ಬಗರ್ ಹುಕುಂ ಭೂಮಿ ಮಂಜೂರು ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ

Social Share

ಬೆಂಗಳೂರು,ಡಿ.14- ನಗರಗಳು ಮತ್ತು ನಗರ ಪುರಸಭೆ ಪರಿಮಿತಿಯೊಳಗೆ ಬಗರ್ ಹುಕುಂ ಭೂಮಿ ಮಂಜೂರು ಮಾಡುವ ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಭರವಸೆಯಡಿ ಸರಕಾರ ಹಲವು ಬಾರಿ ಅರ್ಜಿ ಸ್ವೀಕರಿಸಿದೆ. ಇದರ ನಡುವೆಯೇ ಷರತ್ತು, ನಿಯಮದ ಹೆಸರಲ್ಲಿ ಭೂ ಮಂಜೂರಾತಿಯನ್ನು ತಡೆದಿದೆ.

ಸುಮಾರು 3 ದಶಕದಿಂದ ಅರ್ಜಿದಾರರು ಮಾತ್ರ ಜಾತಕಪಕ್ಷಿಯಂತೆ ಕಾದರೂ ಹಕ್ಕುಪತ್ರ ಮಾತ್ರ ದೊರೆತಿರಲಿಲ್ಲ. ಬಗರ್ ಹುಕುಂ ಸಾಗುವಳಿ ರೈತರಿಗೆ ಇದೀಗ ಫಾರಂ-57ರಡಿ ಅರ್ಜಿ ಸಲ್ಲಿಸಲು ಸರಕಾರ ಪುನಃ ಅವಕಾಶ ನೀಡಲು ನಿರ್ಧರಿಸಿದೆ.

ಈಗಾಗಲೇ ಸಲ್ಲಿಸಿದ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಸರಕಾರ ಪೂರ್ಣಗೊಳಿಸಿಲ್ಲ. ವಿವಿಧ ವರ್ಗೀಕರಣ ಭೂ ಪ್ರದೇಶ ಮಂಜೂರಾತಿ ತಿರಸ್ಕರಿಸಿ ಬಹುತೇಕ ಅರ್ಜಿಯನ್ನು ಸರಕಾರ ವಜಾಗೊಳಿಸುತ್ತಿದೆ. ಅರ್ಜಿ ಸ್ವೀಕರಿಸಲು ತೋರಿಸುವ ಉತ್ಸಾಹವನ್ನು ಭೂ ಮಂಜೂರಾತಿಗೆ ತೋರಿಸುತ್ತಿಲ್ಲ ಎಂಬ ಅಪವಾದ ಸರಕಾರದ ಮೇಲಿತ್ತು.

ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಸರಕಾರ ಬಗರ್‍ಹುಕುಂ ಸಾಗುವಳಿ ರೈತರಲ್ಲಿ ಭೂ ಮಂಜೂರಾತಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.ಇದೀಗ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಸೀರೆ ಶೌಚಾಲಯ..!

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರನ್ವಯ ವಿಧಾನಸಭಾ ಕ್ಷೇತ್ರವಾರು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಿ, ಅವುಗಳ ಮುಖಾಂತರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಎ, 94ಬಿ ಹಾಗೂ 94ಎ(4)ರಡಿ ಮಂಜೂರು ಮಾಡಲು ಅವಕಾಶವಿರುತ್ತದೆ.

ರಚಿತವಾದ ಸಮಿತಿಗಳು ಕಲಂ 94ಎ(4)ರನ್ವಯ ನಗರಗಳು ಮತ್ತು ನಗರ ಪುರಸಭೆಗಳ ಪರಿಮಿತಿಯೊಳಗೆ ಬರುವ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಂತರ 18 ಕಿ. ಮೀ ಇರಬೇಕು.ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಉಪಬಂಧಗಳಡಿ ಅನುಕ್ರಮವಾಗಿ ಬರುವ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು ಮತ್ತು ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಉಪಬಂಧಗಳಡಿ ಬರುವ ಇತರ ನಗರ ಪಾಲಿಕೆಗಳು 10 ಕಿ. ಮೀ., ಕರ್ನಾಟಕ ಪೌರಸಭೆಗಳ ಅನಿಯಮ, 1964ರ ಉಪಬಂಧಗಳ ಅಡಿಯಲ್ಲಿ ಬರುವ ಎಲ್ಲಾ ನಗರ ಪೌರಸಭೆಗಳು 5 ಕಿ. ಮೀ. ವ್ಯಾಪ್ತಿಯಲ್ಲಿರಬೇಕು.

ಕರ್ನಾಟಕ ಪೌರಸಭೆಗಳ ಅನಿಯಮ, 1964ರ ಉಪಬಂಧಗಳ ಅಡಿಯಲ್ಲಿನ ಎಲ್ಲಾ ಪೌರಸಭೆಗಳು ಮತ್ತು ಪಟ್ಟಣ ಪಂಚಾಯತ್‍ಗಳು 3 ಕಿ. ಮೀ ವ್ಯಾಪ್ತಿಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಕಳುಹಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಅದರ ಸರಹದ್ದಿನಿಂದ ನಿರ್ಬಂಸಿರುವ ಅಂತರದ ಒಳಗೆ ಇರುವ ಜಮೀನುಗಳನ್ನು ಸಕ್ರಮಗೊಳಿಸುವುದು ಕಾನೂನು ಬಾಹಿರ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ.

ಬಿಬಿಎಂಪಿ/ ನಗರ/ ನಗರ ಪೌರಸಭೆ/ ಪಟ್ಟಣ ಪಂಚಾಯತಿಗಳ ಪರಿಮಿತಿಯಲ್ಲಿ ಬರುವ ಜಮೀನುಗಳನ್ನು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಅಕ್ರಮವಾಗಿ ಮಂಜೂರು ಮಾಡಿದಲ್ಲಿ ಅಂತಹ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 108(ಕೆ) ರನ್ವಯ ರದ್ದುಗೊಳಿಸಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ಕೊಡಲಾಗಿದೆ.

ಬಗರ್ಹುಕುಂ ಸಕ್ರಮದ ಫಾರಂ-50, 53, 57ರ ಅರ್ಜಿ ಅವ 5 ವರ್ಷಕ್ಕೊಮ್ಮೆ ಮುಕ್ತಾಯವಾಗುತ್ತದೆ. ಈ ಹಂತದಲ್ಲಿ ಸರಕಾರ ಅರ್ಜಿಗೆ ಮಾತ್ರ ಜೀವ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಭೂ ಮಂಜೂರಾತಿ ಕುರಿತಂತೆ ಸರಕಾರ ಮಾತ್ರ ಯಾವುದೇ ಸರಳ ನಿಯಮ ರೂಪಿಸುತ್ತಿಲ್ಲ. ಕಠಿಣ ನಿಯಮಗಳನ್ನು ಹೇರಿ ವಂಚಿಸುತ್ತಿದೆ ಎಂಬ ಅಸಮಾಧಾನ ರೈತರಲ್ಲಿದೆ.

ಬದುಕಿಗಾಗಿ ಸರಕಾರದ ಭೂಮಿ ಆಶ್ರಯಿಸಿದ ಕುಟುಂಬಗಳ ವಿರುದ್ಧ 192 (ಎ) ನಿಯಮದಡಿ 3 ವರ್ಷ ಜೈಲು ಶಿಕ್ಷೆ, ದಂಡಶುಲ್ಕ ವಿಸುವ ಕ್ರಿಮಿನಲ್ ಪ್ರಕರಣವನ್ನು ಸರಕಾರ ದಾಖಲಿಸಿದೆ. ಭೂ ಕಬಳಿಕೆ ಪ್ರಕರಣದ ವಿಚಾರಣೆಗೆ ಸರಕಾರ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿದೆ.ಪ್ರಕರಣದಲ್ಲಿ ಜಾಮೀನು ಪಡೆಯುವುದರ ಜತೆಗೆ ಕಾನೂನಿನ ಹೋರಾಟ ನಡೆಸಲು ಬಡ ಕುಟುಂಬಗಳು ಸಾವಿರಾರು ರೂ. ಖರ್ಚು ಮಾಡಬೇಕಿದೆ.

#GovtOrder #BagarHukumLand

Articles You Might Like

Share This Article