3.89 ಕೋಟಿ ರೂ. ಮೌಲ್ಯದ 6 ಎಕರೆ 26 ಗುಂಟೆ ಪ್ರದೇಶ ಒತ್ತುವರಿ ತೆರವು

Social Share

ಬೆಂಗಳೂರು ನಗರ, ಮಾ.5 : ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ದಿನಾಂಕ 5-3-2022 ರಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ 11ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರು ಪೂರ್ವ-ಯಲಹಂಕ ತಾಲೂಕಗಳಲ್ಲಿ ಸರ್ಕಾರಿ ಗೋಮಾಳ 28 ಗುಂಟೆ ವಿಸ್ತೀರ್ಣದ ಪ್ರದೇಶ ಒತ್ತುವರಿ ಮಾಡಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಸರ್ಕಾರಿ ಖರಾಬು ಜಮೀನು 22 ಗುಂಟೆ ವಿಸ್ತೀರ್ಣ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ 02 ಗುಂಟೆ ಸರ್ಕಾರಿ ಗುಂಡುತೋಪನ್ನು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಆನೇಕಲ್ ತಾಲೂಕಿನ 7 ಗುಂಟೆ ವಿಸ್ತೀರ್ಣದ ಸ್ಮಶಾನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಒಟ್ಟು ₹ 3,89,37,00,000/- ಮೌಲ್ಯದ ಒಟ್ಟು 6-26 ಎ/ಗು ವಿಸ್ತೀರ್ಣದ ಕೆರೆ, ನೆಡುತೋಪು ಹಾಗೂ ಸ್ಮಶಾನದ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Articles You Might Like

Share This Article