ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರ ಆಕ್ಷೇಪ

Social Share

ಬೆಂಗಳೂರು,ನ.25- ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರ ವೇತನದಿಂದ ಹಣ ಕಟಾವು ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವಾಗಿದ್ದು, ಬಹಳಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ನವೆಂಬರ್ ತಿಂಗಳ ವೇತನದಲ್ಲಿ ಪುಣ್ಯಕೋಟಿ ಯೋಜನೆಗಾಗಿ ಎ ವೃಂದದ ಅಧಿಕಾರಿಗಳಿಂದ 11 ಸಾವಿರ, ಬಿ ವೃಂದದ ಅಧಿಕಾರಿಗಳಿಂದ 4 ಸಾವಿರ, ಸಿ ವೃಂದದ ಅಧಿಕಾರಿಗಳಿಂದ 400 ರೂ. ವಂತಿಗೆಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶ ಹೊರಡಿಸುವ ಪ್ರಕ್ರಿಯೆಗಳು ಶರವೇಗದಲ್ಲಿ ನಿರ್ಧಾರವಾಗಿದ್ದವು. ಇತ್ತೀಚೆಗೆ ರಾಜ್ಯ ಸರ್ಕಾರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿದೆ. ಅದರದ ಅಭಿನಂದನಾ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಯವರು ಪುಣ್ಯಕೋಟಿ ಯೋಜನೆಗೆ ನೆರವು ನೀಡುವಂತೆ ಮನವಿ ಮಾಡಿದ್ದರು.

ಅದಕ್ಕೆ ಪೂರಕವಾಗಿ ಸೆ.14ರಂದು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಯಾರೊಂದಿಗೂ ಚರ್ಚಿಸದೆ ಅ.14ರಂದು ಪತ್ರ ಬರೆದು ಸರ್ಕಾರಿ ನೌಕರರ ಮತ್ತು ಅಧಿಕಾರಿಗಳ ವೇತನದಲ್ಲಿ ವಂತಿಗೆ ಕಟಾವು ಮಾಡಿಕೊಳ್ಳಲು ಸಹಮತ ನೀಡಿದರು. ಖಜಾನೆ ಆಯುಕ್ತರು ಮಾರನೇ ದಿನವೇ ಅಧಿಕೃತ ಆದೇಶವನ್ನು ಹೊರಡಿಸಿದ್ದರು.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

ಒಂದು ವೇಳೆ ಪುಣ್ಯಕೋಟಿ ದತ್ತು ಯೋಜನೆಗೆ ವಂತಿಗೆ ನೀಡಲು ಇಚ್ಛೆ ಇಲ್ಲದವರು ನ.25ರೊಳಗಾಗಿ ಅಸಮ್ಮತಿಯ ಪತ್ರ ನೀಡಬೇಕೆಂದು ಸೂಚಿಸಲಾಗಿತ್ತು. ಇಂದು ನಿಗದಿತ ಗಡುವು ಮುಗಿದಿದ್ದು, ಬಹಳಷ್ಟು ಮಂದಿ ಅಸಮ್ಮತಿಯ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವ ವೇತನ ಆಯೋಗ ಜಾರಿಗೊಳಿಸಬೇಕಾದರೆ ಮುಂದಿನ ಸರ್ಕಾರದಿಂದಲೇ ಸಾಧ್ಯ. ಕೇವಲ ಸಮಿತಿ ರಚಿಸಿದ ಮಾತ್ರಕ್ಕೆ ಈಗಿನ ಸರ್ಕಾರ ಪ್ರತಿಫಲಾರ್ಥವಾಗಿ ಬೇಕಾಬಿಟ್ಟಿ ವಂತಿಗೆ ಕಟಾವು ಮಾಡಿಕೊಳ್ಳುವುದು ಸರಿಯಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಾವು ಮುಖ್ಯಮಂತ್ರಿಯವರಿಗೆ ಹತ್ತಿರವಾಗಲು ಸ್ವಘೋಷಿತ ಸಮ್ಮತಿ ನೀಡಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಮರ್ಪಕ ಚರ್ಚೆಗಳು ನಡೆದಿಲ್ಲ ಎಂಬ ಆಕ್ಷೇಪಗಳು ಸಾಮಾನ್ಯವಾಗಿವೆ.

ಮೇಲಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತನ್ನಿ ಎಂದು ಯಾರೂ ಕೇಳಿರಲಿಲ್ಲ. ರಾಜಕೀಯ ಕಾರಣಕ್ಕಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ತನ್ನ ಸ್ವಸ್ವಾಮಥ್ರ್ಯದಿಂದ ಈ ಯೋಜನೆಯನ್ನು ನಿರ್ವಹಣೆ ಮಾಡಬೇಕಿತ್ತು. ಆದರೆ ತಾನು ಮಾಡಿದ ತಪ್ಪಿಗೆ ಸರ್ಕಾರಿ ನೌಕರರಿಗೆ ದಂಡ ವಿಧಿಸುತ್ತಿರುವುದು ಯಾವ ನ್ಯಾಯ ಎಂಬ ಪ್ರಶ್ನೆಗಳು ಎದುರಾಗಿದೆ.

ಪುಣ್ಯಕೋಟಿ ದತ್ತು ಯೋಜನೆಯ ಲೆಕ್ಕಪತ್ರಗಳೇ ಅಸಂಬದ್ದವಾಗಿವೆ. ಸಂಗ್ರಹಿತ ಹಣದ ಖರ್ಚುವೆಚ್ಚಗಳು ಶಂಕೆ ಮೂಡಿಸುತ್ತವೆ. ಇದಕ್ಕೆ ಸರಿಯಾದ ನೋಡೆಲ್ ಅಧಿಕಾರಿಗಳಾಗಲಿ, ಇಲಾಖೆಯ ಕಾರ್ಯಸೂಚಿಯಾಗಲಿ ಇಲ್ಲ. ಮನಸ್ಸಿಗೆ ಬಂದಂತೆ ಆಡಳಿತ ವ್ಯವಸ್ಥೆ ನಡೆದುಕೊಳ್ಳುತ್ತಿದೆ.

ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ಈಗಾಗಲೇ ಸಮುದಾಯದಿಂದ ನೂರಾರು ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ. ಎಷ್ಟು ವಸೂಲಿಯಾಗಿದೆ, ಎಲ್ಲಿ ಖರ್ಚು ಮಾಡಲಾಗಿದೆ, ಎಷ್ಟು ಗೋವುಗಳನ್ನು ಸಾಕಾಲಾಗಿದೆ. ಎಷ್ಟು ಗೋಶಾಲೆಗಳ ನಿರ್ವಹಣೆಗೆ ಹಣ ಬಳಕೆಯಾಗಿದೆ ಎಂಬ ಯಾವ ಮಾಹಿತಿಗಳು ಪಾರದರ್ಶಕವಾಗಿಲ್ಲ.

ಎ ವೃಂದದ ಅಧಿಕಾರಿಗಳಿಂದ 11 ಸಾವಿರದಷ್ಟು ದುಬಾರಿ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ. ಇದು ಆರ್ಥಿಕವಾಗಿ ಹಲವಾರು ಬದ್ದತೆಗಳನ್ನು ಹೊಂದಿರುವ ಪ್ರಾಮಾಣಿಕ ಅಧಿಕಾರಿಗಳಿಗೆ ದುಬಾರಿ ಮೊತ್ತವಾಗಲಿದೆ.
ಕನಿಷ್ಟ ಸಂಬಂಧಿಸಿದ ಅಧಿಕಾರಿಯ ಸಮ್ಮತಿ ಪಡೆದು ವಂತಿಗೆ ಕಟಾವು ಮಾಡಬೇಕೆಂಬ ಸೌಜನ್ಯ ತೋರಿಸದೆ ಸರ್ವಾಧಿಕಾರಿಯಂತೆ ವಂತಿಗೆ ಕಟಾವು ಮಾಡುತ್ತೇವೆ. ಇಷ್ಟ ಇಲ್ಲದೇ ಇರುವವರು ಆಕ್ಷೇಪಣೆ ಪತ್ರ ಹೊರಡಿಸಿ ಎಂಬ ಆದೇಶ ಹೊರಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.

ಬಹಳಷ್ಟು ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಅಸಮ್ಮತಿ ಪತ್ರ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಅಂಕಿಸಂಖ್ಯೆಗಳನ್ನು ನೀಡಲು ಉನ್ನತ ಮೂಲಗಳು ನಿರಾಕರಿಸಿವೆ.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಆದರೆ ಅನೌಪಚಾರಿಕ ಮಾಹಿತಿ ಪ್ರಕಾರ ಶೇ.60ಕ್ಕಿಂತಲೂ ಹೆಚ್ಚು ಮಂದಿ ವಂತಿಗೆ ಕಟಾವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತೀವ್ರ ಆಕ್ಷೇಪಗಳು ವ್ಯಕ್ತವಾದಾಗ ಇಲಾಖೆ ಮುಖ್ಯಸ್ಥರು ಮಧ್ಯಪ್ರವೇಶ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮನವೊಲಿಸಿ ವಂತಿಗೆ ಕಟಾವಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲವೆಡೆ ಒತ್ತಾಯಪೂರ್ವಕವಾಗಿಯೂ ವೇತನ ಕಡಿತ ಮಾಡಲಾಗುತ್ತಿದೆ ಎಂಬ ಆಕ್ಷೇಪಗಳಿವೆ.

Government, employees, punyakoti, yojana, karnataka,

Articles You Might Like

Share This Article