ಬೆಂಗಳೂರು, ಡಿ.6- ಒಲಂಪಿಕ್ ಹಾಗೂ ಪ್ಯಾರಾ ಒಲಂಪಿಕ್ನಲ್ಲಿ ಪದಕ ಗಳಿಸಿ ಪದವಿ ಪಡೆದವರು ಎ ಗ್ರೇಡ್ ಹುದ್ದೆಗೆ ನೇರ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜಭವನದಲ್ಲಿಂದು ನಡೆದ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಹಾಗೂ ಗುಜರಾತ್ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಏಷಿಯನ್ ಗೇಮ್ಸïನಲ್ಲಿ ಪದಕ ಗಳಿಸಿ ಪದವಿ ಪಡೆದವರಿಗೆ ಬಿ ಗ್ರೇಡ್ ಹುದ್ದೆಗೆ ನೇರ ನೇಮಕ ಮಾಡಲಾಗುವುದು. ಬೇರೆ ಹಂತದಲ್ಲಿ ಪದಕ ಪಡೆದವರಿಗೆ ಸಿ ಮತ್ತು ಡಿ ದರ್ಜೆ ಹುದ್ದೆ ನೀಡಲಾಗುವುದು. ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ಎಸಿಎಸ್ ನೇತೃತ್ವದಲ್ಲಿಯೇ ನೇರ ನೇಮಕಾತಿ ಮಾಡಲಾಗುವುದು ಎಂದರು.
ಏನಾದರು ಸಾಧನೆ ಮಾಡಲು ಅದರ ಹಿಂದೆ ದೊಡ್ಡ ಪರಿಶ್ರಮ ಇರುತ್ತದೆ. ಅದು ಸಾ„ಸಿದರೆ ಯಶಸ್ಸು ಖಂಡಿತ. ಪ್ರಥಮಬಾರಿಗೆ ಕೇಂದ್ರ ಹಾಗೂ ರಾಜ್ಯಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಕ್ರೀಡೆ ಮೊದಲು ಹವ್ಯಾಸವಾಗಿತ್ತು. ಈಗ ಕಾಲ ಬದಲಾಗಿದೆ. ಕ್ರಿಡೆಯ ಮೂಲಕ ದೇಶಗಳನ್ನು ಗುರುತಿಸುವ ಕೆಲಸವಾಗುತ್ತಿದೆ. ಅದಕ್ಕೆ ನಮ್ಮ ಪ್ರಧಾನಿಗಳು ಖೇಲೊ ಇಂಡಿಯಾ ಎಂದು ಹೇಳಿದರು.
ನಂತರ ಫಿಟ್ ಇಂಡಿಯಾ ಅಂದರು. ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಜೀತೊ ಇಂಡಿಯಾ ಅಂದರು. ಒಲಿಂಪಿಕ್ಸ್ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದರು ಎಂದು ಹೇಳಿದರು.
ನಮ್ಮ ರಾಜ್ಯ ಕ್ರೀಡೆಗೆ ಹೆಚ್ಚಿನ ಆದ್ಯತೆ ನಿಡುತ್ತಿದೆ. ಒಲಿಂಪಿಕ್ನಲ್ಲಿ ಪದಕ ಗೆದ್ದರೆ ಅದು ಸಾಧನೆ. ಕ್ರೀಡಾಪಟುಗಳಿಗೆ ಸಕಾರಾತ್ಮಕ ಮನೋಬಾವ ಮುಖ್ಯ. ಸೋಲಬಾರದೆಂದು ಆಡುವುದಕ್ಕಿಂತ ಗೆಲ್ಲಬೇಕೆಂದು ಆಡಬೇಕು. ಆಗ ಗೆಲ್ಲುವ ಅವಕಾಶ ಹಚ್ಚು.
ನಮ್ಮ ಸರ್ಕಾರ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಗ್ರಾಮಿಣ ಕ್ರೀಡೆಗಳನ್ನು ಆಯೋಜಿಸುತ್ತಿದ್ದೇವೆ. ಕ್ರಿಡಾಪಟುಗಳು ಒಳ್ಳೆಯ ಮಾನವೀಯ ಗುಣವುಳ್ಳವರಾಗಿರುತ್ತಾರೆ. ರಾಜ್ಯಪಾಲರು ಕ್ರಿಡೆಗೆ ಹೆಚ್ಚಿನ ಪೊ್ರೀತ್ಸಾಹ ನೀಡುತ್ತಾರೆ. ನಮಗೂ ಪ್ರೇರಣೆ ನೀಡುತ್ತಾರೆ.
ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಂತವರನ್ನು ಯಾರೂ ಮರೆಯಬಾರದು ಮತ್ತು ಬೇರೆಯವರಿಗೆ ನೀವೂ ಪೊ್ರೀತ್ಸಾಹ ನೀಡಬೇಕು ಎಂದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕ್ರೀಡಾಪಟುಗಳುಗಳಿಗೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು, ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮತ್ತಿತರರಿದ್ದರು.
#GovtJob #ParalympicsMedalWinners #BasavarajBommai