ಕಾಂಗ್ರೆಸ್ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದೆ : ಕಾರಜೋಳ

Social Share

ಬೆಳಗಾವಿ,ಡಿ.19-ವೀರ್ ಸಾವರ್ಕರ್ ಫೋಟೋ ಅನಾವರಣ ಮಾಡುವುದರಿಂದ ಕಾಂಗ್ರೆಸ್‍ಗೆ ಏನಾ ಗುತ್ತದೆಯೋ ಗೊತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಕರ್ ಈ ದೇಶದ ಗೌರವಾನ್ವಿತ ವ್ಯಕ್ತಿ. ದೇಶಕ್ಕಾಗಿ ಹೋರಾಟ ಮಾಡಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ನವರು ಈಗಾಗಲೇ ವಿವೇಚನಾ ರಹಿತವಾದಂತಹ ವಿಚಾರಗಳನ್ನ ಪ್ರಸ್ತಾಪಿಸಿ, ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ, ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಈಗಲೂ ಅವರಿಗೆ ಬುದ್ದಿ ಬಂದಿಲ್ಲ ಅಂದರೆ ಜನರೇ ತಿರ್ಮಾನ ಮಾಡುತ್ತಾರೆ ಎಂದರು.

ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಜೀ ಸೇರಿದಂತೆ ಇನ್ನೂ ಹಲವು ನಾಯಕರ ಫೋಟೋ ಹಾಕುತ್ತೇವೆ. ಬಸವಣ್ಣನವರ ಬಗ್ಗೆ ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ವಿರೋಧದ ನಡುವೆಯೂ ಸುವರ್ಣಸೌಧದಲ್ಲಿ ಸಾರ್ವಕರ್ ಭಾವಚಿತ್ರ ಲೋಕಾರ್ಪಣೆ

ಜನರು ಕಾಂಗ್ರೆಸ್‍ನ್ನು ತಿರಸ್ಕಾರ ಮಾಡಿದ್ದಕ್ಕೆ ಅವರು ಬೀದಿಗೆ ಬಿದ್ದಿದ್ದಾರೆ. ಅವರ ಪಾಲಿಗೆ ಇರುವುದು ಬೀದಿ ಹೋರಾಟ. ಅವರಿಗೆ ಅಧಿಕಾರ ನಡೆಸಲು ಈ ದೇಶದ ಜನ ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

ಬಿಜೆಪಿ ವೋಟ್‍ಗಳನ್ನು ತೆಗೆದು ಹಾಕಲು ಕಾಂಗ್ರೆಸ್ ನವರು ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ನನ್ನ ಮತ ಕ್ಷೇತ್ರದ ಕೆಲ ಹಳ್ಳಿಗಳಿಂದಲೂ ಈಗಾಗಲೇ ದೂರುಗಳು ಬಂದಿವೆ. ಈ ರೀತಿಯಾದ ವೋಟ್‍ಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಎಲ್ಲಾ ಕಡೆ ಗದ್ದಲವನ್ನು ಮಾಡುತ್ತಿದ್ದಾರೆ. ಈ ರೀತಿ ಸ್ವಾತಂತ್ರ್ಯ ನಂತರದ ಮಾಡಿರುವ ಅಪರಾಧದ ಹಿನ್ನೆಲೆಯಿಂದಲೇ ಕಾಂಗ್ರೆಸ್‍ನ್ನು ದೇಶದಲ್ಲಿ ತಿರಸ್ಕರಿಸಿದ್ದಾರೆ ಎಂದರು.

Govind Karjol, Congress, veer savarkar, photo, suvarna soudha,

Articles You Might Like

Share This Article