ಕೋವಿಡ್‍ನಿಂದ ಪಾಠ ಕಲಿಯದ ಸರ್ಕಾರ : ಕಾಂಗ್ರೆಸ್ ಆಕ್ರೋಶ

Social Share

ಬೆಂಗಳೂರು, ಡಿ.13- ಕೋವಿಡ್‍ನಿಂದ ಯಾವುದೇ ಪಾಠ ಕಲಿಯದ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯನ್ನು ಇನ್ನಷ್ಟು ಹದಗೆಡಿಸಿದೆ, ಆಂಬುಲೆನ್ಸ್, ಚಿಕಿತ್ಸೆ ಕೊರತೆಗಳಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಟ್ವೀಟ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇದೇ ಹೊತ್ತಿನಲ್ಲಿ ಅಕಾಲಿಕ ಮಳೆಯಿಂದಾಗಿ ಝೀಕಾ, ಡೆಂಘ್ಯೂ, ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚುತ್ತಿವೆ. ವೈದ್ಯಕೀಯ ಸೇವೆಯನ್ನು ಸನ್ನದ್ದಗೊಳಿಸಲು ಕೈಗೊಂಡಿರುವ ಕ್ರಮಗಳು ಸಾಲುತ್ತಿಲ್ಲ.

ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ, ಸರ್ಕಾರ ಮಾತ್ರ ¿ಆತಂಕಪಡಬೇಕಿಲ್ಲ¿ ನಿರ್ಲಕ್ಷ್ಯದ ಹೇಳಿಕೆ ನೀಡಿ ಸುಮ್ಮನಿದೆ. ಸೊಳ್ಳೆಗಳಿಂದ ಹರಡುವ ಈ ಸೋಂಕಿಗೆ ಅಕಾಲಿಕ ಮಳೆ ಮತ್ತಷ್ಟು ಬಲ ಕೊಡಬಹುದಾದ ಸಾಧ್ಯತೆ ಇದೆ. ಸೋಂಕನ್ನು ಉಡಾಫೆಯಿಂದ ನೋಡದೆ ಆರೋಗ್ಯ ಸಚಿವ ಡಾ. ಸುಧಾಕರ್ ಕೂಡಲೇ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ

ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ, ಹಲ್ಲೆ, ಸುಲಿಗೆ, ದರೋಡೆಗಳಂತಹ ಕ್ರೈಮಗಳನ್ನು ಪೊಲೀಸರೇ ಮಾಡುವಂತಹ ಸ್ಥಿತಿ ನಿರ್ಮಿಸಿದ್ದು , ಬಿಜೆಪಿ ಸರ್ಕಾರದ ಸಾಧನೆಗಳಲ್ಲೊಂದು. ಗೃಹ ಇಲಾಖೆಯನ್ನು ಸುಲಿಗೆ ಇಲಾಖೆಯನ್ನಾಗಿ ಮಾಡಿದ ಕೀರ್ತಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಲ್ಲುತ್ತದೆ ಎಂದಿದೆ.

ನೋಟ್ ಬ್ಯಾನ್‍ನಿಂದಾದ ಪ್ರಯೋಜನಗಳೇನು ಎಂದು ಇದುವರೆಗೂ ಬಿಜೆಪಿ ಸರ್ಕಾರ ಹೇಳಲು ತಯಾರಿಲ್ಲ. ಮಾದಕವಸ್ತು ವ್ಯವಹಾರಕ್ಕೆ, ಭಯೋತ್ಪಾದನೆಗೆ, ಹವಾಲಾ ದಂಧೆಗೆ 2000 ರೂಪಾಯಿ ನೋಟುಗಳು ಬಳಕೆಯಾಗುತ್ತಿವೆ, 2000 ನೋಟು ತಂದಿದ್ದೇಕೆ ಎಂದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ಸಂಸದರೇ ಕೇಳಿದ್ದಾರೆ, ತಮ್ಮದೇ ಸಂಸದರಿಗಾದರೂ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವರೇ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಎಸ್‍ಸಿ ಒಳಮೀಸಲಾತಿ ಜಾರಿಗೆ ಸಂಪುಟ ಉಪಸಮಿತಿ ರಚನೆ

ಯೋಜನೆಗಳ ಮೇಲ್ವಿಚಾರಣೆಗೆ ಪ್ರತಿ ತಾಲ್ಲೂಕಿಗೆ 5 ಅಧಿಕಾರಿಗಳ ರೈತಬಂಧು ಸೇವೆ ಸ್ಥಾಪನೆ ಮಾಡುತ್ತೇವೆ ಎಂದಿತ್ತು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಈಗ ರೈತರಿಗೆ ¿ಬಂಧು¿ ಆಗುವ ಬದಲು ರೈತರನ್ನು ¿ಕೊಂದು¿ ಬಿಜೆಪಿ ಆಳುತ್ತಿದೆ. ರೈತರನ್ನು ಕೇಳುವವರೇ ಇಲ್ಲ, ರೈತಪರ ಯೋಜನೆಗಳೂ ಇಲ್ಲ. ಏಕೆ ಹೀಗೆ ಬಸವರಾಜ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಲಾಗಿದೆ.

BJP government, not learning, Covid, Congress,

Articles You Might Like

Share This Article