ಕೆಳ ಹಂತದ ಆರ್ಥಿಕ ಚೇತರಿಕೆಗೆ ಒತ್ತು ನೀಡುವುದು ತುರ್ತು ಅಗತ್ಯ: ಕೌಶಿಕ್ ಬಸು

Social Share

ನವದೆಹಲಿ, ಜ.16- ಭಾರತದ ಒಟ್ಟಾರೆ ಸ್ಥೂಲ ಆರ್ಥಿಕ ಪರಿಸ್ಥಿತಿಯು ಚೇತರಿಕೆಯ ಕ್ರಮದಲ್ಲಿದೆ. ಆದರೆ ಬೆಳವಣಿಗೆಯು ಉನ್ನತ ಮಟ್ಟದಲ್ಲಿ ಕೇಂದ್ರೀಕೃತವಾಗಿದೆ, ಇದು ಆತಂಕಕಾರಿ ಪ್ರವೃತ್ತಿ ಎಂದು ವಿಶ್ವ ಬ್ಯಾಂಕ್‍ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಹೇಳಿದ್ದಾರೆ.
ಪ್ರಸ್ತುತ ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಹಿಂದೆ ಯುಪಿಎ ಆಡಳಿತದ ಅವಯಲ್ಲಿ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಕಳೆದ ತಿಂಗಳು ಚಿಲ್ಲರೆ ಹಣದುಬ್ಬರದಲ್ಲಿ ತೀವ್ರ ಏರಿಕೆ ಸೇರಿದಂತೆ ಹೆಚ್ಚುತ್ತಿರುವ ಹಣದುಬ್ಬರ ಪ್ರವೃತ್ತಿಗಳ ನಡುವೆ, ದೇಶವು ನಿಶ್ಚಲತೆಯನ್ನು ಎದುರಿಸುತ್ತಿದೆ ಮತ್ತು ಬಹಳ ಎಚ್ಚರಿಕೆಯಿಂದ ಆರ್ಥಿಕ ನೀತಿಗಳನ್ನು ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ದೇಶದ ಒಟ್ಟಾರೆ ಆರ್ಥಿಕತೆಯು ಬೆಳೆಯುತ್ತಿರುವಾಗ, ಭಾರತದ ಕೆಳಭಾಗದ ಅರ್ಧದಷ್ಟು ಆರ್ಥಿಕ ಹಿಂಜರಿತದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ದೇಶದ ಆರ್ಥಿಕ ನೀತಿಯು ದೊಡ್ಡ ಉದ್ಯಮಗಳ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿರುವುದು ವಿಷಾದನೀಯ ಎಂದು ಹೇಳಿದರು.
ಭಾರತದ ಒಟ್ಟಾರೆ ಸ್ಥೂಲ ಆರ್ಥಿಕ ಪರಿಸ್ಥಿತಿಯು ಚೇತರಿಕೆಯ ಕ್ರಮದಲ್ಲಿದೆ. ಈ ಬೆಳವಣಿಗೆಯು ಉನ್ನತ ತುದಿಯಲ್ಲಿ ಕೇಂದ್ರೀಕೃತವಾಗಿದೆ ಎಂಬುದು ಚಿಂತಿಸಬೇಕಾದ ವಿಷಯವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕೋವಿಡï19 ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲೇ ದೇಶದಲ್ಲಿ ಯುವ ನಿರುದ್ಯೋಗ ದರವು ಜಾಗತಿಕವಾಗಿ ಅತಿ ಹೆಚ್ಚು ಶೇ. 23 ಕ್ಕೆ ತಲುಪಿತ್ತು. ಕಾರ್ಮಿಕರು, ರೈತರು ಮತ್ತು ಸಣ್ಣ ಉದ್ಯಮಗಳು ನಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿವೆ.
2021-22ರಲ್ಲಿ ಭಾರತದ ಜಿಡಿಪಿ ಶೇ.9.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದ್ದರೂ, ಸಾಂಕ್ರಾಮಿಕ ರೋಗದಿಂದಾಗಿ 2019-20 ರಲ್ಲಿ ಶೇ.7.3ಕ್ಕೆ ಇಳಿಕೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸರಾಸರಿ ಬೆಳವಣಿಗೆ ದರ ಶೇ.0.6ರಷ್ಟು ಮಾತ್ರ ಎಂದು ವಿವರಿಸಿದ್ದಾರೆ.
ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‍ಎಸ್‍ಒ) ತನ್ನ ಮೊದಲ ಮುಂಗಡ ಅಂದಾಜಿನಲ್ಲಿ ಏಪ್ರಿಲ್ 2021 ರಿಂದ ಮಾರ್ಚ್ 2022 ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು 9.2 ರಷ್ಟು ಅಂದಾಜಿಸಿದೆ. ಆದರೆ ಅದೇ ಅವಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಶೇ.9.5 ರಷ್ಟು ವಿಸ್ತರಣೆಯನ್ನು ಮುನ್ಸೂಚನೆ ನೀಡಿದೆ.
ವಿಶ್ವಬ್ಯಾಂಕ್ ಶೇ.8.3 ಬೆಳವಣಿಗೆಯನ್ನು ಸಂಪ್ರದಾಯವಾದಿಯಾಗಿ ಪ್ರಸ್ತಾಪಿಸಿದೆ. ಆದರೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಯೂ ಜಿಡಿಪಿ ವೃದ್ಧಿಯನ್ನು ಶೇ. 9.7 ಅಂದಾಜಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನïಅವರಿಗೆ ಬಜೆಟ್ಮಂಡಿಸುವುದು ಸವಾಲಾಗಿದೆ. ಕಳೆದ 15 ವರ್ಷಗಳ ಹಿಂದೆ ಈಗಿನದಕ್ಕಿಂತಲೂ ಹಣದುಬ್ಬರ ಹೆಚ್ಚಿತ್ತು. ಆದರೆ ಆರ್ಥಿಕತೆ ಚಲನಶೀಲವಾಗಿತ್ತು, ಈಗ ಕೋವಿಡ್ನಿಂದಾಗಿ ನಿಶ್ಚಲತೆಯಲ್ಲಿದೆ. ಆಗ ದೇಶದ ಜಿಡಿಪಿ ಶೇ.9ರ ಆಜುಬಾಜಿನಲ್ಲಿತ್ತು, ಕುಟುಂಬದ ಸರಾಸರಿ ತಲಾವಾರು ಆದಾಯ ಶೇ.7 ರಿಂದ 8ರಷ್ಟಿತ್ತು.
ಕಳೆದ ಎರಡು ವರ್ಷಗಳಲ್ಲಿ ನೈಜ ತಲಾ ಆದಾಯದ ಕುಸಿತದ ಮೇಲೆ ಸುಮಾರು ಶೇ.5 ಹಣದುಬ್ಬರವೂ ಘಟಿಸಿದೆ. ಇದು ಸಾಮಾನ್ಯ ವರ್ಗದ ಪರಿಸ್ಥಿತಿಯನ್ನು ಕಠೋರವಾಗಿಸಿದೆ. ಸಂಕಷ್ಟದಿಂದ ಹೊರ ಬರಬೇಕಾದರೆ ಉದ್ಯೋಗ ಸೃಷ್ಟಿ ಮತ್ತು ಸಣ್ಣ ವ್ಯಾಪಾರಗಳಿಗೆ ಉತ್ತೇಜನ ನೀಡಬೇಕು.
ಅದೇ ಕಾಲಕ್ಕೆ ದೇಶಿಯ ಉತ್ಪಾದನೆ ಹೆಚ್ಚಿಸಬೇಕು. ಉನ್ನತ ಮಟ್ಟದ ಆದಾಯ ಉಳ್ಳವರನ್ನೇ ಕೇಂದ್ರಿಕರಿಸಿ ಬೆಂಬಲ ನೀಡುತ್ತಿದ್ದರೆ, ತಳ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚಿಲ್ಲರೆ ಹಣದುಬ್ಬರವು 2021 ರ ಡಿಸೆಂಬರ್ ನಲ್ಲಿ ಶೇ.5.59 ಕ್ಕೆ ಏರಿತು, ಮುಖ್ಯವಾಗಿ ಆಹಾರದ ಬೆಲೆಗಳಲ್ಲಿನ ಏರಿಕೆಯಾಗಿತ್ತು. ಬಡವರು ಮತ್ತು ಮಧ್ಯಮ ವರ್ಗದವರ ಕೈಗೆ ಹಣ ತಲುಪಿಸುವುದು ಸರ್ಕಾರದ ಗುರಿಯಾಗಬೇಕು. ಭಾರತದ ಹಣಕಾಸು ಸಚಿವಾಲಯವು ಈ ಬದಲಾವಣೆಗಳನ್ನು ವಿನ್ಯಾಸಗೊಳಿಸಲು ಸಾಕಷ್ಟು ಪರಿಣತಿಯನ್ನು ಹೊಂದಿದೆ. ಆದರೆ ಅದನ್ನು ಜಾರಿ ಮಾಡುವ ಇಚ್ಚಾಶಕ್ತಿ ಇದೆಯೇ ಎಂಬುದು ತಮಗೆ ತಿಳಿಸಿದಲ್ಲ ಎಂದರು.

Articles You Might Like

Share This Article