ಆ್ಯಸಿಡ್ ದಾಳಿಗೊಳಗಾದ ಮಹಿಳೆಗೆ ಸರ್ಕಾರಿ ಉದ್ಯೋಗ : ಸಿಎಂ ಭರವಸೆ

Social Share

ಬೆಂಗಳೂರು, ನ.1- ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಮಹಿಳೆಗೆ ಸರ್ಕಾರಿ ಉದ್ಯೋಗ ಹಾಗೂ ಬೆಂಗಳೂರಿನಲ್ಲಿ ವಸತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಕಳೆದ ಏ.28ರಂದು ಯುವತಿಯು ಆ್ಯಸಿಡ್ ದಾಳಿಗೆ ತುತ್ತಾಗಿದ್ದರು. ಸರ್ಕಾರದಿಂದ ಅನುಕಂಪದ ಅಧಾರದಲ್ಲಿ ಕೆಲಸ, ಮನೆ, ಪರಿಹಾರ ನೀಡುವ ಭರವಸೆಯನ್ನು ನೀಡಲಾಗಿತ್ತು.

ಇದುವರೆಗೂ ಭರವಸೆ ಈಡೇರದ ಕಾರಣ ಇಂದು ಯುವತಿಯು ಆರ್‍ಟಿನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿ ಬೊಮ್ಮಾಯಿ ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ಯುವತಿಯನ್ನು ಮಮತೆಯಿಂದಲೇ ಆರೋಗ್ಯ ವಿಚಾರಿಸಿದ ಸಿಎಂ ಸರ್ಕಾರದಿಂದ ಏನೆಲ್ಲ ಸಹಾಯ ನೀಡಬೇಕೊ ಅದೆಲ್ಲವನ್ನು ನೀಡುವುದಾಗಿ ಯುವತಿ ಮತ್ತು ಕುಟುಂಬದವರಿಗೆ ಆಶ್ವಾಸನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಇಂದು ಆ್ಯಸಿಡ್ ದಾಳಿಗಾದ ಯುವತಿ ಮತ್ತು ಆಕೆಯ ಕುಟುಂಬದವರು ನನ್ನನ್ನು ಭೇಟಿ ಮಾಡಿದ್ದಾರೆ. ಇಂದೇ ಮುಖ್ಯ ಕಾರ್ಯದರ್ಶಿ ಅವರ ಜೊತೆ ಯುವತಿ ಬಗ್ಗೆ ಮಾತನಾಡಿ ಆಕೆಗೆ ಸರ್ಕಾರಿ ನೌಕರಿ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2022)

ಸರ್ಕಾರ ಈಗಾಗಲೇ ಆ್ಯಸಿಡ್ ದಾಳಿಗೆ ಒಳಗಾಗಿರುವವರಿಗೆ ಮಾಸಾಶನ ಹೆಚ್ಚಿಸಿದೆ. 3 ಸಾವಿರದಿಂದ 10 ಸಾವಿರಕ್ಕೆ ಮಾಸಾಶನ ಏರಿಸಲಾಗಿದೆ. ಈ ಯುವತಿಗೆ ಮಾಸಾಶನವನ್ನೂ ಕೊಡುತ್ತೇವೆ ಎಂದು ತಿಳಿಸಿದರು.ಬೆಂಗಳೂರು ಸಮೀಪ 40 ಸಾವಿರ ಮನೆಗಳ ನಿರ್ಮಾಣ ಆಗುತ್ತಿದೆ. ಈ ಯುವತಿಗೂ ಒಂದು ಮನೆ ಕೊಡುತ್ತೇವೆ. ಈ ಬಗ್ಗೆ ವಸತಿ ಸಚಿವರೊಂದಿಗೆ ಮಾತನಾಡಿ ಆಕೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

Articles You Might Like

Share This Article