ಕೊಲಿಜಿಯಂನ 19 ಹೆಸರುಗಳು ತಿರಸ್ಕಾರ : ಕೇಂದ್ರ – ನ್ಯಾಯಾಂಗ ಸಂಘರ್ಷ..?

Social Share

ನವದೆಹಲಿ,ನ.30- ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಮಾಡಿದ್ದ 21 ಮಂದಿ ಹೆಸರುಗಳ ಪೈಕಿ 19ನ್ನು ಕೇಂದ್ರ ಸರ್ಕಾರ ತಿರಸ್ಕರಿಸುವ ಮೂಲಕ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ.

ಸುಪ್ರೀಂಕೋರ್ಟ್‍ನ ಎರಡು ತೀರ್ಪುಗಳನ್ನು ಆಧರಿಸಿ ದೇಶದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ರಚನೆಯಾಗಿದೆ. ಹೈಕೋರ್ಟ್, ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳ ನೇಮಕಾತಿಗೆ ಈ ಕೊಲಿಜಿಯಂ ಹೆಸರುಗಳನ್ನು ಶಿಫಾರಸ್ಸು ಮಾಡಿದೆ.

ಅದನ್ನು ಪ್ರಧಾನಮಂತ್ರಿಗಳ ಕಚೇರಿ ಪರಿಶೀಲಿಸುವ ಮೂಲಕ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಲಿದ್ದು, ನಂತರ ನ್ಯಾಯಮೂರ್ತಿಗಳ ನೇಮಕಾತಿ ಯಾಗಲಿದೆ. ಒಂದು ವೇಳೆ ಪಟ್ಟಿಯಲ್ಲಿ ಲೋಪವಿದ್ದರೆ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡುವ ಅವಕಾಶಗಳಿವೆ.

ಸಿಎಎ ವಿರುದ್ಧ ಸುಪ್ರೀಂ ಮೊರೆ ಹೋದ ಡಿಎಂಕೆ

ಕರ್ನಾಟಕ, ಕೋಲ್ಕತಾ, ಕೇರಳ, ಅಲಹಾಬಾದ್ ಸೇರಿದಂತೆ ವಿವಿಧ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ತೆರವಾಗಲಿರುವ ಹುದ್ದೆಗಳಿಗೆ 21 ಮಂದಿ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗಿತ್ತು.

ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಎಂ.ವಿ.ರಮಣ ಅವರ ಸಮಿತಿ ಸೆಪ್ಟೆಂಬರ್ 1ರಂದು 9 ಮಂದಿ, ಸೆ.26ರಂದು ಹೊಸದಾಗಿ 10 ಮಂದಿ ಹೆಸರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿತ್ತು.

ಇವುಗಳ ಪೈಕಿ ಬಾಂಬೆ ಹೈಕೋರ್ಟ್‍ಗೆ ಸಂತೋಷ್, ಗೋವಿಂದರಾವ್ ಚಪ್ಲಾ ಗಾವಂಕರ್ ಮತ್ತು ಮಿಲಿನ್ ಮನೋಹರ್ ಸತ್ಯೆ ಎಂಬ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜುಜು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಜೊಂಬಿ ವೈರಾಣು: ವಿಶ್ವಕ್ಕೆ ಗಂಡಾಂತರದ ಸೂಚನೆ

ಉಳಿದಂತೆ 19 ಮಂದಿಯ ಶಿಫಾರಸ್ಸುಗಳು ಕೊಲಿಜಿಯಂಗೆ ವಾಪಸ್ಸಾಗಿದೆ. ನ.28ರಂದು ಸುಪ್ರೀಂಕೋರ್ಟ್ ನ್ಯಾಯಾೀಧಿಶರ ನೇಮಕಾತಿಯ ಕುರಿತು ವಿಚಾರಣೆ ಕೈಗೆತ್ತಿಕೊಳ್ಳುವ ಕೆಲವೇ ಗಂಟೆಗಳ ಮುನ್ನ ಈ ಶಿಫಾರಸ್ಸು ವಾಪಸ್ಸಾಗಿದೆ.

ವಾಪಸ್ಸಾಗಿರುವ ಶಿಫಾರಸಿನ ಹೆಸರುಗಳ ಪೈಕಿ ಅಲಹಾಬಾದ್ ಹೈಕೋರ್ಟ್‍ಗೆ 5, ಕೋಲ್ಕತ್ತಾ ಮತ್ತು ಕೇರಳಾಕ್ಕೆ ತಲಾ 2, ಕರ್ನಾಟಕಕ್ಕೆ ಒಂದು ಹೈಕೋರ್ಟ್ ಉಲ್ಲೇಖವಾಗಿದ್ದವು. ಕರ್ನಾಟಕ ಹೈಕೋರ್ಟ್‍ಗೆ ವಕೀಲ ನಾಗೇಂದ್ರ ರಾಮಚಂದ್ರ ನಾಯಕ್ ಅವರನ್ನು ನೇಮಿಸಲು ಶಿಫಾರಸ್ಸು ಮಾಡಲಾಗಿತ್ತು. ಎರಡು ಬಾರಿ ಈ ಹೆಸರು ಈಗಾಗಲೇ ತಿರಸ್ಕಾರಗೊಂಡಿದೆ.

ಮತದಾರರ ಮಾಹಿತಿ ಕಳವು: ಸರ್ಕಾರೇತರ ಸಂಸ್ಥೆಗಳ ಮೇಲೆ ಅನುಮಾನದ ಹುತ್ತ..!

ಒರಿಸ್ಸಾ, ಮದ್ರಾಸ್, ಪಂಜಾಬ್, ಹರಿಯಾಣ, ತೆಲಂಗಾಣ, ರಾಜಸ್ಥಾನ ಸೇರಿದಂತೆ ವಿವಿಧ ಹೈಕೋರ್ಟ್‍ಗಳ ನ್ಯಾಯಮೂರ್ತಿಗಳ ನೇಮಕಾತಿ ಈ ಮೂಲಕ ನೆನೆಗುದಿಗೆ ಬಿದ್ದಿದೆ.

Govt, rejects, collegium, suggested, names, judges,

Articles You Might Like

Share This Article