ಬೆಂಗಳೂರು,ಡಿ.11- ರಾಜ್ಯಪಾಲರ ಚಾಲಕರಾಗಿದ್ದ ರವಿಕುಮಾರ್ ಎಸ್. ಕಾಳೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಮಧ್ಯ ರಾತ್ರಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಜ್ಯಪಾಲರನ್ನು ಕರೆ ತರಲು ವಿವಿಐಪಿ ಲಾಂಚ್ ಬಳಿ ಕಾಯುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಅವರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು.
2023 ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ
ಆದರೆ ಮಾರ್ಗಮಧ್ಯೆಯೇ ಹೃದಯಾಘಾತವಾಗಿ ರವಿಕುಮಾರ್ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿದ ರಾಜ್ಯಭವನ ಸಿಬ್ಬಂದಿಗಳು, ಅಗಲಿದ ರವಿಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬಲವಂತದ ಮತಾಂತರ : ಪಾಕ್ ಮೌಲಾನಗಳಿಗೆ ಬ್ರಿಟನ್ ನಿಷೇಧ
#Governor, #CarDriver, #Died, #heartattack,