ಸರ್ಕಾರಿ ನೌಕರರಿಗೆ ಸಪ್ಪೆಯಾದ ಬೊಮ್ಮಾಯಿ ಬಜೆಟ್

Social Share

ಬೆಂಗಳೂರು,ಮಾ.4- ಬಹುನಿರೀಕ್ಷಿತ ಏಳನೆ ವೇತನ ಆಯೋಗದ ರಚನೆ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲದೆ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.
ರಾಜ್ಯದಲ್ಲಿ ಆರನೆ ವೇತನ ಆಯೋಗ ಜಾರಿಯಲ್ಲಿದ್ದು, ಹಣದುಬ್ಬರ ಹಾಗೂ ಗ್ರಾಹಕರ ಸೂಚ್ಯಂಕಕ್ಕನುಗುಣವಾಗಿ ವೇತನ ಪರಿಷ್ಕರಣೆಯಾಗಬೇಕೆಂದು ಸರ್ಕಾರಿ ನೌಕರರು ಒತ್ತಾಯಿಸಿದ್ದು, ಮುಂದಿನ ಬೆಜೆಟ್‍ನಲ್ಲಿ 7ನೇ ವೇತನ ಆಯೋಗ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದರು. ಆದರೆ, ಇಂದು ಆ ಬಗ್ಗೆ ಆಯವ್ಯಯದಲ್ಲಿ ಚಕಾರವಿಲ್ಲ.
ಆಡಳಿತ ಸುಧಾರಣೆ ಬಗ್ಗೆ ಭರವಸೆಯ ಮಾತುಗಳನ್ನಾಡಿರುವ ಮುಖ್ಯಮಂತ್ರಿಯವರು ತಂತ್ರಜ್ಞಾನದ ನೆರವಿನಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ನೇರವಾಗಿ ತಲುಪಿಸಲಾಗುವುದು.
ಎರಡನೇ ಆಡಳಿತ ಸುಧಾರಣಾ ಆಯೋಗದ ಹಲವಾರು ಶಿಫಾರಸುಗಳನ್ನು ಜಾರಿಗೊಳಿಸಿ ಜನಸ್ನೇಹಿ ಆಡಳಿತದ ಬದ್ದತೆಯನ್ನು ದೃಢೀಕರಿಸಲಾಗುವುದು ಎಂದಿದ್ದಾರೆ.

Articles You Might Like

Share This Article