ಬಿಬಿಎಂಪಿಯ ಹೊಸ ಐಡಿಯಾ, ಸಸಿಗಳ ಸಂರಕ್ಷಣೆಗೂ ಜಿಪಿಎಸ್ ವ್ಯವಸ್ಥೆ

Social Share

ಬೆಂಗಳೂರು,ಜ.5- ಪದೆ ಪದೆ ಹೊಸ ಐಡಿಯಾಗಳಿಗೆ ಮುನ್ನುಡಿ ಬರೆದು ಅದರಲ್ಲಿ ಪ್ಲಾಪ್ ಆಗುವ ಬಿಬಿಎಂಪಿ ಇದೀಗ ಮತ್ತೊಂದು ಹೊಸ ಐಡಿಯಾಕ್ಕೆ ಮೊರೆ ಹೋಗಿದೆ. ಅದೆನೆಂದರೆ ನಗರದಲ್ಲಿ ನೆಟ್ಟಿರುವ ಸಸಿಗಳನ್ನು ಮಾನಿಟರ್ ಮಾಡಲು ಜಿಪಿಎಸ್ ಅಳವಡಿಸಲು ತೀರ್ಮಾನಿಸಿದೆಯಂತೆ.

ಪ್ರತಿ ವರ್ಷ ಲಕ್ಷ ಲಕ್ಷ ಸಸಿಗಳನ್ನು ನೆಡ್ತಿವಿ ಆದರೆ ನಂತರ ಹುಡುಕಿದರೆ ಒಂದು ಸಸಿಯೂ ಸಿಗಲ್ಲ. ಈ ವಿಚಾರದಲ್ಲಿ ನ್ಯಾಯಲಯದಿಂದ ಹಲವಾರು ಬಾರಿ ಛೀಮಾರಿ ಹಾಕಿಸಿಕೊಂಡಿರುವುದರಿಂದ ಸಸಿಗಳಿಗೆ ಇನ್ನುಂದೆ ಜಿಪಿಎಸ್ ಅಳವಡಿಸುವ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್ ತಿಳಿಸಿದ್ದಾರೆ.

ನಗರದ ಯಾವುದೆ ಪ್ರದೇಶದಲ್ಲಿ ನೆಡಲಾಗುವ ಸಸಿಗಳನ್ನು ಒಂದು ವರ್ಷದ ವರೆಗೂ ಜಿಪಿಎಸ್ ಮೂಲಕ ಮಾನಿಟರ್ ಮಾಡಲಾಗುವುದು ಸಸಿಯ ಆರೋಗ್ಯ ಅದರ ಬೆಳವಣಿಗೆಯನ್ನು ಪರಿಶೀಲಿಸಲು ಈಗಾಗಲೇ ನಿಲಿ ನಕ್ಷೆ ತಯಾರಿಸುವ ಕಾರ್ಯದಲ್ಲಿ ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗ ತೊಡಗಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ

ರಸ್ತೆ ಗುಂಡಿಗಳನ್ನ ಜಿಪಿಎಸ್ ಮೂಲಕ ಪತ್ತೆ ಹಚ್ಚಿ ಮುಚ್ಚುವ ಕೆಲ್ಸ ಪ್ರಗತಿಯಲ್ಲಿದೆ ಅದೇ ರೀತಿ ಸಸಿಗಳನ್ನು ಒಂದು ವರ್ಷದವರೆಗೆ ಮಾನಿಟರ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಏನೇನೋ ಹೊಸ ಐಡಿಯಾಗಳನ್ನು ಹುಡುಕುವ ಬಿಬಿಎಂಪಿ ಇದುವರೆಗೂ ಯಾವುದೇ ಕಾರ್ಯವನ್ನು ಸಮರ್ಪಕವಾಗಿ ಮಾಡಿಲ್ಲ. ಇದೀಗ ಸಸಿಗಳ ಸಂರಕ್ಷಣೆಗೂ ಜಿಪಿಎಸ್ ಮೊರೆ ಹೋಗುತ್ತಿದೆ. ಇದು ಯಾವ ರೀತಿ ಫಲಪ್ರದವಾಗುವುದೋ ಕಾದು ನೋಡಬೇಕಿದೆ.

Articles You Might Like

Share This Article