ರಾಜೀವ್ ಗಾಂಧಿ ಫೌಂಡೇಶನ್‍ಗೆ ವಿದೇಶಿ ಕೊಡುಗೆ ರದ್ದು

Social Share

ನವದೆಹಲಿ.ಅ,23- ಕಾನೂನು ನಿಯಮ ಉಲ್ಲಂಘನೆ ಆರೋಪದ ಮೇಲೆ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ ರಾಜೀವ್ ಗಾಂಧಿ ಫೌಂಡೇಷನ್ (ಆರ್‍ಜಿಎಫ್) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಪರವಾನಗಿ ಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದೆ.

ಕಳೆದ 2020ರಲ್ಲಿ ಗೃಹ ಸಚಿವಾಲಯವು ರಚಿಸಿದ ಅಂತರ-ಸಚಿವಾಲಯ ಸಮಿತಿಯು ನಡೆಸಿದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್‍ಜಿಎಫ್‍ನ ಅಧ್ಯಕ್ಷರಾಗಿದ್ದರೆ, ಇತರ ಟ್ರಸ್ಟಿಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ.

ಕಾಂಗ್ರೆಸ್ ಭಾರತ್ ಜೊಡೋಯಾತ್ರೆ ಕುರಿತು ಪ್ರಹ್ಲಾದ್ ಜೋಶಿ ವ್ಯಂಗ್ಯ

ಕಳೆದ 1991 ರಲ್ಲಿ ಸ್ಥಾಪಿಸಲಾಗಿದ್ದು 2009 ರವರೆಗೆ ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರು ಮತ್ತು ಮಕ್ಕಳು, ವಿಕಲಚೇತನರಿಗೆ ನೆರವು ಸೇರಿದಂತೆ ಹಲವಾರು ನಿರ್ಣಾಯಕ ಕ್ಷೇತ್ರದಲ್ಲಿ ಕೆಲಸ ಮಾಡಿದೆ.
ವೆಬ್‍ಸೈಟ್ ಪ್ರಕಾರ ಇದು ಶಿಕ್ಷಣ ಕ್ಷೇತ್ರದಲ್ಲೂ ತೊಡಗಿದ್ದು ,ವಿದೇಶಿ ಹಣ ದೇಣಿಗೆ ಕುರಿತು ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧದ ತನಿಖೆಯ ನಂತರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಆದರೆ ಕೇಂದ್ರ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

Articles You Might Like

Share This Article