65 ಕಾನೂನುಗಳನ್ನು ರದ್ದುಗೊಳಿಸಲು ಸಂಸತ್‍ನಲ್ಲಿ ಮಸೂದೆ ಮಂಡನೆ

Social Share

ಪಣಜಿ,ಮಾ.6- ಬಳಕೆಯಲ್ಲಿ ಇಲ್ಲದ 65 ಕಾನೂನುಗಳು ಮತ್ತು ಇತರ ನಿಬಂಧನೆಗಳನ್ನು ರದ್ದುಗೊಳಿಸಲು ಮಾರ್ಚ್ 13 ರಂದು ಪುನರಾರಂಭಗೊಳ್ಳುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಗೋವಾದಲ್ಲಿ ನಡೆದ 23ನೇ ಕಾಮನ್‍ವೆಲ್ತ್ ಕಾನೂನು ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳೈ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತಿತರರು ಉಪಸ್ಥಿತರಿದ್ದರು.

52 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ನ್ಯಾಯಾಲಯಗಳಲ್ಲಿ 4.98 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಇತ್ಯರ್ಥ ಪಡಿಸಿ ಶೀಘ್ರ ನ್ಯಾಯದಾನ ದೊರಕಿಸುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಕಾಗದರಹಿತ ನ್ಯಾಯಾಂಗ ನಿರ್ಮಾಣದ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಿಜಿಜು ಹೇಳಿದರು.

ಕೋಲ್ಕತ್ತಾದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ

ದೇಶದ ಪ್ರತಿಯೊಂದು ಭಾಗದಲ್ಲೂ, ಪ್ರತಿಯೊಬ್ಬ ನಾಗರಿಕನು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಕಲ್ಯಾಣ ರಾಜ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಮಾತನ್ನು ಕೇಳುವುದು ಬಹಳ ಮುಖ್ಯ. ಮೋದಿ ಸರ್ಕಾರ ಈ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಸಾಮಾನ್ಯ ನಾಗರಿಕರಿಗೆ ಜೀವನವನ್ನು ಸುಲಭಗೊಳಿಸಲು ಸರ್ಕಾರದ ನೀತಿಗಳು ಯಶಸ್ವಿಯಾಗಿವೆ. ಕಾನೂನುಗಳು ಜನರಿಗಾಗಿ ಇರಬೇಕು. ಅವು ಅಡೆತಡೆ ನಿರ್ಮಾಣ ಮಾಡುವುದಾದರೆ ಅಂತಹ ನಿಬಂಧನೆಗಳನ್ನು ತೆಗೆದುಹಾಕಲು ಸರ್ಕಾರ ಬದ್ಧವಾಗಿದೆ. ಬಳಕೆಯಲ್ಲಿ ಇಲ್ಲದ 1,486 ಬಳಕೆಯಲ್ಲಿಲ್ಲದ ಮತ್ತು ಅನಗತ್ಯ ಕಾನೂನುಗಳನ್ನು ಕಳೆದ ಎಂಟೂವರೆ ವರ್ಷಗಳಲ್ಲಿ ತೆಗೆದುಹಾಕಿದ್ದೇವೆ. ಮಾರ್ಚ್ 13 ರಂದು ಪುನರಾರಂಭಗೊಳ್ಳುವ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ, ಇನ್ನೂ 65 ಕಾನೂನುಗಳನ್ನು ತೆಗೆದುಹಾಕುವ ಮಸೂದೆಯನ್ನು ಮಂಡಿಸಲಿದ್ದೇನೆ ಎಂದರು.

ದೇಶದ ಹೆಮ್ಮೆ INS ವಿಕ್ರಾಂತ್‍ನಲ್ಲಿ ನೌಕಾಪಡೆ ಕಮಾಂಡರ್‌ಗಳ ಸಭೆ

ದೇಶದಲ್ಲಿ ವಿಲೇವಾರಿಯಾಗುವ ಪ್ರಕರಣಗಳ ಸಂಖ್ಯೆಗಿಂತಲೂ ಹೊಸ ಪ್ರಕರಣಗಳು ದ್ವಿಗುಣವಾಗಿವೆ. ಹೀಗಾಗಿ ಬಾಕಿಯನ್ನು ಕಡಿಮೆ ಮಾಡುವುದು ಸುಲಭವಲ್ಲ. ಇದಕ್ಕಾಗಿ ಭಾರತೀಯ ನ್ಯಾಯಾೀಧಿಶರು ಅಸಾಧಾರಣವಾಗಿ ಶ್ರಮಿಸುತ್ತಿದ್ದಾರೆ ಮತ್ತು ಸವಾಲು ನಿಭಾಯಿಸುತ್ತಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ನ್ಯಾಯಾೀಧಿಶರು ದಿನಕ್ಕೆ ಸರಾಸರಿ 50-60 ಪ್ರಕರಣಗಳನ್ನು ನಿಭಾಯಿಸುತ್ತಾರೆ. ಕೆಲವು ನ್ಯಾಯಾೀಧಿಶರು ಒಂದು ದಿನದಲ್ಲಿ 200 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಆದರೂ ಬಾಕಿ ಪ್ರಕರಣಗಳ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ರಿಜಿಜು ಹೇಳಿದರು.

ಇ-ಕೋರ್ಟ್‍ಗಳು, ವಿಶೇಷ ಯೋಜನೆಗಳನ್ನು ಮೂರನೇ ಹಂತದಲ್ಲಿ ಜಾರಿಗೆ ತರಲಾಗಿದೆ. ಸಂಧಾನ ಮತ್ತು ಮಧ್ಯಸ್ಥಿಕೆಯಂತಹ ವಿಚಾರಗಳ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕಾರ್ಯ ವಿಧಾನಗಳನ್ನು ಅನ್ವೇಷಿಸಲಾಗುತ್ತಿದೆ. ಶೀಘ್ರದಲ್ಲೇ ಮಧ್ಯಸ್ಥಿಕೆ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

Govt, push Bill, remove, 65, obsolete, laws Parliament, session Law Minister, Kiren Rijiju,

Articles You Might Like

Share This Article