ಕ್ಲಬ್ ಗಳಲ್ಲಿ ಡ್ರೆಸ್ ಕೋಡ್ ನೀತಿ ರದ್ದುಪಡಿಸಲು ಸರ್ಕಾರ ಚಿಂತನೆ

Social Share

ಬೆಂಗಳೂರು,ಜ.21- ರಾಜ್ಯದ ಕ್ಲಬ್ ಗಳಲ್ಲಿರುವ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ನೀತಿಗೆ ಕೊನೆ ಹಾಡಲು ಸರ್ಕಾರ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಸದ್ಯ ಸಾಂಪ್ರದಾಯಿಕ ಅಥವಾ ಕ್ಲಬ್ ಶಿಷ್ಠಾಚಾರಕ್ಕೆ ವಿರುದ್ಧವಾಗಿ ಧರಿಸು ಧರಿಸಿ ಬಂದವರಿಗೆ ಪ್ರವೇಶಕ್ಕೆ ನಿರ್ಬಂಧವಿದೆ.
ಈ ನಿಯಮವನ್ನು ತೆಗೆದುಹಾಕಬೇಕೆಂದು ಈ ಹಿಂದಿನ ಸರ್ಕಾರಗಳು ಪ್ರಯತ್ನಪಟ್ಟಿದ್ದವು. ಆದರೆ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ 300ಕ್ಕೂ ಅಕ ಕ್ಲಬ್ ಗಳಿವೆ. ಇವುಗಳಲ್ಲಿ ಬಹುತೇಕ ಕ್ಲಬ್ ಗಳಲ್ಲಿ ಭಾರತೀಯ ಸಂಸ್ಕೃತಿಗೆ ತಕ್ಕಂತೆ ಬಟ್ಟೆ ಧರಿಸಬಾರದು, ಭಾರತೀಯ ಶೈಲಿಯಲ್ಲಿ ಚಪ್ಪಲಿ ಹಾಕಿಕೊಳ್ಳಬಾರದು ಎಂದು ಹೇಳುತ್ತಿದೆ.
ನಾವು ಧರಿಸುವ ಬಟ್ಟೆ ಬಗ್ಗೆ ಬೇರೆಯವರು ಏಕೆ ನಿರ್ಬಂಧ ಹೇರಬೇಕು, ಧರಿಸುವ ಬಟ್ಟೆ ನಮಗೊಪ್ಪುವ ರೀತಿ ಇದ್ದರೆ ಸಾಕಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಕ್ಲಬ್ ಗಳಲ್ಲಿ ಅತಿಥಿಗಳ ಡ್ರೆಸ್ ಕೋಡ್ ನೀತಿಯನ್ನು ತೆಗೆದುಹಾಕಲು ರಾಜ್ಯದ ಕ್ಲಬ್‍ಗಳಿಗೆ ನಿರ್ದೇಶನ ನೀಡುವಂತೆ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಯೋಜಿಸುತ್ತಿದೆ. ಜನರ ಡ್ರೆಸ್ಸಿಂಗ್ ಮೇಲೆ ನಿರ್ಬಂಧಗಳನ್ನು ಹೇರುವುದು ನ್ಯಾಯಸಮ್ಮತವಲ್ಲ, ಜನರು ಫಾರ್ಮಲ್ ಡ್ರೆಸ್ ಮತ್ತು ಬೂಟುಗಳನ್ನು ಧರಿಸಬೇಕೆಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.
ಕೋವಿಡ್ ಸೋಂಕು ಕಡಿಮೆಯಾದ ನಂತರ ಸಮಿತಿಯ ಸದಸ್ಯರು ರಾಜ್ಯಾದ್ಯಂತ ಪ್ರವಾಸ ಮಾಡಲು ಯೋಜಿಸಿದ್ದಾರೆ. ನಾವು ಕೆಲವು ಕ್ಲಬ್‍ಗಳ ವಿರುದ್ಧ ದೂರುಗಳನ್ನು ಕೇಳಿದ್ದೇವೆ. ಒಂಬತ್ತು ಸದಸ್ಯರನ್ನು ಹೊಂದಿರುವ ಸಮಿತಿಯು ಅನುಮತಿಯಿಲ್ಲದೆ ಬಾರ್‍ಗಳನ್ನು ನಡೆಸುವುದು ಸೇರಿದಂತೆ ಇತರ ಉಲ್ಲಂಘನೆಗಳನ್ನು ಸಹ ಪರಿಶೀಲಿಸುತ್ತದೆ. ನಾವು ಇತರ ರಾಜ್ಯಗಳಲ್ಲಿನ ಕ್ಲಬ್‍ಗಳು ಅನುಸರಿಸುತ್ತಿರುವ ಉತ್ತಮ ಅಭ್ಯಾಸಗಳನ್ನು ಪರಿಶೀಲಿಸಲು ಮುಂದಾಗಿದೆ.
2013ರಲ್ಲಿ ಬಿಜೆಪಿ ಆಡಳಿತಾವಯಲ್ಲಿ ಬಿಜೆಪಿ ಶಾಸಕ ಹೇಮಚಂದ್ರ ಸಾಗರ್ ನೇತೃತ್ವದಲ್ಲಿ ಇದೇ ರೀತಿಯ ಸಮಿತಿಯನ್ನು ರಚಿಸಲಾಗಿತ್ತು, ಅವರು ಬೆಂಗಳೂರಿನ ಕೆಲವು ಉನ್ನತ ಮಟ್ಟದ ಕ್ಲಬ್‍ಗಳಿಗೆ ಭೇಟಿ ನೀಡಿದ್ದರು. ರಾಜ್ಯದ ಯಾವುದೇ ಕ್ಲಬ್‍ನಲ್ಲಿ ಯಾವುದೇ ಡ್ರೆಸ್ ಕೋಡ್ ಇರಬಾರದು ಎಂದು ಶಿಫಾರಸು ಮಾಡಿದ್ದರು. ಯೋಗ್ಯ ಉಡುಪುಗಳನ್ನು ಧರಿಸಿ ಸಾಮಾನ್ಯ ನಾಗರಿಕರಿಗೆ ಪ್ರವೇಶವನ್ನು ಅನುಮತಿಸುವಂತೆ ಅಕಾರಿಗಳಿಗೆ ಶಿಫಾರಸು ಮಾಡಿದ್ದರು.
ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಜಂಟಿ ಶಾಸಕಾಂಗ ಸಮಿತಿಯು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶದ ಕರ್ನಾಟಕ ನಿಯಂತ್ರಣ ಮತ್ತು ಕ್ಲಬ್‍ಗಳ ನಿಯಂತ್ರಣ ಮಸೂದೆಯನ್ನು ಸಂಪೂರ್ಣವಾಗಿ ಡ್ರೆಸ್ ಕೋಡ್ ಅನ್ನು ತೆಗೆದುಹಾಕಲು ಪ್ರಸ್ತಾಪಿಸಿತು. ಆದರೆ ಇಲ್ಲಿಯವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

Articles You Might Like

Share This Article