದಂತೆ ಎಲ್ಲ ವಿಭಾಗದ ಅಧಿಕಾರಿಗಳು ಮತ್ತು ನೌಕರರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕೇವಲ ಬಿಬಿಎಂಪಿ ಮಾತ್ರವಲ್ಲ, ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು ನಾಳಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಸಾರ್ವಜನಿಕರ ಅತ್ಯವಶ್ಯಕವಾದ ಬರ್ತ್ ಸರ್ಟಿಫಿಕೇಟ್ ,ಡೆತ್ ಸರ್ಟಿಫಿಕೇಟ್ , ಟ್ಯಾಕ್ಸ್ ಪೇಮೆಂಟ್, ಎಲೆಕ್ಷನ್ ಅಪ್ಡೇಟ್ ಯಾವ ಕೆಲಸ ಕಾರ್ಯಗಳು ಬಿಬಿಎಂಪಿಯಲ್ಲಿ ನಾಳೆಯಿಂದ ನಡೆಯೊಲ್ಲ. ಬಿಬಿಎಂಪಿ ನೌಕರರ ಜತೆಗೆ ವೈದ್ಯರು, ನರ್ಸ್‍ಗಳು ಮತ್ತು ಲ್ಯಾಬ್ ಟೆಕ್ನಿಷಿಯನ್ಸ್‍ಗಳು ಭಾಗಿಯಾಗುತ್ತಿರುವುದರಿಂದ ರೋಗಿಗಳಿಗೆ ನಾಳೆ ಸೂಕ್ತ ರೀತಿಯ ಚಿಕಿತ್ಸೆ ಸಿಗೋದು ಅನುಮಾನವಾಗಿದೆ.
ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು
ಶಿಕ್ಷಕರುಗಳು ಪ್ರತಿಭಟನೆಗೆ ಬೆಂಬಲ ನೀಡಲಿರುವುದರಿಂದ ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸುವ ಸಾಧ್ಯತೆಗಳಿವೆ.
ಗಬ್ಬು ನಾರಲಿದೆ ನಗರ: ನಾಳಿನ ಹೋರಾಟಕ್ಕೆ ಪೌರ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ನಗರದಲ್ಲಿ ಕಸ ವಿಲೇವಾರಿಯಾಗುವುದು ಅನುಮಾನವಾಗಿದೆ. ಮುಷ್ಕರ ಮೂರ್ನಾಲ್ಕು ದಿನ ಮುಂದುವರೆದರೆ ಕಸ ಕೊಳೆತು ಇಡೀ ನಗರ ಗಬ್ಬು ನಾರುವುದು ಗ್ಯಾರಂಟಿಯಾಗಿದೆ.
ಕಸ ವಿಲೇವಾರಿ ಇರಲಿ ಬೀದಿಗಳಲ್ಲಿ ಕಸ ಗುಡಿಸಲು ಪೌರ ಕಾರ್ಮಿಕರು ನಿರಾಕರಿಸಿದ್ದಾರೆ. ಇದರ ಜೊತಗೆ ಬಿಬಿಎಂಪಿ ಮಾತ್ರವಲ್ಲದೆ, ಯೂನಿವರ್ಸಿಟಿ, ಬಿಡಿಎ, ಕಂದಾಯ, ಆರ್‍ಟಿಒ ಸೇರಿದಂತೆ ಎಲ್ಲ ಇಲಾಖೆಗಳು ನಾಳೆ ಬಂದ್ ಆಗಲಿವೆ.