ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ

Social Share

ನವದೆಹಲಿ,ಫೆ.7- ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಹಿಡಿಯಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಗೌರಿ ಅವರನ್ನು ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾೀಧಿಶರನ್ನಾಗಿ ನೇಮಿಸಲು ಮಾಡಿದ ಶಿಫಾರಸನ್ನು ಹಿಂಪಡೆಯುವಂತೆ ಕೋರಿ ಮದ್ರಾಸ್ ಹೈಕೋರ್ಟ್‍ನ ಕೆಲವು ಬಾರ್ ಸಮಿತಿ ಸದಸ್ಯರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

ಹಿಂದುತ್ವ ಎಂದರೆ ಕೊಲೆ, ಹಿಂಸಾಚಾರ, ತಾರತಮ್ಯ : ಸಿದ್ದರಾಮಯ್ಯ

ಹೀಗಾಗಿ ಈ ಕುರಿತ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಗೌರಿ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ವಿಚಾರಣೆಯ ಆರಂಭದಲ್ಲಿ, ಅವರು ಅರ್ಹತೆ ಮತ್ತು ಸೂಕ್ತತೆಯ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು. ಅರ್ಹತೆಯ ಮೇಲೆ, ಒಂದು ಸವಾಲು ಇರಬಹುದು. ಆದರೆ, ನ್ಯಾಯಾಲಯಗಳು ಸೂಕ್ತತೆಗೆ ಬರಬಾರದು, ಇಲ್ಲದಿದ್ದರೆ ಇಡೀ ಪ್ರಕ್ರಿಯೆಯು ಗೊಂದಲಕ್ಕೊಳಗಾಗುತ್ತದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದಾರೆ.

ಪೆರುವಿನಲ್ಲಿ ಭೂ ಕುಸಿತು, 36 ಮಂದಿ ಸಾವು

ಹೀಗಾಗಿ ಬಿಜೆಪಿ ಪರ ನಿಲುವು ಹೊಂದಿದ್ದರು ಎನ್ನಲಾದ ಗೌರಿ ಅವರು ಮದ್ರಾಸ್ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾೀಧಿಶರಾಗಿ ಪ್ರಮಾಣ ವಚನ ಸ್ವೀಕರಿಸಲು ಇದ್ದ ಅಡೆತಡೆಗಳು ನಿವಾರಣೆಯದಂತಾಗಿವೆ.

Supreme Court, Dismisses, Plea, Gowri, Appointment Judge, Madras High Court,

Articles You Might Like

Share This Article