ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯ ಹೊಂದಿವೆ. ಅಂತಹ ಹಬ್ಬಗಳಲ್ಲಿ ಗೌರಿ – ಗಣೇಶ ಹಬ್ಬ ಅತ್ಯಂತ ಪ್ರಮುಖವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಗೌರಿ ಹಬ್ಬಕ್ಕೆ ವಿಶೇಷ ಸ್ಥಾನವಿದ್ದು, ಗೌರಿ ಭೂಮಿಗೆ ಬರುತ್ತಾಳೆ ಎಂಬ ಪ್ರತೀತಿಯಿದೆ.
ಗೌರಿ ದೇವಿ ಪ್ರಕೃತಿಯ ಸ್ವರೂಪ. ಪಾರ್ವತಿ ದೇವಿಯ ಅಪರಾವತಾರ. ಕುಟುಂಬದ ಸಂತೋಷ, ಸಮೃದ್ಧಿ ಹೆಚ್ಚಿಸಲಿ, ನಮಗೆ ಶಕ್ತಿನೀಡಲಿ ಎಂದು ಶ್ರದ್ಧೆ-ಭಕ್ತಿಯಿಂದ ಗೌರಿಯನ್ನು ಪೂಜಿಸಲಾಗುವುದು. ಗೌರಿ ಹಬ್ಬವನ್ನು ಸುವರ್ಣ ಗೌರಿ ಹಬ್ಬವೆಂದು ಕರೆಯಲಾಗುವುದು.
ಸರ್ವಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಕೇ
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣೀ ನಮೋಸ್ತುತೇ
ಹಬ್ಬದÀ ಮಹತ್ವ: ಈ ವ್ರತವನ್ನು ಮುತ್ತೈದೆಯರು 16 ವರ್ಷ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಗೌರೀ ದೇವಿ ಶಿವನನ್ನು ಒಲಿಸಿಕೊಳ್ಳಲು ಬರೀ ಹಣ್ಣುಗಳನ್ನು ಮಾತ್ರ ಸೇವಿಸುತ್ತಾ 16 ವರ್ಷ ತಪಸ್ಸು ಮಾಡಿದಳು. ಗೌರಿಯ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯಿದೆ.
ಗೌರಿ ಹಬ್ಬದಂದು 16 ಗಂಟುಗಳ ಗೌರಿದಾರವನ್ನು ಬಲ ಮಣಿಕಟ್ಟಿಗೆ ಧರಿಸಲಾಗುವುದು. ಇದರಿಂದ ಗೌರಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ.
ಬಾಗಿನ:
ಗೌರಿ ಪೂಜೆಗೆ ಕನಿಷ್ಠ 5ಬಾಗಿನಗಳನ್ನು ತಯಾರಿಸಲಾಗುವುದು. ಬಾಗಿನದಲ್ಲಿ ಸಾಮಾನ್ಯವಾಗಿ ಅರಿಶಿಣ-ಕುಂಕುಮ, ಕಪ್ಪು ಬಳೆಗಳು, ಕಪ್ಪು ಮಣಿಗಳು, ಒಂದು ಬಾಚಣಿಗೆ, ಒಂದು ಚಿಕ್ಕ ಕನ್ನಡಿ, ಬಳೆ, ತೆಂಗಿನಕಾಯಿ, ಬ್ಲೌಸ್ ಪೀಸ್, ಧಾನ್ಯ, ಅಕ್ಕಿ, ಹಣ್ಣುಗಳಿರಬೇಕು. ಬಾಗಿನವನ್ನು ಮೊರದಲ್ಲಿ ನೀಡಬೇಕು. ಇದರಲ್ಲಿ ಒಂದು ಬಾಗಿನವನ್ನು ಗೌರೀ ದೇವಿಗೆ ಇಟ್ಟು ನಂತರ ಉಳಿದವುಗಳನ್ನು ಮುತ್ತೈದೆಯರಿಗೆ ನೀಡಲಾಗುವುದು.
ಗೌರಿ ಹಬ್ಬವನ್ನು ಗಣೇಶ ಚತುರ್ಥಿಗೆ ಮುಂಚಿನ ದಿನ ಆಚರಿಸಲಾಗುತ್ತದೆ. ಗಣೇಶ ಮತ್ತು ಸುಬ್ರಹ್ಮಣ್ಯನ ತಾಯಿ ಗೌರಿ ತನ್ನ ಭಕ್ತರಿಗೆ ಶಕ್ತಿ, ಧೈರ್ಯ ತುಂಬುವ ಸಾಮಥ್ರ್ಯದಿಂದ ಪೂಜೆಗೆ ಅರ್ಹಳಾಗಿದ್ದಾಳೆ. ಎಲ್ಲ ದೇವತೆಗಳಿಗಿಂತ ಶಕ್ತಿಶಾಲಿ ದೇವತೆ, ಆದಿ ಶಕ್ತಿ ಮಹಾಮಾಯಾ ಅವತಾರವೆಂದು ಪರಿಗಣಿಸಲಾಗಿದೆ.
ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ.
ಸ್ವರ್ಣಗೌರಿ ಹೆಸರಿನ ಹಿನ್ನಲೆ:
ಒಮ್ಮೆ ಶಿವ ಕೈಲಾಸದಲ್ಲಿ ಕುಳಿತಿದ್ದಾಗ ಪಾರ್ವತಿ ಬಂದು ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ನಂತರ ಶಿವ ಕಣ್ಣು ತೆರೆದು ನೋಡಿದಾಗ ಪಾರ್ವತಿ ಕಪ್ಪಾಗಿ ಕಾಣುತ್ತಾಳೆ. ಆಗ ಶಿವನು ಪಾರ್ವತಿಯನ್ನು ಗೌರಿ ಎಂದು ಕರೆಯುತ್ತಾನೆ.
ಸಂಸ್ಕøತದಲ್ಲಿ ಗೌರಿ ಎಂದರೆ ಕಪ್ಪು ಎಂಬರ್ಥ. ಶಿವ ಗೌರಿ ಎಂದು ಕರೆದಿದ್ದರಿಂದ ಪಾರ್ವತಿ ಮುನಿಸಿಕೊಳ್ಳುತ್ತಾಳೆ. ಮುನಿಸಿಕೊಂಡ ಪಾರ್ವತಿಯನ್ನು ಓಲೈಸಲು ಪರಮೇಶ್ವರನು ಗೌರಿಗೆ ಗೌರಿ ಅಲ್ಲ. ಸ್ವರ್ಣಗೌರಿ ಎಂದು. ಸ್ವರ್ಣ ಎಂದರೆ ಚಿನ್ನ ಎಂದರ್ಥ.
ಗೌರಿಹಬ್ಬ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಈ ಹಬ್ಬವನ್ನು ಎಷ್ಟೇ ಬಡ ಕುಟುಂಬದವರಾದರೂ ಸಹ ಆಚರಿಸುವ ಮೂಲಕ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಬಾಗಿನ ಕೊಡುವ ಸಂಪ್ರದಾಯವಿದೆ.
ಇನ್ನೂ ಕೆಲವೆಡೆ ಗೌರಿ ಹಬ್ಬದಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆ, ಕಟ್ಟೆ, ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಗಾಮಾತೆಗೆ ಬಾಗಿನ ಅರ್ಪಿಸುವ ವಾಡಿಕೆ ಇದೆ.
ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮ, ಸಡಗರದಿಂದ ಗೌರಿ-ಗಣೇಶ ಹಬ್ಬ ದೇಶಾದ್ಯಂತ ಆಚರಣೆ ಮಾಡುತ್ತಾರೆ. ಇದು ಯಾವುದೇ ಭಾಷೆ, ಧರ್ಮ, ಜಾತಿ, ಪ್ರದೇಶ ಎಂಬ ಬೇಧವಿಲ್ಲದೆ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬವಾಗಿದೆ.
ಗೌರಿ ಪೂಜೆಯ ವಿ-ವಿಧಾನಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಗೌರಿಯನ್ನು ಮನೆಯಲ್ಲಿ ಕೂರಿಸುವುದರಿಂದ ಆ ಮನೆಯ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ವಿಗ್ರಹ ಪೂಜೆ – ಗೌರಿ ಹಬ್ಬ ಆಚರಣೆಗಳನ್ನು ವಿವಾಹಿತ ಮಹಿಳೆಯರು ಮಾಡುತ್ತಾರೆ. ಗೌರಿ ದೇವಿಯ ವಿಗ್ರಹವನ್ನು ಮಂಟಪದಲ್ಲಿ ಅಥವಾ ಧಾನ್ಯಗಳಿಂದ ತುಂಬಿದ ಪಾತ್ರೆಯ ಮೇಲೆ ಪ್ರತಿಷ್ಠಾಪಿಸಿ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಪ್ರಾರ್ಥನೆಗಳು ಆತ್ಮದ ಶುದ್ದಿ ಹಾಗೂ ಏಕಾಗ್ರತೆಗೆ ನೆರವಾಗುತ್ತದೆ ಎಂದು ನಂಬಲಾಗಿದೆ.