ಬೆಂಗಳೂರಲ್ಲಿ ಒತ್ತುವರಿ ಮಾಡಿಕೊಂಡವರಿಗೆ ಸದ್ಯದಲ್ಲೇ ಕಾದಿದೆ ಮರ್ಮಾಘಾತ

Social Share

ಬೆಂಗಳೂರು,ಸೆ.1- ನಗರದಲ್ಲಿ ಕಾನೂನುಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡ ಮಾಲೀಕರಿಗೆ ಸಧ್ಯದಲ್ಲೇ ರಾಜ್ಯ ಸರ್ಕಾರ ಮರ್ಮಾಘಾತ ನೀಡಲಿದೆ.

ಮಳೆ ಬಂದಾಗ ನೀರು ಸರಿಯಾಗಿ ರಾಜುಕಾಲುವೆಗೆ ಹರಿದು ಹೋಗದ ಕಾರಣ, ನೂರಾರು ತೊಂದರೆಗಳು ಉಂಟಾಗಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳು ಅ್ಟಷ್ಟಲ್ಲ. ಹೀಗಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಸದ್ಯದಲ್ಲೇ ಒತ್ತುವರಿ ತೆರವುಗೊಳಿಸುವ ಕಾರ್ಯಚರಣೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.

ಬುಧವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಂದಾಯ, ಬಿಬಿಎಂಪಿ ಸೇರಿದಂತೆ ಕೆಲವು ಅಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಸರ್ಕಾರದ ಯಾವುದೇ ಕ್ರಮ ಉಪಯೋಗಕ್ಕೆ ಬರುವದಿಲ್ಲ ಎಂದು ಅಕಾರಿಗಳು ಮನವರಿಕೆ ಮಾಡಿದ್ದಾರೆ.

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿ.ಎಂ. ಬೊಮ್ಮಾಯಿ ಅವರು, ನಗರದ ಯಾವ ಯಾವ ಭಾಗದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದರೋ ಅದನ್ನು ಗುರುತಿಸಿ ಅದಷ್ಟು ಶೀಘ್ರ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದ್ದು, 2626 ಕಡೆ ಒತ್ತುವರಿ ಗುರುತಿಸಲಾಗಿತ್ತು. ಇದರಲ್ಲಿ 1890 ಒತ್ತುವರಿ ಜಾಗ ತೆರವುಗೊಳಿಸಿದ್ದು, 736 ಕಡೆ ತೆರವುಗೊಳಿಸುವುದು ಬಾಕಿ ಇದೆ ಎಂದು ರಾಜಕಾಲುವೆ ಭಾಗದ ಅಕಾರಿಗಳು ಹೈಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ರಾಜಕಾಲುವೆ ಅತಿಕ್ರಮಣ ತೆರಗೆ ಬಾಕಿ ಇರುವ 736 ಪ್ರಕರಣಗಳಲ್ಲಿ 298 ಕಟ್ಟಡಗಳು, 69 ಕಾಂಪೌಂಡ್‍ಗಳೂ ಸೇರಿವೆ. ಈಗಾಗಲೇ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ 65 ಕಟ್ಟಡ ಮಾಲೀಕರು ಒತ್ತುವರಿ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಡೆದುಕೊಂಡಿದ್ದಾರೆ.ಇದನ್ನು ತೆರವು ಮಾಡಲು ಕಾನೂನು ತಜ್ಞರ ಜೊತೆ ಚರ್ಚೆಸಿ ಎಂದು ಸೂಚಿಸಿದ್ದಾರೆ.

ಭೂದಾಖಲೆಗಳ ಇಲಾಖೆಯ ಸರ್ವೇಯರ್‍ಗಳು ರಾಜಕಾಲುವೆಯನ್ನು ಕಬಳಿಸಿರುವ ಖಾಲಿ ನಿವೇಶನಗಳು, ಕಟ್ಟಡಗಳು, ಕಾಂಪೌಂಡ್ಗಳನ್ನು ಗುರುತಿಸಿ, ವರದಿ ಕೊಟ್ಟಿದ್ದಾರೆ. ಇದಲ್ಲದೆ, 369 ಒತ್ತುವರಿ ಪ್ರಕರಣಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಒತ್ತುವರಿ ಗುರುತಿಸಿಕೊಟ್ಟಿರುವ ಕಡೆ ತೆರವು ಕಾರ್ಯಾಚರಣೆ ಆರಂಭಿಸಬೇಕು ಎಂದು ಹೇಳಿದ್ದಾರೆ.

ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ತಯಾರು ಮಾಡಿದೆ. ಒಟ್ಟು 714 ಕಟ್ಟಡಗಳ ತೆರವು ಮಾಡಲು ತೀರ್ಮಾನ ಕೈಗೊಂಡಿದೆ. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯ 59 ಕಟ್ಟಡ, ದಕ್ಷಿಣ ವಲಯ 20, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ ವಲಯ 103, ಮಹದೇವಪುರ ವಲಯ 184 ಕಟ್ಟಡ, ಬೊಮ್ಮನಹಳ್ಳಿ ವಲಯ 92, ಆರ್.ಆರ್. ನಗರ ವಲಯ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ತಯಾರಿಸಲಾಗಿದೆ ಎಂದು ಬಿಬಿಎಂಪಿ ಅಕಾರಿಯೊಬ್ಬರು ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯ ಕಂಡುಬರುತ್ತಿದೆ. ಸಣ್ಣ ಪುಟ್ಟ ಮಳೆಗೂ ಬೆಂಗಳೂರು ಪ್ರವಾಹ ಎದುರಿಸುತ್ತಿದೆ. ರಾಜಕಾಲುವೆ ಒತ್ತುವರಿ ಪ್ರವಾಹಕ್ಕೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಇದೀಗ, ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲು ತೀರ್ಮಾನ ಮಾಡಲಾಗಿದೆ. ಇದೀಗ ಶತಾಯಗತಾಯ ಒತ್ತುವರಿ ತೆರಗೆ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿಯಿಂದ ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ ಎಂದು ವಿವರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 842 ಕಿ.ುೀ ಉದ್ದದ ರಾಜಕಾಲುವೆ ಜÁಲವಿದ್ದು, ಇದರಲ್ಲಿ500 ಎಕರೆಯಷ್ಟು ಕಾಲುವೆ ಜÁಗವು ಒತ್ತುವರಿಯಾಗಿತ್ತು. 11 ಸಾವಿರ ಕೋಟಿ ರೂ. ಮËಲ್ಯದ ಭೂಮಿ ಕಬಳಿಕೆಯಾಗಿತ್ತು. ಬಿಬಿಎಂಪಿ ಅಕಾರಿಗಳು ಕಂದಾಯ ಇಲಾಖೆ ಸಹಯೋಗದಲ್ಲಿ 2626 ಕಡೆ ರಾಜಕಾಲುವೆ ಒತ್ತುವರಿಯಾಗಿರುವುದನ್ನು ಗುರುತಿಸಿದ್ದರು. ಈ ಪೈಕಿ 1890 ಕಡೆ ಒತ್ತುವರಿ ತೆರವುಗೊಳಿಸಿದ್ದಾರೆ.

ಇನ್ನೂ 736 ಕಡೆ ಒತ್ತುವರಿ ತೆರವು ಬಾಕಿ ಇದೆ. ಖಾಲಿ ಜÁಗಗಳ ಒತ್ತುವರಿಯನ್ನು ಅನಾಯಾಸವಾಗಿ ತೆರವುಗೊಳಿಸಿ ವಶಕ್ಕೆ ಪಡೆದಿರುವ ಪಾಲಿಕೆ ಅಕಾರಿಗಳು, ಕಟ್ಟಡಗಳನ್ನು ಮುಟ್ಟುವ ಧೈರ್ಯ ಮಾಡಿಲ್ಲ. ೀಗಾಗಿ, 348 ಕಟ್ಟಡಗಳು ಕಾಲುವೆ ಮೇಲೆಯೇ ಇವೆ. ರಾಜಕಾಲುವೆಗಳ ಅಂಚಿನಿಂದ 30 ಮೀ ಮೀಸಲು ಪ್ರದೇಶ ಕಾಯ್ದುಕೊಳ್ಳಬೇಕಿದೆ. ಈ ಬಫರ್ ಜೋನ್‍ನಲ್ಲಿ 1,34,786 ಕಟ್ಟಡಗಳು ನಿರ್ಮಾಣವಾಗಿವೆ ಎಂದು ಮಾಹಿ0ತಿ ನೀಡಿದ್ದಾರೆ.

Articles You Might Like

Share This Article