ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ಬದ್ಧ : ಆರಗ ಜ್ಞಾನೇಂದ್ರ

Social Share

ಮಂಗಳೂರು, ನ.23- ರಾಜ್ಯದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ ಎಂದು ಗೃಹಸಚಿವರಾದ ಆರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದರು. ನಗರದಲ್ಲಿ ಆಟೋರಿಕ್ಷಾ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಸಚಿವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೀರ್ಥಹಳ್ಳಿ ಮೂಲದ ಉಗ್ರ ಶಾರಿಕ್ಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆತ ಗುಣಮುಖವಾಗಿ ಆರೋಗ್ಯ ಸುಧಾರಿಸಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು.
ತೀರ್ಥಹಳ್ಳಿ ಮೂಲದ ಶಾರಿಕ್ ಹಿನ್ನೆಲೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.

ಗಾಯಗೊಂಡಿರುವ ಆಟೋ ಚಾಲಕನ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದಾಗಿ ಸಚಿವರು ತಿಳಿಸಿದರು. ಆಟೋ ಚಾಲಕ ಪುರುಷೋತ್ತಮ್ ಕುಟುಂಬಸ್ಥರಿಗೆ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಎಸ್‍ಐ ನೇಮಕಾತಿ ಅಕ್ರಮ : ಆರೋಪಿಗಳಿಂದ 3.11 ಕೋಟಿ ರೂ. ಜಪ್ತಿ

ಮಂಗಳೂರಿನಲ್ಲಿ ಎನ್ಐಎ ಕಚೇರಿ ತೆರೆಯಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ ಎಂದರು. ಈ ಸ್ಪೋಟ ಪ್ರಕರಣವನ್ನು ಎನ್ಐಎ ಗೆ ವಹಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಉಗ್ರರ ಸಂಪರ್ಕದಿಂದಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಕರಾವಳಿ, ಕೇರಳ ಭಾಗದವರ ಸಂಪರ್ಕದಿಂದ ಉಗ್ರ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ತುಂಡು ತುಂಡಾಗಿ ಕತ್ತರಿಸುವುದಾಗಿ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್‍

ಘಟನೆ ನಂತರ ಪೊಲೀಸರು ಮೈಸೂರು, ಬಳ್ಳಾರಿ, ಕೊಯಮತ್ತೂರು, ಊಟಿ ಸೇರಿದಂತೆ ಏಳು ಕಡೆಗಳಲ್ಲಿ ದಾಳಿ ಮಾಡಿ ಇದುವರೆಗೂ ಆರು ಮಂದಿಯನ್ನು ಬಂಸಿದ್ದಾರೆ. ಉಗ್ರ ಶಾರಿಕ್ ಯಾರ್ಯಾರ ಸಂಪರ್ಕದಲ್ಲಿದ್ದನು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ನ.19ರಂದು ಪಡೀಲ್ ಕಡೆಯಿಂದ ಪಂಪ್ವೆಲ್ಗೆ ಬರುತ್ತಿದ್ದ ಆರೋಪಿ ಶಾರಿಕ್ ಆಟೋ ರಿಕ್ಷಾದಲ್ಲಿ ಕುಕ್ಕರ್ನ್ನು ಕೊಂಡೊಯ್ಯುತ್ತಿದ್ದಾಗ ಬಾಂಬ್ ಸ್ಪೋಟಗೊಂಡಿತ್ತು.

Govt, fight, terrorism, home minister, araga jnanendra,

Articles You Might Like

Share This Article