54 ಚೀನಿ ಆ್ಯಪ್‍ ನಿಷೇದಕ್ಕೆ ಕೇಂದ್ರ ಸಿದ್ಧತೆ

Social Share

ನವದೆಹಲಿ:.ಫೆ.14-ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ 54 ಚೀನಿ ಆ್ಯಪ್‍ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.  ಸ್ವೀಟ್ ಸೆಲಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲಿ ಕ್ಯಾಮೆರಾ, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರಿರ್ವ, ಒನ್ಮಿಯೋಜಿ ಅರೆನಾ, ಆಪ್ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿದಮತೆ ಸುಮಾರು 54 ಆ್ಯಪ್‍ಅಪ್ಲಿಕೇಶನ್‍ಗಳ ನಿಷೇಧಿಸುವ ಸಾಧ್ಯತೆ ಇದೆ.
ಕಳೆದ ವರ್ಷ ಜೂನ್‍ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿದಕ್ಕಾಗಿ ಭಾರತ ಸರ್ಕಾರ ಟಿಕ್ಟಾಕï, ವೀಚಾಟ್ ಮತ್ತು ಹೆಲೋನಂತಹ ಆ್ಯಪ್ ಸಾಮಾಜಿಕ ಮಾಧ್ಯಮ ಪ್ಲಾಟಾರ್ಮಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತು.
ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಈವರೆಗೆ ಸುಮಾರು 300 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲಾಗಿದೆ.
ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

Articles You Might Like

Share This Article