ಮುಳಬಾಗಿಲಿನಲ್ಲಿ ಇಂದು ಎಚ್‍ಡಿಕೆ ಗ್ರಾಮ ವಾಸ್ತವ್ಯ

Social Share

ಮುಳಬಾಗಿಲು, ನ.18- ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಸಂಜೆ 7 ಗಂಟೆಗೆ ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದು, ಗ್ರಾಮದ ರೈತ ಮಹಿಳೆಯರ ಜೊತೆ ಕುಂದು ಕೊರತೆಗಳ ಬಗ್ಗೆ ಸಮಾಲೋಚನೆಯನ್ನು ನಡೆಸಲಿದ್ದಾರೆ.

ಹೋಬಳಿ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಸಿದ್ದಗೊಳ್ಳುತ್ತಿರುವ ರೂಪುರೇಷೆಗಳನ್ನು ಪರಿಶೀಲಿಸಿ ಸಮೃದ್ಧಿ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಪಂಚರತ್ನ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಸಾಂಸ್ಕøತಿಕ ಕಾರ್ಯಕ್ರಮ, ಸಂವಾದ ಕಾರ್ಯಕ್ರಮ ನಡೆಯಲಿದ್ದು, ಸುಮಾರು 2 ಗಂಟೆ ಕಾಲ ಅವಕಾಶ ಕಲ್ಪಿಸಲಾಗಿದೆ. ವಿವಿಧ ಸಂಘಟನೆಗಳು ಹಾಗೂ ಇತರೆ ಅಹವಾಲು ನೀಡಲು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಭಾರತದ ಪ್ರಥಮ ಖಾಸಗಿ ರಾಕೆಟ್‌ನ್ನು ಯಶಸ್ವಿಯಾಗಿ ನಬಕ್ಕೆ ಸೇರಿಸಿದ ಇಸ್ರೋ

ರಾಜ್ಯದಲ್ಲಿ ನುಡಿದಂತೆ ನಡೆದಿರುವ ಮುಖ್ಯಮಂತ್ರಿ ಎಂದರೆ ಅದು ಕುಮಾರಣ್ಣ. ಸಂಪೂರ್ಣ ಅಧಿಕಾರ ಇಲ್ಲದೆ ಇದ್ದರೂ ಬೇರೆ ಪಕ್ಷದೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಿದ ಏಕೈಕ ವ್ಯಕ್ತಿ ಎಂದು ಬಣ್ಣಿಸಿದರು.

ಊರುಕುಂಟೆ ಗ್ರಾಮದ ಜನರೆಲ್ಲರೂ ಪಕ್ಷಭೇದ ಮರೆತು ಗ್ರಾಮದ ಸುತ್ತಮುತ್ತಲಿನ ಪಂಚಾಯತಿ ಸದಸ್ಯರು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರನ್ನು ಕುಂಭಮೇಳದೊಂದಿಗೆ ಸ್ವಾಗತಿಸಬೇಕು ಎಂದು ತಿಳಿಸಿದರು.

ಕೆಲಸ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಕಾಡೆನಹಳ್ಳಿ ನಾಗರಾಜ್ ಮಾತನಾಡಿ, ನಮ್ಮ ದೇಶದಲ್ಲಿ ಮೊಟ್ಟ ಮೊದಲಿಗೆ ಕರ್ನಾಟಕ ರಾಜ್ಯದಲ್ಲಿ ಗ್ರಾಮ ವಾಸ್ತವ್ಯವನ್ನು ಪ್ರಾರಂಭಿಸಿದ ೀಮಂತ ನಾಯಕ ಎಚ್ ಡಿ ಕುಮಾರಸ್ವಾಮಿ, ಅವರು ಎರಡು ಬಾರಿ ಅಲ್ಪಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದರೂ ನಾಡಿನ ಹಾಗೂ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿದ ಏಕೈಕ ವ್ಯಕ್ತಿ ಎಂದರು.

ರಾಜ್ಯದಲ್ಲಿರುವ ರೈತರ ಹಾಗೂ ಗ್ರಾಮೀಣ ಭಾಗದ ವ್ಯಕ್ತಿಗಳಿಗೆ ನ್ಯಾಯ ದೊರಕಿಸಲು ಅನುಕೂಲವಾಗುವಂತೆ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ದೇವೇಗೌಡರು-ಮಾಧುಸ್ವಾಮಿ ಭೇಟಿ

ಕಾರ್ಯದರ್ಶಿ ನಲ್ಲೂರು ರಘುಪತಿ ರೆಡ್ಡಿ, ವಕ್ತಾರ ಹಾಗೂ ವಕೀಲ ಎಂ.ಎಸ್ ಶ್ರೀನಿವಾಸರೆಡ್ಡಿ, ಎಪಿಎಂಸಿ ಮಾಜಿ ಸದಸ್ಯ ಆವಣಿ ಬಾಬು ಗ್ರಾಮದ ಮುಖಂಡರಾದ ಮುನಿಆಂಜೇಗೌಡ, ರಮೇಶ್, ಪ್ರಕಾಶ್ ಹಾಗೂ ಗ್ರಾಮಸ್ಥರಿದ್ದರು.

gramavastavya, #HDKumaraswamy, #Mulbagal, #JDS,

Articles You Might Like

Share This Article